ಖಗೋಲ ತಜ್ಞರು, ಖಭೌತ ತಜ್ಞರು ಎಲ್ಲರ ಲೇಖನಗಳನ್ನು ಒಟ್ಟುಗೂಡಿಸಿದ ಸಚಿತ್ರ ಪುಸ್ತಕ ಇದಾಗಿದೆ. ಚಿಣ್ಣರಿಂದ ಆರಂಭಿಸಿ, ಆಕಾಶ, ತಾರೆ, ಆಕಾಶ ಕಾಯಗಳ ಬಗೆಗಿನ ಕುತೂಹಲ ಇರುವವರಿಗೆ ಇದು ರಸದೌತಣವಾಗಿದೆ. ಆಸಕ್ತಿ ಇರದಿದ್ದಲ್ಲಿ ಆಸಕ್ತಿ ಹುಟ್ಟಿಸುವಂಥ ಹಲವಾರು ಅಂಶಗಳು ಈ ಪುಸ್ತಕದಲ್ಲಿವೆ. ನೆತ್ತಿ ಎತ್ತಿದರೆ ಸಾಕು, ಸೋಜಿಗದ ಹರವು ವಿಸ್ತಾರವಾಗುತ್ತ ಹೋಗುತ್ತದೆ. ಈ ಕಾಯಗಳ ನಡುವಿನ ದೂರ ಏನು? ಗುಣಲಕ್ಷಣಗಳು ಏನು? ತಾರೆ ಮತ್ತು ಗ್ರಹಗಳ ನಡುವಿನ ವ್ಯತ್ಯಾಸ ಹೇಗೆ ಕಂಡು ಹಿಡಿಯಬಹುದು? ನಿಮ್ಮ ಅಂಗೈ ಎತ್ತಿ ಹಿಡಿದು ಮುಂಗೈ ನೋಡುತ್ತ, ಬೆರಳುಗಳ ಸಹಾಯದಿಂದ ದಿಕ್ಕು ಕಂಡು ಹಿಡಿಯುವುದು ಹೇಗೆ ಎಂಬ ವಿಷಯಗಳಿಂದ ಈಗ ನವತಂತ್ರಜ್ಞಾನದ ಬಳಕೆ ಹೇಗೆ ಎಂಬುದನ್ನೂ ವಿವರಿಸಿ ಹೇಳುತ್ತದೆ.

ತಜ್ಞರು ಸರಳ ಕನ್ನಡದಲ್ಲಿ, ವಿವರಗಳನ್ನು ಚಿತ್ರಗಳ ಮೂಲಕ, ಅಗತ್ಯವಿದ್ದಲ್ಲಿ ಡಯಾಗ್ರಾಮುಗಳಲ್ಲಿ ವಿವರಿಸುತ್ತ ಹೋಗುವುದರಿಂದ ಯಾವ ವಯೋಮಾನದವರೂ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಖಗೋಳವನ್ನು ಭೂಗೋಳದಷ್ಟೇ ಸರಳವಾಗಿ ವಿವರಿಸಿರುವುದರಿಂದ ಈ ಪುಸ್ತಕ ಎಲ್ಲ ಶಾಲಾ ಗ್ರಂಥಾಲಯದಲ್ಲಿಡಬಹುದಾದ ಕೃತಿಯಾಗಿದೆ. ಅಪರೂಪವೆನಿಸುವ ಸೌರ ಮಾರುತ, ಪರಿಣಾಮ ಎಲ್ಲವನ್ನೂ ಚಿತ್ರಗಳ ಮೂಲಕವೇ ವಿವರಿಸಲಾಗಿದೆ. ಖಗೋಳ ಲೋಕದ ವಿಸ್ಮಯಗಳನ್ನೂ, ವಿಷಯಗಳನ್ನೂ ಯಾರಾದರೂ ಸರಳವಾಗಿ ಅರ್ಥ ಮಾಡಿಕೊಳ್ಳುವಂತೆ ವಿವರಿಸಲಾಗಿದೆ. ಗುರುತ್ವ, ಗಣಿತ, ಆಕಾಶ ಗಂಗೆ, ಆಗಸದ ಬಣ್ಣಗಳು, ಗಗನಯಾನ, ಗಗನಯಾನಿಗಳು ಮುಂತಾದವೆಲ್ಲವೂ ಸಮಗ್ರ ಚಿತ್ರಣವನ್ನು ನೀಡುತ್ತಲೇ ಇನ್ನೂ ಅರಿಯಬೇಕು ಎಂಬ ಹಸಿವನ್ನೂ ಹುಟ್ಟಿಸುವಂಥ ಪುಸ್ತಕವಾಗಿದೆ.

ಪುಸ್ತಕದ ಹೆಸರು: ಅಂತರಿಕ್ಷಕ್ಕೆ ಹಂತಹಂತದ ಮೆಟ್ಟಿಲು ಖಗೋಳ ದರ್ಶನ

ಸಂಪಾದಕರು: ಡಾ. ಬಿ.ಎಸ್. ಶೈಲಜಾ

ಪ್ರಕಾಶಕರು: ನವಕರ್ನಾಟಕ ಪ್ರಕಾಶನ

ಪುಟಗಳು: 472 ಬೆಲೆ:₹ 1950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.