ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ನೇಪಾಳೀ ಕತೆಗಳ ಗುಚ್ಛ ಕನ್ನಡದಲ್ಲಿ

Published 30 ಡಿಸೆಂಬರ್ 2023, 23:30 IST
Last Updated 30 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಭಾರತೀಯ ಸಾಹಿತ್ಯ ನಕಾಶೆಯಲ್ಲಿ ನೇಪಾಳೀ ಕತೆಗಾರರೂ ಛಾಪು ಮೂಡಿಸುತ್ತಿದ್ದಾರೆ. ಕೋಲ್ಕತ್ತ ಸುತ್ತಮುತ್ತಲಿನ ಡಾರ್ಜಿಲಿಂಗ್, ಡೆಹರಾಡೂನ್ ತರಹದ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಅನೇಕರಲ್ಲಿ ನೇಪಾಳೀ ಭಾಷಿಕರಿದ್ದಾರೆ. 1821ರಿಂದ ಇದುವರೆಗೆ ನೇಪಾಳೀ ಕತೆಗಳ ಜಾಡು, ಜಾಯಮಾನ ಎರಡೂ ಬದಲಾಗುತ್ತಾ ಬಂದಿದೆ. ಅನುವಾದ ಕಮ್ಮಟವೊಂದರಲ್ಲಿ ಪ್ರತಿಭಾವಂತರ ಆಯ್ದ ನೇಪಾಳೀ ಕತೆಗಳನ್ನು ಹಿಂದಿಗೆ ಅನುವಾದಿಸಲಾಗಿತ್ತು. ದುರ್ಗಾ ಪ್ರಸಾದ್ ಶ್ರೇಷ್ಠ ಅವರು ಅವುಗಳನ್ನು ಆಧರಿಸಿದ ಕೃತಿ ಸಂಪಾದಿಸಿದ್ದರು. ಆ ಕತೆಗಳ ಗುಚ್ಛವನ್ನು ಆರ್. ಲಕ್ಷ್ಮೀನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನಂದ ಹಾಂಗಖಿಮ್, ಎಂ.ಎಂ. ಗುರುಂಗ್, ಪರಶುರಾಮ ರೋಕಾ, ಹರಿಪ್ರಸಾದ್ ಗೋರ್ಖಾರಾಈ – ಹೀಗೆ ನೇಪಾಳೀ ಭಾಷೆಯಲ್ಲಿ ಬರೆದ ಭಿನ್ನ ಸಂವೇದನೆಯವರು ಹಲವರು. ಅಂತಹ 20 ಕತೆಗಳು ಈ ಸಂಕಲನದಲ್ಲಿ ಇವೆ. ಒಂದೊಂದೂ ಕತೆ ಸಂವೇದನೆಯ ದೃಷ್ಟಿಯಿಂದ ಮನುಷ್ಯ ಸಂಬಂಧಗಳ ಬೇರೆ ಬೇರೆ ಮನೋಲೋಕಗಳನ್ನು ತೆರೆದಿಡುತ್ತದೆ.

‘ಕಡುಬಡವರ, ಕೂಲಿ ಕುಂಬಳಿಯವರ ಬದುಕಿನ ಹಲವು ಮುಖಗಳು, ಸಮಸ್ಯೆಗಳು ತನಗೆ ತಾನೇ ಇಲ್ಲಿಯ ಕತೆಗಳಲ್ಲಿ ತೆರೆದುಕೊಳ್ಳುತ್ತಾ ಹೋಗಿವೆ’ ಎಂದು ಆರ್. ಲಕ್ಷ್ಮೀನಾರಾಯಣ ತಮ್ಮ ‘ಅನುವಾದಕನ ಅರಿಕೆ’ಯಲ್ಲಿ ಉಲ್ಲೇಖಿಸಿದ್ದಾರೆ.

ಕೃತಿ: ಪ್ರಾತಿನಿಧಿಕ ನೇಪಾಳೀ ಕಥೆಗಳು ‌

ಲೇ: ಸಂ: ದುರ್ಗಾಪ್ರಸಾಧ್ ಶ್ರೇಷ್ಠ

ಅ: ಆರ್. ಲಕ್ಷ್ಮೀನಾರಾಯಣ

ಪ್ರ: ಸಾಹಿತ್ಯ ಅಕಾದೆಮಿ

ಪು: 190

ದ: ₹ 320

ಸಂ: 080–22245152

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT