ಮನೆ ಮಂದಿ ಎಲ್ಲರೂ ಕುಳಿತು ನೋಡಬಹುದಾದ ಸದಭಿರುಚಿಯ ಸಾಮಾಜಿಕ ಚಿತ್ರಗಳ ಮೂಲಕ ಲೋಕಪ್ರಿಯರಾದವರು ಡಾ. ರಾಜಕುಮಾರ್. ಅವರ ಚಿತ್ರಗಳು ಯುವಕರಿಗೆ ಪ್ರೇರಣೆಯಾಗಿ, ಹಿರಿಯರು, ಮಕ್ಕಳು, ಮಹಿಳೆಯರಿಗೆ ಆಪ್ತವಾದವು. ಎಲ್ಲಾ ಜಾತಿ, ವರ್ಗಗಳ ಬಡವರ ಪರವಾದ ಆಶಯಗಳನ್ನು ಒಳಗೊಂಡ ಕಥೆಯುಳ್ಳ ಅವರ ಚಿತ್ರಗಳು ಅಂದಿನವರಿಗೆ ಮಾತ್ರವಲ್ಲ, ಇಂದಿನ ಕಿರಿಯರಲ್ಲೂ ಬದುಕಿನ ಕುರಿತು ಪ್ರೇರಣೆ ಮೂಡಿಸುತ್ತಿರುವುದು ಅಷ್ಟೇ ಸತ್ಯ.

ಇದೇ ವಸ್ತುವನ್ನು ಆಧರಿಸಿದ ಸಂಶೋಧನಾ ಪ್ರಬಂಧ ‘ಬಡವರ ರಾಜಕುಮಾರ’ ಕೃತಿ. ಪತ್ರಕರ್ತರೂ ಆಗಿರುವ ಮಂಜುನಾಥ ಅದ್ದೆ ಅವರು ಡಿ.ಲಿಟ್.ಗಾಗಿ ಬರೆದ ಕೃತಿ ಇದು.

ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಗಳು ರೂಪಿಸಿದ ಸಂಪತ್ತಿನ ಕ್ರೋಡೀಕರಣ ಮತ್ತು ಅದರ ಪರಿಣಾಮಗಳನ್ನು ಆಧಾರವಾಗಿಟ್ಟುಕೊಂಡು ಡಾ. ರಾಜಕುಮಾರ್ ಅವರ ಸಂಪತ್ತಿಗೆ ಸವಾಲ್ ಸಿನಿಮಾವನ್ನು ಲೇಖಕರು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ. ಶ್ರಮಿಕ ವರ್ಗ ವಿಧೇಯರಾಗಿರಬೇಕು ಎಂಬುದನ್ನು ‘ಭದ್ರ’ ಎಂಬ ಸಿಡಿಗುಂಡಿನ ಯುವಕನ ಪಾತ್ರದ ಮೂಲಕ ಅಳಿಸಿಹಾಕಿ, ದುಡಿಯುವ ಜನರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದವರು ಅವರು ಎಂದು ಲೇಖಕರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ, ಕ್ರಾಂತಿ ಹೀಗೆ ಎಲ್ಲಾ ಬಗೆಯ ಪಾತ್ರಗಳಲ್ಲೂ ರಾಜಕುಮಾರ್ ಅವರು ಅಭಿನಯಿಸಿದ್ದಾರೆ. ಪ್ರತಿ ಸಿನಿಮಾಗಳಲ್ಲೂ ನಿರ್ಲಕ್ಷಿತ ಸಮುದಾಯ, ವರ್ಗ, ಜಾತಿಗಳಿಗೆ ಸೇರಿದ ಪಾತ್ರಗಳಿಗೆ ಜೀವ ತುಂಬುವ ಮೂಲಕ ಬಹುಸಂಖ್ಯಾತ ನಿರ್ಲಕ್ಷಿತ ಜಾತಿ ಮತ್ತು ವರ್ಗಗಳ ಜನರಿಗೆ ನಾಯಕರಂತೆ ಕಂಡಿದ್ದಾರೆ. ಯಾವುದೇ ಆಲೋಚನಾ ಪ್ರೇರಿತ ಉದ್ದೇಶವಿಲ್ಲದೆ ಕೇವಲ ತಮ್ಮ ಕಸುಬು ಮತ್ತು ತಾನಿರುವ ಕ್ರಮದ ಮೂಲಕವೇ ಜಾತಿ, ವರ್ಗಗಳನ್ನು ಮೀರಿ ನಾಯಕರಾದವರು ಡಾ. ರಾಜಕುಮಾರ್.

ಡಾ. ರಾಜಕುಮಾರ್ ಅವರ ಅಧ್ಯಯನದಲ್ಲಿ ಕರ್ನಾಟಕದಲ್ಲಿ ಪ್ರಜಾತಂತ್ರ ಹಿನ್ನೆಲೆ, ಸಾಂಸ್ಕೃತಿಕ ನಾಯಕತ್ವ, ಸ್ವಾತಂತ್ರ್ಯಾನಂತರದ ಕರ್ನಾಟಕ ಮತ್ತು ಪ್ರಜಾತಂತ್ರದ ಸವಾಲುಗಳು, ಜನಭಾಷೆಯಾಗಿ ಚಲನಚಿತ್ರ, ಕರ್ನಾಟಕದ ಚಳವಳಿಗಳು ಮತ್ತು ರಾಜಕುಮಾರ್ ಹೀಗೆ ಹಲವು ಆಯಾಮಗಳಲ್ಲಿ ಲೇಖಕ ಮಂಜುನಾಥ ಅದ್ದೆ ಅವರು ಸಂಶೋಧಿಸಿ, ಇಲ್ಲಿ ದಾಖಲಿಸಿದ್ದಾರೆ.

ಲೇ: ಮಂಜುನಾಥ ಅದ್ದೆ

ಪ್ರ: ಕೌದಿ ಪ್ರಕಾಶನ

ಸಂ: 90086 60371

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.