ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಮಹಾಚಲನೆ: ಬಂಜಾರ ಸಮುದಾಯದ ವರ್ಣಮಯ ಚಿತ್ರಣ

Published 30 ಡಿಸೆಂಬರ್ 2023, 23:30 IST
Last Updated 30 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ವರ್ಣಮಯ ಚಿತ್ರಗಳೊಂದಿಗೆ ಬಂಜಾರರ ಜೀವನಗಾಥೆಯನ್ನು ಪರಿಚಯಿಸುವ ಪ್ರಯತ್ನವೇ ‘ಮಹಾಚಲನೆ’ ಕೃತಿ. 130 ಜಿಎಸ್‌ಎಂ ಆರ್ಟ್‌ ಕಾಗದದಲ್ಲಿ ಕೃತಿಯನ್ನು ಮುದ್ರಿಸಿರುವುದು, ಬಂಜಾರರ ಸೊಗಡು–ಸಂಸ್ಕೃತಿಯನ್ನು  ಚಿತ್ರಗಳೊಂದಿಗೆ ಕಟ್ಟಿಕೊಟ್ಟಿರುವುದು ಇಡೀ ಕೃತಿಯ ಅಂದವನ್ನು ಹೆಚ್ಚಿಸಿದೆ. ಬಿ.ಡಿ.ಎ.ದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಡಿ.ರಾಮಾನಾಯಕ್‌ ಈ ಕೃತಿಯ ಕರ್ತೃ.

300 ಪುಟಗಳ ಕೃತಿಯಲ್ಲಿ ಅರ್ಧದಷ್ಟು ಜಾಗವನ್ನು ಬಂಜಾರರ ಸಂಸ್ಕೃತಿ, ಆಚರಣೆ, ಉಡುಪುಗಳನ್ನು ಪ್ರತಿಬಿಂಬಿಸುವ ಚಿತ್ರಗಳಿಗೆ ನೀಡಲಾಗಿದೆ. ಲೇಖಕರು ಅದರ ಜೊತೆಜೊತೆಗೆ ಇತಿಹಾಸವನ್ನು ವಿವರಿಸುತ್ತ ಹೋಗುತ್ತಾರೆ. ‘ನಾನು ಬಂಜಾರ. ನಾವು ಸಂಚಾರಿಗಳು. ಅಲೆಮಾರಿಗಳು’ ಎಂದು ಕೃತಿಯ ಪ್ರಾರಂಭದಲ್ಲಿಯೇ ಹೇಳುವ ಲೇಖಕರು ದೇಶ, ವಿದೇಶಗಳಲ್ಲಿನ ತಮ್ಮ ಸಮುದಾಯದ ಜನರನ್ನು ಹುಡುಕಿಕೊಂಡು ಹೋಗಿದ್ದಾರೆ. ಭಾರತದಿಂದ ವಲಸೆ ಹೋದ ‘ರೋಮಾ’ ಸಮುದಾಯದ ಕುರಿತು ಕೃತಿಯಲ್ಲಿ ದಾಖಲಿಸಿರುವುದು ಕೃತಿಯ ಹಿಂದಿನ ಸಂಶೋಧನೆ–ಅಧ್ಯಯನಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಇತಿಹಾಸ, ಸಮುದಾಯದಿಂದ ಹಿಡಿದು ತಮ್ಮ ಸಮುದಾಯದ ಸಾಧಕರವರೆಗೆ ಬಂಜಾರ ಸಮುದಾಯದ ಸಮಗ್ರ ಚಿತ್ರಣವನ್ನು ಸಂಕ್ಷಿಪ್ತ ರೂಪದಲ್ಲಿ ಕಟ್ಟಿಕೊಡುವ ಯತ್ನವನ್ನು ಕೃತಿ ಮಾಡುತ್ತದೆ. ಪ್ರತಿ ಸಮುದಾಯವೂ ಇಂಥದ್ದೊಂದು ಕೃತಿಯನ್ನು ಹೊಂದಿರಬೇಕೆನ್ನಿಸುವಷ್ಟು ಸೊಗಸಾದ ಹೊತ್ತಿಗೆಯಿದು.

ಮಹಾಚಲನೆ

ಲೇ: ಡಿ.ರಾಮಾನಾಯಕ್‌

ಪ್ರ: ಐಬ್ರೊ ಪ್ರಕಾಶನ

ಸಂ: 8884478800

ಬೆ: 1800

ಪು: 304

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT