ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಯ್ಕುಗಳು

Last Updated 16 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮೊಲೆ ಹಾಲಿನ ಹೊಳೆ
ತೇಲುತ್ತಿದೆ
ಶತಮಾನಗಳ ತೊಟ್ಟಿಲು

ಈ ಎಲೆಗೆ
ಮುಟ್ಟುವ ತವಕ
ಎಂದೂ ಕಾಣದ ಬೇರು

ನದಿಯಲ್ಲಿ ಒಂದು
ಲಂಟಾನದ ಹೂ
ಹಿಂಬಾಲಿಸಿವೆ ಮಲ್ಲಿಗೆಯ ಕಂಪು

ಒಂದು ಹೂವು ನನ್ನನ್ನು
ಕಿತ್ತು ಹಾಕಿತು
ಎಲೆಯೊಂದು ಎತ್ತಿಕೊಂಡಿತು

ಹಿಂಬಾಲಿಸಿ ಬರುತ್ತಿದೆ
ಅದೆಲ್ಲಿಂದ?
ಒಂದು ಮಂದಹಾಸ

ಈ ಬಾಗಿದ ಸಂಜೆಗೆಂಪು
ವಿಷಾದದ ಕಿರಣ ಎದೆ ಸೇರುತ್ತದೆ
ಮೌನ

ಹೆಕ್ಕಿ ತಂದ
ಪ್ರೀತಿಯ ಕಣ ಕಣ
ಈ ಮಗು

ಹನಿ ನೀರು
ಹಸಿರು ಗರಿಕೆಯ ನಡುವೆ
ಏನನ್ನೂ ಬಯಸಿದ ಮರಳ ಕಣ

ಎಲ್ಲ ಋತುಗಳು
ಮಾತು ಕೇಳುತ್ತಿವೆ
ಈ ದಿನದ ಹೊರತಾಗಿ
ತಿಳಿಗೊಳದಲ್ಲಿ
ಬೆರಳಾಡಿಸಿದೆ
ಮನ ಕದಡಿತು

ಕಚಗುಳಿಯ ಕಾಡು ಮುಂಜಾವು
ರೆಕ್ಕೆ ಬಿಚ್ಚಿ ಚಿಮ್ಮಿದ ಹಕ್ಕಿ
ರೆಕ್ಕೆ ಮುಚ್ಚಿ ಜಾರುತ್ತಿದೆ

ಮಗುವಿನ ಮುಖದಲ್ಲಿ
ತಿಳಿ ಮಂದಹಾಸ
ನೀರೆರೆಯಬೇಕು

ಅರಳಿಯ ಬುಡದಲ್ಲಿ
ಮಿತ್ರನ ಜೊತೆ ತತ್ವಶಾಸ್ತ್ರ
ಚಿಟ್ಟೆ ಹಾರುತ್ತಿದೆ

ಪರೀಕ್ಷೆ ನಡೆಯುತ್ತಿದೆ
ಕಿಟಕಿಯಲ್ಲಿ
ಬೆಳೆದು ನಿಂತ ಮರ

ಪುಟ್ಟ ಮಗು ಉಸುರಿತು
ಶ್! ಸುಮ್ಮನಿರಿ
ಇರುವೆಗೆ ನಿದ್ದೆ

ಎಲೆಯಿಂದ ಎಲೆಗೆ
ಜಾರಿದ ಮಳೆ ಹನಿ
ಬೇರಿಗೆ ವಿಷಯ ಮುಟ್ಟಿಸಿತು

ಹಾರಿ ಬಂದಿದೆ ಕಾರಿನಲ್ಲಿ
ಅರಳಿ ಎಲೆ
ದಾರಿ ತೋರಿಸಬಹುದು

ಪುಟ್ಟ ತಲೆ ಬಾಗಿಲು
ಕಾಲ ಬಾಗುತ್ತದೆ
ದಾಸವಾಳದ ಹೂಗಳು ಹೊರಬರುತ್ತವೆ

ಹರಿದಾಡುವ
ಮಣ್ಣು
ಎರೆ ಹುಳು

ಮೊರದಲ್ಲಿಟ್ಟು ತೂರುತ್ತಿದ್ದಾಳೆ
ಮಾತು
ಹಾರಿ ಹೋಗುತ್ತಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT