ಬೆಳಗಾಗುತ್ತದೆಂದರೆ....

ಬೆಳಗಾಗುತ್ತದೆಂದರೆ ಭಯ
ಹೊದ್ದ ಚಾದರದ ಹರುಕು
ಬಣ್ಣ ಕಾಣದ ಗೋಡೆಯ ಬಿರುಕು
ಬಟ್ಟಾ ಬಯಲಾಗುವ ಅಪಾಯ !

ಬೆಳಗಾಗುತ್ತದೆಂದರೆ ದಿಗಿಲು
ಕಾರ್ಮೋಡದ ಮುಗಿಲು
ಹೂತು ಹೋಗುವ ನೇಗಿಲು
ವರ್ಷಧಾರೆಯಲಿ ಕೊಚ್ಚಿಹೋಗುವ ಹಗಲು !

ಬೆಳಗಾಗುತ್ತದೆಂದರೆ ಒದ್ದಾಟ
ಸಾಲು ಕೊಡೆಗಳ ಮರೆಯಲ್ಲಿ
ಧೋ ಎಂದು ಸುರಿವ ಮಳೆಯಲ್ಲಿ
ಪರಿಚಿತ ಮುಖಗಳ ಹುಡುಕುವ ಪೇಚಾಟ !

ಬೆಳಗಾಗುತ್ತದೆಂದರೆ ತಳಮಳ
ಸುಕ್ಕುಗಟ್ಟಿದ ನೆರಿಗೆ
ಬಾಡಿ ಬಿದ್ದ ಮಲ್ಲಿಗೆ
ಪ್ರೀತಿ ಕಳೆದುಹೋಗುವ ಕಳವಳ !

ಬೆಳಗಾಗುತ್ತದೆಂದರೆ ಕಾತರ
ಹೊಸಮುಖದ ಕಾವು
ಹಳೇ ಬಾವಿನ ನೋವು
ಕತ್ತಲಿಗೋಡುವ ಆತುರ !

ಬೆಳಗಾಗುತ್ತದೆಂದರೆ ತುಮುಲ
ರಾತ್ರಿ ಕಟ್ಟಿದ ಕನಸುಗಳು
ಗೂಡಲ್ಲಿ ಬೆಚ್ಚಗಿದ್ದ ಹಕ್ಕಿಗಳು
ನಸುಕಿಗೇ ಹಾರಿಹೋಗುವ ವ್ಯಾಕುಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಬೆಳಗಾಗುತ್ತದೆಂದರೆ....

ಬೆಳಗಾಗುತ್ತದೆಂದರೆ ಭಯ
ಹೊದ್ದ ಚಾದರದ ಹರುಕು
ಬಣ್ಣ ಕಾಣದ ಗೋಡೆಯ ಬಿರುಕು
ಬಟ್ಟಾ ಬಯಲಾಗುವ ಅಪಾಯ !

ಬೆಳಗಾಗುತ್ತದೆಂದರೆ ದಿಗಿಲು
ಕಾರ್ಮೋಡದ ಮುಗಿಲು
ಹೂತು ಹೋಗುವ ನೇಗಿಲು
ವರ್ಷಧಾರೆಯಲಿ ಕೊಚ್ಚಿಹೋಗುವ ಹಗಲು !

ಬೆಳಗಾಗುತ್ತದೆಂದರೆ ಒದ್ದಾಟ
ಸಾಲು ಕೊಡೆಗಳ ಮರೆಯಲ್ಲಿ
ಧೋ ಎಂದು ಸುರಿವ ಮಳೆಯಲ್ಲಿ
ಪರಿಚಿತ ಮುಖಗಳ ಹುಡುಕುವ ಪೇಚಾಟ !

ಬೆಳಗಾಗುತ್ತದೆಂದರೆ ತಳಮಳ
ಸುಕ್ಕುಗಟ್ಟಿದ ನೆರಿಗೆ
ಬಾಡಿ ಬಿದ್ದ ಮಲ್ಲಿಗೆ
ಪ್ರೀತಿ ಕಳೆದುಹೋಗುವ ಕಳವಳ !

ಬೆಳಗಾಗುತ್ತದೆಂದರೆ ಕಾತರ
ಹೊಸಮುಖದ ಕಾವು
ಹಳೇ ಬಾವಿನ ನೋವು
ಕತ್ತಲಿಗೋಡುವ ಆತುರ !

ಬೆಳಗಾಗುತ್ತದೆಂದರೆ ತುಮುಲ
ರಾತ್ರಿ ಕಟ್ಟಿದ ಕನಸುಗಳು
ಗೂಡಲ್ಲಿ ಬೆಚ್ಚಗಿದ್ದ ಹಕ್ಕಿಗಳು
ನಸುಕಿಗೇ ಹಾರಿಹೋಗುವ ವ್ಯಾಕುಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.