ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಜಿ.ಎಸ್. ಶಿವಪ್ರಸಾದ್ ಅವರ ಕವನ ‘ಆಶಯಗಳು’

ಡಾ. ಜಿ. ಎಸ್. ಶಿವಪ್ರಸಾದ್ ಅವರ ಕವನ
ಡಾ. ಜಿ. ಎಸ್. ಶಿವಪ್ರಸಾದ್, ಶೆಫೀಲ್ಡ್, ಯು.ಕೆ
Published 14 ಏಪ್ರಿಲ್ 2024, 1:06 IST
Last Updated 14 ಏಪ್ರಿಲ್ 2024, 1:06 IST
ಅಕ್ಷರ ಗಾತ್ರ

ಭರವಸೆಗಳ ಹೂಮಾಲೆಯನು
ತೊಡಿಸಬೇಕು ಅವಳಿಗೆ
ಹಣತೆಗಳನು ಹಚ್ಚಬೇಕು
ಅವಳು ನಡೆವ ದಾರಿಗೆ

ನಕ್ಷತ್ರಗಳನು ಹಿಡಿದು ತಂದು
ಸಿಂಗರಿಸಬೇಕು ಅವಳನು
ಅವಳ ಎದೆಯ ಆಳಕಿಳಿದು
ಕೂಗ ಬೇಕು ಹೆಸರನು

ನಾನು ನುಸಿಳಿ ಸೇರಬೇಕು
ಅವಳ ಬಣ್ಣದ ಕನಸಿಗೆ
ಅವಳ ಹೆಜ್ಜೆ ಗೆಜ್ಜೆ ಸದ್ದು
ಲಯವು ನನ್ನ ಕವಿತೆಗೆ

ನನ್ನ ಪುಟ್ಟ ಅರಮನೆಯಲಿ
ರಾಣಿ ಪಟ್ಟ ಅವಳಿಗೇ
ನಾ ಕಟ್ಟಿದರೆ ಕಟ್ಟಬೇಕು
ತಾಳಿ ಅವಳ ಕೊರಳಿಗೇ

ಹೊಸ ದಿಗಂತಗಳನು ದಾಟಬೇಕು
ನಾನು-ಅವಳು ಒಟ್ಟಿಗೆ
ತೇಲಿ ತೇಲಿ ಹೋಗಬೇಕು
ಕಡಲ ನೀಲಿ ಅಂಚಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT