ನೂರು ನೋಟಗಳ ತಪ್ಪಿಸಿ
ಸಾವಿರ ಸುಳ್ಳುಗಳ
ಹೆಣೆದು
ನಾವಿಬ್ಬರು
ಸಂಧಿಸುವುದು
ಸುಲಭವೇನಲ್ಲ…

ಪ್ರತಿ ಬಾರಿಯ ವಿದಾಯದ
ಕೊನೆಯಲ್ಲಿಯೂ
ಕೇಳುತ್ತಾನೆ ಅವನು
ಮುಂದೆ?

ನಾನು ಬೆಳಕಿನ ಕಿರುದಾರಿಯೊಂದರ
ಸಲುವಾಗಿ
ಆಗಸವ ನಿಟ್ಟಿಸುತ್ತೇನೆ
ಸುತ್ತುವರೆದ ಕಗ್ಗತ್ತಲ
ಸೀಳಿ ಬರುವ
ನಕ್ಷತ್ರದ
ಮೈ ತುಂಬಾ
ಬರೀ ಗಾಯದ
ಗುರುತು

ಏನು ಹೇಳಲಿ
ಅವನಿಗೆ
ಜಾತಿ ಬೇಲಿಗಳು
ರಣ ರಕ್ಕಸರಂತೆ
ದಶದಿಕ್ಕಿಗೆ ಮುಖ ತಿರುಗಿಸಿ
ನವಿರಿನ ನೆತ್ತರ ಹೀರುವುದನ್ನು?
ಧರ್ಮದ ಕಂದರಗಳಲಿ
ಒಲವಿನ ಹೆಜ್ಜೆಗಳು
ಹೂತುಕೊಂಡಿರುವುದನ್ನು?
ಗಡಿ ಮೀರಿ ಹಾರುವ
ಹಕ್ಕಿಗಳ ನೆತ್ತಿಯ
ಬಿಡದೇ ಚುಚ್ಚುವುದನ್ನು?

ಶೃತಗೊಳ್ಳುತ್ತದೆ ರೌದ್ರವೀಣೆ
ಎದ್ದ ವಿಪ್ಲವಗಳು
ಭೂಮಿ ಅಂಚಿನ
ರೇಖೆಯಲ್ಲಿ ಸ್ಥಿತಗೊಳ್ಳುವಾಗ
ಪ್ರೇಮದ ಕಣ್ಣುಗಳಲ್ಲಿ
ಒಂದಾಗದ
ಭಯ ಹೆಪ್ಪುಗಟ್ಟುತ್ತದೆ

ಪ್ರೀತಿಸುವುದು ಎಷ್ಟು ಕಷ್ಟವಿಲ್ಲಿ?

ನಟ್ಟ ನಡು ಹಗಲಲ್ಲಿ
ಯುದ್ಧಗಳು ವಿಜೃಂಭಿಸುತ್ತವೆ
ಕನಸುಗಳು ಕೊಳೆತ ದೇಹಗಳಾಗಿ
ಕೈ ಕಾಲಿಗೆ ಸಿಕ್ಕುತ್ತವೆ
ಕಳಚಿ ಬಿದ್ದ ಸೂರು
ಎದ್ದ ಧೂಳಿನ ಜಾಡು
ಜಗದ ದಾರಿಗಳ ಮುಚ್ಚಿ
ಗಹಗಹಿಸುವಾಗ
“ಓಡು, ಹಿಡಿ, ಕೊಲ್ಲು”
ಮುಗಿಲು ನೆತ್ತಿಯ
ಆಚೆಗೂ ಕೇಳಿಸುತ್ತದೆ….

ಕಿವಿ ಮುಚ್ಚಿಕೊಳ್ಳುತ್ತೇನೆ
ನೈತಿಕ ಅನೈತಿಕದ
ಮಾತುಗಳು
ಮುಗಿಬಿದ್ದು
ಮನದ
ಮರಣ ಸಂಭವಿಸುವಾಗ

ಏನು ಹೇಳಲಿ ಅವನಿಗೆ
ಎಲ್ಲಿ? ಏನು? ಎತ್ತ?
ಮತ್ತು…..

ಪ್ರತಿ ಬಾರಿ ಸಿಕ್ಕು ಹೊರಡುವಾಗಲೂ
ಕೇಳುತ್ತಾನೆ ಅವನು
ಮುಂದೆ?
ನಾನು ಮೈ ಚಾಚಿ ಸುಮ್ಮನೆ
ಬಿದ್ದುಕೊಂಡಿರುವ
ಆಕಾಶ ನೋಡುತ್ತೇನೆ..
ಕೆಲವೊಮ್ಮೆ ಅಲ್ಲಿ ಬಿಳಿಯ ಮೋಡಗಳು
ಮತ್ತೊಮ್ಮೆ ಕಪ್ಪು ದಟ್ಟ ಮುಗಿಲ
ಓಟಗಳು
ಮಗದೊಮ್ಮೆ ಯಾರನ್ನೋ
ಕಾಯುತ್ತ ಕುಳಿತಂತೆ
ಕಾಣುವ ನಕ್ಷತ್ರಗಳು
ಕಾಣಿಸುತ್ತವೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ನೂರು ನೋಟಗಳ ತಪ್ಪಿಸಿ
ಸಾವಿರ ಸುಳ್ಳುಗಳ
ಹೆಣೆದು
ನಾವಿಬ್ಬರು
ಸಂಧಿಸುವುದು
ಸುಲಭವೇನಲ್ಲ…

ಪ್ರತಿ ಬಾರಿಯ ವಿದಾಯದ
ಕೊನೆಯಲ್ಲಿಯೂ
ಕೇಳುತ್ತಾನೆ ಅವನು
ಮುಂದೆ?

ನಾನು ಬೆಳಕಿನ ಕಿರುದಾರಿಯೊಂದರ
ಸಲುವಾಗಿ
ಆಗಸವ ನಿಟ್ಟಿಸುತ್ತೇನೆ
ಸುತ್ತುವರೆದ ಕಗ್ಗತ್ತಲ
ಸೀಳಿ ಬರುವ
ನಕ್ಷತ್ರದ
ಮೈ ತುಂಬಾ
ಬರೀ ಗಾಯದ
ಗುರುತು

ಏನು ಹೇಳಲಿ
ಅವನಿಗೆ
ಜಾತಿ ಬೇಲಿಗಳು
ರಣ ರಕ್ಕಸರಂತೆ
ದಶದಿಕ್ಕಿಗೆ ಮುಖ ತಿರುಗಿಸಿ
ನವಿರಿನ ನೆತ್ತರ ಹೀರುವುದನ್ನು?
ಧರ್ಮದ ಕಂದರಗಳಲಿ
ಒಲವಿನ ಹೆಜ್ಜೆಗಳು
ಹೂತುಕೊಂಡಿರುವುದನ್ನು?
ಗಡಿ ಮೀರಿ ಹಾರುವ
ಹಕ್ಕಿಗಳ ನೆತ್ತಿಯ
ಬಿಡದೇ ಚುಚ್ಚುವುದನ್ನು?

ಶೃತಗೊಳ್ಳುತ್ತದೆ ರೌದ್ರವೀಣೆ
ಎದ್ದ ವಿಪ್ಲವಗಳು
ಭೂಮಿ ಅಂಚಿನ
ರೇಖೆಯಲ್ಲಿ ಸ್ಥಿತಗೊಳ್ಳುವಾಗ
ಪ್ರೇಮದ ಕಣ್ಣುಗಳಲ್ಲಿ
ಒಂದಾಗದ
ಭಯ ಹೆಪ್ಪುಗಟ್ಟುತ್ತದೆ

ಪ್ರೀತಿಸುವುದು ಎಷ್ಟು ಕಷ್ಟವಿಲ್ಲಿ?

ನಟ್ಟ ನಡು ಹಗಲಲ್ಲಿ
ಯುದ್ಧಗಳು ವಿಜೃಂಭಿಸುತ್ತವೆ
ಕನಸುಗಳು ಕೊಳೆತ ದೇಹಗಳಾಗಿ
ಕೈ ಕಾಲಿಗೆ ಸಿಕ್ಕುತ್ತವೆ
ಕಳಚಿ ಬಿದ್ದ ಸೂರು
ಎದ್ದ ಧೂಳಿನ ಜಾಡು
ಜಗದ ದಾರಿಗಳ ಮುಚ್ಚಿ
ಗಹಗಹಿಸುವಾಗ
“ಓಡು, ಹಿಡಿ, ಕೊಲ್ಲು”
ಮುಗಿಲು ನೆತ್ತಿಯ
ಆಚೆಗೂ ಕೇಳಿಸುತ್ತದೆ….

ಕಿವಿ ಮುಚ್ಚಿಕೊಳ್ಳುತ್ತೇನೆ
ನೈತಿಕ ಅನೈತಿಕದ
ಮಾತುಗಳು
ಮುಗಿಬಿದ್ದು
ಮನದ
ಮರಣ ಸಂಭವಿಸುವಾಗ

ಏನು ಹೇಳಲಿ ಅವನಿಗೆ
ಎಲ್ಲಿ? ಏನು? ಎತ್ತ?
ಮತ್ತು…..

ಪ್ರತಿ ಬಾರಿ ಸಿಕ್ಕು ಹೊರಡುವಾಗಲೂ
ಕೇಳುತ್ತಾನೆ ಅವನು
ಮುಂದೆ?
ನಾನು ಮೈ ಚಾಚಿ ಸುಮ್ಮನೆ
ಬಿದ್ದುಕೊಂಡಿರುವ
ಆಕಾಶ ನೋಡುತ್ತೇನೆ..
ಕೆಲವೊಮ್ಮೆ ಅಲ್ಲಿ ಬಿಳಿಯ ಮೋಡಗಳು
ಮತ್ತೊಮ್ಮೆ ಕಪ್ಪು ದಟ್ಟ ಮುಗಿಲ
ಓಟಗಳು
ಮಗದೊಮ್ಮೆ ಯಾರನ್ನೋ
ಕಾಯುತ್ತ ಕುಳಿತಂತೆ
ಕಾಣುವ ನಕ್ಷತ್ರಗಳು
ಕಾಣಿಸುತ್ತವೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.