ಹಸ್ತಾಕ್ಷರದಲಿ ಬರೆದು ಕಳಿಸುವೆ
ಚಂದ್ರ ನಿಂಗೊಂದು ಪತ್ರ!
ಲೋಕಕೆ ಎಲ್ಲ ಗೊತ್ತಾಗಿಬಿಡ್ಲಿ
ನಿನ್ನ ಬೆರಗಿನ ಚಿತ್ರ!

ಚಂದದ ಸ್ಮೈಲ್ ಕೊಡತಿಯಲ್ಲ
ಯಾರನು ಒಲಿಸುವ ನೋಟ!
ನಮಗೂ ಒಂದಿಷ್ಟು ಹೇಳಿಕೊಡು
ನಿತ್ಯವು ನಗುವ ಪಾಠ!

ತಿಂಗಳಿಗೊಮ್ಮೆ ಟ್ರಿಮ್ಮಾಗಿಬಿಡ್ತಿ
ಮಸೆದ ಕುಡಗೋಲ ಹಂಗ!
ಡೈಟ್ ಗೀಟ್ ಮಾಡುವ ಗುಟ್ಟು
ಬಿಡಿಸಿ ಹೇಳು ನಂಗ!

ಕ್ರೀಮ್ ಪೌಡರ್ ಹಚ್ಚದೆ ಇದ್ರು
ಎಂಥ ಸುಂದರ ಮಾಟ!
ನಮ್ಮ ಮೊಗದಲು ಅರಳಿಸಿಬಿಡು
ಹೂವು ಪರಿಮಳ ತೋಟ!

ಬೆಳ್ಳಂ ಬೆಳತನ ನಡಿತಾ ಇರತಿ
ಸೋಲೋದಿಲ್ಲವೆ ಕಾಲು!
ಬೇಕಾದ್ರ ಹೇಳು ಕಳಿಸಿಬಿಡತೀನಿ
ಅಜ್ಜನ ಊರುಗೋಲು!

ಮತ್ತೆ ಮತ್ತೆ ಬರೆದು ಕೇಳಲು
ಬೇಜಾರಪಡಬೇಡ ನೀನು!
ಎಲ್ಲ ಪ್ರಶ್ನೆಗೆ ಉತ್ತರ ಕೊಟ್ರೆ
ಟೂ ಟೂ ಬಿಡೂದಿಲ್ಲ ನಾನು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಹಸ್ತಾಕ್ಷರದಲಿ ಬರೆದು ಕಳಿಸುವೆ
ಚಂದ್ರ ನಿಂಗೊಂದು ಪತ್ರ!
ಲೋಕಕೆ ಎಲ್ಲ ಗೊತ್ತಾಗಿಬಿಡ್ಲಿ
ನಿನ್ನ ಬೆರಗಿನ ಚಿತ್ರ!

ಚಂದದ ಸ್ಮೈಲ್ ಕೊಡತಿಯಲ್ಲ
ಯಾರನು ಒಲಿಸುವ ನೋಟ!
ನಮಗೂ ಒಂದಿಷ್ಟು ಹೇಳಿಕೊಡು
ನಿತ್ಯವು ನಗುವ ಪಾಠ!

ತಿಂಗಳಿಗೊಮ್ಮೆ ಟ್ರಿಮ್ಮಾಗಿಬಿಡ್ತಿ
ಮಸೆದ ಕುಡಗೋಲ ಹಂಗ!
ಡೈಟ್ ಗೀಟ್ ಮಾಡುವ ಗುಟ್ಟು
ಬಿಡಿಸಿ ಹೇಳು ನಂಗ!

ಕ್ರೀಮ್ ಪೌಡರ್ ಹಚ್ಚದೆ ಇದ್ರು
ಎಂಥ ಸುಂದರ ಮಾಟ!
ನಮ್ಮ ಮೊಗದಲು ಅರಳಿಸಿಬಿಡು
ಹೂವು ಪರಿಮಳ ತೋಟ!

ಬೆಳ್ಳಂ ಬೆಳತನ ನಡಿತಾ ಇರತಿ
ಸೋಲೋದಿಲ್ಲವೆ ಕಾಲು!
ಬೇಕಾದ್ರ ಹೇಳು ಕಳಿಸಿಬಿಡತೀನಿ
ಅಜ್ಜನ ಊರುಗೋಲು!

ಮತ್ತೆ ಮತ್ತೆ ಬರೆದು ಕೇಳಲು
ಬೇಜಾರಪಡಬೇಡ ನೀನು!
ಎಲ್ಲ ಪ್ರಶ್ನೆಗೆ ಉತ್ತರ ಕೊಟ್ರೆ
ಟೂ ಟೂ ಬಿಡೂದಿಲ್ಲ ನಾನು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.