ಕ್ರಿಕೆಟ್ ಜಗತ್ತಿನ ಬದ್ಧ ಎದುರಾಳಿಗಳು ಎಂದು ಬಿಂಬಿತವಾಗಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ರಾಜಕೀಯ ಕಾರಣದಿಂದಾಗಿ ಯಾವುದೇ ದ್ವಿಪಕ್ಷೀಯ ಸರಣಿ ನಡೆಯುವುದಿಲ್ಲ. ಆದರೆ, ಐಸಿಸಿ, ಏಷ್ಯಾಕಪ್ನಂತ ಪ್ರತಿಷ್ಠಿತ ಟ್ರೋಫಿಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗುತ್ತವೆ. ಉಭಯ ತಂಡಗಳ ಸ್ಪರ್ಧೆಯನ್ನು ಕಣ್ತುಂಬಿಕೊಳ್ಳಲು ಇಡೀ ಕ್ರಿಕೆಟ್ ಜಗತ್ತು ಕಾದು ಕುಳಿತಿರುತ್ತದೆ.

ಉಭಯ ದೇಶಗಳ ನಡುವಿನ ಕ್ರಿಕೆಟ್ ಪಂದ್ಯ ರೋಚಕತೆಯಿಂದ ಕೂಡಿರಲಿ, ಇಲ್ಲದಿರಲಿ. ಆದರೆ ಕ್ರಿಕೆಟ್ ಅಭಿಮಾನಿಗಳು ಮಾತ್ರ, ಈ ಎರಡು ತಂಡಗಳ ಸೆಣಸಾಟ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಅದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಫೆಬ್ರುವರಿ 15ರಂದು ಮುಕ್ತಾಯಗೊಂಡ ಟಿ20 ವಿಶ್ವಕಪ್ನ ವೀಕ್ಷಣೆ ನಮ್ಮ ಮುಂದಿದೆ.

16.2 ಕೋಟಿ ವೀಕ್ಷಣೆ

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಲೀಗ್ ಹಂತದ ಪಂದ್ಯವನ್ನು ಕೇವಲ ಜಿಯೋಹಾಸ್ಟಾರ್ ಒಂದರಲ್ಲೇ ಬರೋಬ್ಬರಿ 16.2 ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದು ಜಿಯೋಹಾಟ್ಸ್ಟಾರ್ ಹೇಳಿಕೊಂಡಿದೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದುವರೆಗೂ ಇಷ್ಟೊಂದು ವೀಕ್ಷಣೆ ಕಂಡ ಬೇರೆ ಪಂದ್ಯ ಇಲ್ಲ. 2024ರ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಫೈನಲ್ ಪಂದ್ಯ ಈ ಹಿಂದಿನ ದಾಖಲೆಯಾಗಿತ್ತು. ಆ ಪಂದ್ಯಕ್ಕೆ ಹೋಲಿಸಿದರೆ, ಈ ಬಾರಿ ವೀಕ್ಷಕರ ಸಂಖ್ಯೆಯಲ್ಲಿ ಶೇ 56ರಷ್ಟು ಏರಿಕೆಯಾಗಿದೆ.

ಜಿಯೋಹಾಟ್ಸ್ಟಾರ್ ಸೇರಿ ಎಲ್ಲಾ ಪರದೆಗಳಲ್ಲಿ ಒಟ್ಟು 20 ಬಿಲಿಯನ್(2000 ಕೋಟಿ) ನಿಮಿಷಗಳ ವೀಕ್ಷಣಾ ಸಮಯ ಈ ಪಂದ್ಯಕ್ಕೆ ಲಭಿಸಿರುವುದು ವಿಶೇಷ.

ಭಾರತಕ್ಕೆ 61 ರನ್ಗಳ ಜಯ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್ ಇಶಾನ್ ಕಿಶನ್ ನೆರವಾದರು. ಅವರು ಸ್ಫೋಟಕ ಅರ್ಧಶತಕದ ನೆರವಿನಿಂದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು 114 ರನ್ ಗಳಿಗೆ ಆಲೌಟ್ ಆಗುವ ಮೂಲಕ 61 ರನ್ಗಳ ಸೋಲು ಅನುಭವಿಸಿತು.

8–1 ಅಂತರದ ಮುನ್ನಡೆ

ಐಸಿಸಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದುವರೆಗೂ 9 ಬಾರಿ ಮುಖಾಮುಖಿಯಾಗಿದ್ದರೆ, ಭಾರತ 8 ಬಾರಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಕೇವಲ 1 ಬಾರಿ ಮಾತ್ರ ಗೆದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.