ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ಯೂರೋಪ್‌ ದರ್ಶನ ಮಾಡಿಸುವ ಕೃತಿ– ಬಾನಾಡಿ ಕಂಡ ಬೆಡಗು

Published 7 ಅಕ್ಟೋಬರ್ 2023, 23:35 IST
Last Updated 7 ಅಕ್ಟೋಬರ್ 2023, 23:35 IST
ಅಕ್ಷರ ಗಾತ್ರ

ಲೇಖಕಿ ಉಮಾದೇವಿ ಉರಾಳ ಅವರ ಯೂರೋಪ್‌, ಚೀನಾ, ಸ್ಕಾಂಡಿನೇವಿಯಾ, ಈಶಾನ್ಯ ಭಾರತದ ಪ್ರವಾಸ ಕಥನದ ಗುಚ್ಛವೆ ‘ಬಾನಾಡಿ ಕಂಡ ಬೆಡಗು’. ಈ ಸ್ಥಳಗಳಿಗೆ ಪ್ರವಾಸ ಹೋಗಲು ಬಯಸುವ ಪ್ರವಾಸಿಗರಿಗೆ ಕೈಪಿಡಿಯಂತಿರುವ ಕೃತಿ, ಲೇಖಕಿಯ ಅನನ್ಯ ಅನುಭವಗಳ ಮೂಟೆಯೂ ಹೌದು. ಒಟ್ಟು 19 ಲೇಖನಗಳು ಈ ಪುಸ್ತಕದಲ್ಲಿದೆ. ಇಂಗ್ಲೆಂಡಿನ ರಾಜಧಾನಿ ಲಂಡನ್ನಿನ ಪ್ರವಾಸ ಲೇಖನದೊಂದಿಗೆ ಕೃತಿ ಪ್ರಾರಂಭವಾಗುತ್ತದೆ. ಪ್ಯಾರಿಸ್‌, ಬ್ರಸೆಲ್ಸ್‌, ಹಾಲೆಂಡ್‌, ಜರ್ಮನಿ, ಸ್ವಿಟ್ವರ್ಲೆಂಡ್‌ ಮೊದಲಾದ ದೇಶಗಳ ಬದುಕು, ಬವಣೆಯನ್ನು ಕಟ್ಟಿಕೊಡುತ್ತ ಸೊಬಗನ್ನು ವರ್ಣಿಸುತ್ತದೆ. 

‘ಉಮಾದೇವಿಯವರು ಈ ಕೃತಿಯಲ್ಲಿ ನಾಲ್ಕು ಹಂತದ ತಮ್ಮ ಪ್ರವಾಸವನ್ನು ಮುಂದಿಡುತ್ತಾರೆ. ಯುನೈಟೆಡ್‌ ಕಿಂಗ್‌ಡಂ ಮತ್ತು ಮಧ್ಯ ಯೂರೋಪಿನ ಪ್ರವಾಸ, ಸ್ಕಾಂಡಿನೇವಿಯಾ ಪ್ರವಾಸ, ಚೀನಾ ಪ್ರವಾಸ ಮತ್ತು ಕೊನೆಯದೆಂಬಂತೆ ನಮ್ಮದೇ ಆದ ಸಪ್ತ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ಮಿಜೋರಾಂ,ನಾಗಾಲ್ಯಾಂಡ್‌, ತ್ರಿಪುರ,ಮಣಿಪುರ, ಅರುಣಾಚಲ ಪ್ರದೇಶ ಹಾಗೂ ಕೊನೆಯದಾಗಿ ಮಯನ್ಮಾರಿನ ತಮು ಇವುಗಳ ಪರಿಚಯ ಮಾಡಿಕೊಡುತ್ತಾರೆ. ಈಶಾನ್ಯ ರಾಜ್ಯಗಳ ಪರಿಚಯವನ್ನು ‘ಸಪ್ತ ಸೋದರಿಯರ ಮಡಿಲಲ್ಲಿ’ ಎಂದು ಕರೆದು ಪರಿಚಯ ಮಾಡಿಕೊಡುವುದು ಅರ್ಥಪೂರ್ಣ ಎನಿಸುತ್ತದೆ’ ಎಂದು ನಾ.ಡಿಸೋಜ ಕೃತಿಯ ಮುನ್ನಡಿಯಲ್ಲಿ ಬರೆದಿದ್ದಾರೆ.

ಕೃತಿಯಲ್ಲಿ ಲೇಖಕಿ ಸ್ಥಳದ ಜೊತೆಗೆ ಅವುಗಳ ಇತಿಹಾಸ, ಅಲ್ಲಿನ ಸಂಸ್ಕೃತಿಯನ್ನು ಪರಿಚಯಿಸುವ ಯತ್ನ ಮಾಡುತ್ತಾರೆ. ಆ ದೇಶಗಳ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುತ್ತಾರೆ. ‘ನೆರೆಯ ಚೀನಾ ನೆಲದಲ್ಲಿ’ ಲೇಖನ ಚೀನಾ ದೇಶದ ಕುರಿತಾಗಿ ಸಾಕಷ್ಟು ವಿವರವನ್ನು ಒದಗಿಸುತ್ತದೆ. ಇಡೀ ಕೃತಿಯಲ್ಲಿ ಪ್ರವಾಸದ ಜೊತೆಗೆ ಅಲ್ಲಿನ ಬದುಕನ್ನು ಬೆಸೆಯುತ್ತ, ತಮಗಾದ ಅನುಭವಗಳನ್ನು ಹೇಳುತ್ತ ಓದನ್ನು ಸುಲಭವಾಗಿಸಿದ್ದಾರೆ.

ಬಾನಾಡಿ ಕಂಡ ಬೆಡಗು

ಲೇ: ಕೆ.ಆರ್‌.ಉಮಾದೇವಿ ಉರಾಳ

ಪ್ರ: ಫೀನಿಕ್ಸ ಬುಕ್‌ ಹೌಸ್‌ ಮೈಸೂರು

ಸಂ: 9480113111

ಪು: 268

ಬೆ:270

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT