ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸಮಾಜವಾದದ ಸಹ್ಯಾದ್ರಿಗೊಂದು ಚಾರಣ

Published 23 ಏಪ್ರಿಲ್ 2023, 1:37 IST
Last Updated 23 ಏಪ್ರಿಲ್ 2023, 1:37 IST
ಅಕ್ಷರ ಗಾತ್ರ

ಸಮಾಜವಾದಿ ನಾಯಕ, ಉಳುವವನೇ ಹೊಲದೊಡೆಯ ಎಂಬ ಕಾನೂನು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮುತ್ಸದ್ದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಕುರಿತ ಲೇಖನಗಳ ಗುಚ್ಛವೇ ಈ ಕೃತಿ. 

ಗೋಪಾಲಗೌಡರ ಜನ್ಮಶತಮಾನೋತ್ಸವದ ಸಂದರ್ಭದಲ್ಲೇ ಈ ಕೃತಿ ಮೂಡಿಬಂದಿದೆ. ಮೂರು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿ, 49ರ ವಯಸ್ಸಿನಲ್ಲೇ ಅನಾರೋಗ್ಯದ ಕಾರಣ ನಿಧನರಾದ ಅವರ ಬದುಕನ್ನು ಅಕ್ಷರ ರೂಪದಲ್ಲಿ ಇಲ್ಲಿ ಕಟ್ಟಿಕೊಡಲಾಗಿದೆ. ರಾಜ್ಯದಲ್ಲಿ ಪ್ರಸ್ತುತ ಇರುವ ಚುನಾವಣೆಯ ಬಿಸಿಯ ನಡುವೆ, ಗೋಪಾಲಗೌಡರ ಹೋರಾಟದ ದಾರಿಗಳನ್ನು ಮೆಲುಕು ಹಾಕುತ್ತಾ ರಾಜಕಾರಣಿ ಎಂದರೆ ಹೀಗಿರಬೇಕು ಎಂಬ ಭಾವನೆ ಮೂಡಿಸುತ್ತಲೇ ಈ ಕೃತಿ ಸಾಗುತ್ತದೆ.

ನ್ಯಾ.ಎಚ್‌.ಎನ್‌.ನಾಗಮೋಹನ ದಾಸ್‌, ಎಚ್‌.ಎಲ್‌.ಪುಷ್ಪ, ನಟರಾಜ್‌ ಹುಳಿಯಾರ್‌, ಬಂಜಗೆರೆ ಜಯಪ್ರಕಾಶ್‌, ಜಿ.ವಿ.ಆನಂದಮೂರ್ತಿ, ನಾ.ಡಿಸೋಜ ಹೀಗೆ ಪ್ರಮುಖರು ಇಲ್ಲಿ ಗೋಪಾಲಗೌಡರ ಹೆಜ್ಜೆಗಳನ್ನು ದಾಖಲಿಸಿದ್ದಾರೆ. ಕೃತಿಯ ಆರಂಭದಲ್ಲೇ ಕುವೆಂಪು, ಕಡಿದಾಳ್‌ ಮಂಜಪ್ಪ, ಎಸ್‌.ನಿಜಲಿಂಗಪ್ಪ, ಡಿ.ದೇವರಾಜ ಅರಸು, ಎಚ್‌.ಡಿ.ದೇವೇಗೌಡ ಹೀಗೆ ಪ್ರಮುಖ ರಾಜಕಾರಣಿಗಳು, ಸಾಹಿತಿಗಳು ಗೌಡರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

ಕೃತಿ: ಸಮಾಜವಾದದ ಸಹ್ಯಾದ್ರಿ

ಸಂ: ಕಿಗ್ಗಾ ರಾಜಶೇಖರ್‌ ಎಸ್‌.ಜಿ. 

ಪ್ರ: ಜನ ಪ್ರಕಾಶನ, ಬೆಂಗಳೂರು 

ಸಂ: 9632329955

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT