ಆನೆ ಯೋಚಿಸಿರಬಹುದೆ
ಇರುವೆಯ ಬಗ್ಗೆ
ದಿಟ್ಟಿಸಿ ನೋಡಿದರಷ್ಟೇ
ಕಣ್ಣಿಗೆ ಬೀಳುವಪಾಪದ
ಜೀವಿಯನದು
ಉಪೇಕ್ಷಿಸಿರಬಹುದು
ಹೋಲಿಸಿ, ಗಾತ್ರ ನೋಡಿ

ನಕ್ಕಿರಬಹುದುಅಥವಾ
ಮುದ್ದುಕ್ಕಿಗೆಳೆತನ
ಬೆಳೆಸಿರಬಹುದು.ಈ ನಡುವೆ
ಆನೆಯ ಕಷ್ಟ ಇರುವೆಯ
ನಷ್ಟ ಇಬ್ಬರಮಾತುಕತೆಗೆ
ವಿಷಯವಾಗಿರಬಹುದು

ಇರುವೆ! ಅದೊಂದುಜೀವ
ಎಂದೂ ಗಣಿಸದೆ ‘ಅದೆಷ್ಟು
ಸಲಹೊಸಕಿ ಗೂಡಿಗೆನೀರು
ಹೋಯ್ದು ಗೋಳುಗರೆದಿಲ್ಲ
ನಾನು!
ಇನ್ನು ಆನೆ ಬಿಟ್ಟೀತೆ?!’

ಭಂಡು ನುಡಿವೆ
ತನ್ನೊಂದು ಹೆಜ್ಜೆಯಡಿಗೆ
ಸಿಲುಕಿಅಪ್ಪಚ್ಚಿಯಾದ ಇರುವೆಗಳ
ಲೆಕ್ಕ ಇಟ್ಟಿರಲಾರದು;ಗುಡಿಸಿ
ಗುಡ್ಡೆ ಹಾಕಿದರೆ ತನ್ನಗಾತ್ರವೂ
ಆಗಲಾರದ ಪೊಳ್ಳು ಕಳೆಬರಗಳು
ಸೊಯ್ಯನೆದೂಳ ಕಣವಾಗಿ
ಹೋಯ್ತೆಂದುಹಂಗಿಸದೇ
ಬಿಟ್ಟೀತೆ ಎಂದುವ್ಯಂಗ್ಯಿಸುತ್ತೇನೆ

ನನ್ನ ಕೊಲೆಯಕೆಲಸಗಳಿಗೆ
ದೈತ್ಯನಹಿಂದೆ ಮರೆಯಾಗುತ್ತೇನೆ
ಪ್ರತೀ ಹೊಲೆ ಕೆಲಸಗಳಿಗೂಸಬೂಬು
ಹೇಳಿ,ಕೊಲೆಹೊಲೆಗೆಹೊಸ
ಕಸುಬುದಾರರಹುಡುಕುತೇನೆ

ಆನೆಯಷ್ಟೇನೂಬಲಶಾಲಿಯಲ್ಲದ
ಇರುವೆಯಬಲನಂಬಲುಸಿದ್ಧವಿಲ್ಲದ
ನಾನು
ಸಮಯ ಸಿಕ್ಕಾಗಲೆಲ್ಲಾತುಳಿಯುತಾ
ಹೊಸಕುತಾಓಡಾಡುವಾಗಸರೀ
ಉರಿ ತಾಕುವಂತೆ ಇರಿವ
ಇರುವೆಗಳಇರುವಿಕೆಗೆಪರಮೋಚ್ಚ
ಉದಾಸೀನತೆ ತೋರುತೇನೆ
ಸಾಮಾನ್ಯ ಮನುಷ್ಯರಂತೆ….

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ಆನೆ ಯೋಚಿಸಿರಬಹುದೆ
ಇರುವೆಯ ಬಗ್ಗೆ
ದಿಟ್ಟಿಸಿ ನೋಡಿದರಷ್ಟೇ
ಕಣ್ಣಿಗೆ ಬೀಳುವಪಾಪದ
ಜೀವಿಯನದು
ಉಪೇಕ್ಷಿಸಿರಬಹುದು
ಹೋಲಿಸಿ, ಗಾತ್ರ ನೋಡಿ

ನಕ್ಕಿರಬಹುದುಅಥವಾ
ಮುದ್ದುಕ್ಕಿಗೆಳೆತನ
ಬೆಳೆಸಿರಬಹುದು.ಈ ನಡುವೆ
ಆನೆಯ ಕಷ್ಟ ಇರುವೆಯ
ನಷ್ಟ ಇಬ್ಬರಮಾತುಕತೆಗೆ
ವಿಷಯವಾಗಿರಬಹುದು

ಇರುವೆ! ಅದೊಂದುಜೀವ
ಎಂದೂ ಗಣಿಸದೆ ‘ಅದೆಷ್ಟು
ಸಲಹೊಸಕಿ ಗೂಡಿಗೆನೀರು
ಹೋಯ್ದು ಗೋಳುಗರೆದಿಲ್ಲ
ನಾನು!
ಇನ್ನು ಆನೆ ಬಿಟ್ಟೀತೆ?!’

ಭಂಡು ನುಡಿವೆ
ತನ್ನೊಂದು ಹೆಜ್ಜೆಯಡಿಗೆ
ಸಿಲುಕಿಅಪ್ಪಚ್ಚಿಯಾದ ಇರುವೆಗಳ
ಲೆಕ್ಕ ಇಟ್ಟಿರಲಾರದು;ಗುಡಿಸಿ
ಗುಡ್ಡೆ ಹಾಕಿದರೆ ತನ್ನಗಾತ್ರವೂ
ಆಗಲಾರದ ಪೊಳ್ಳು ಕಳೆಬರಗಳು
ಸೊಯ್ಯನೆದೂಳ ಕಣವಾಗಿ
ಹೋಯ್ತೆಂದುಹಂಗಿಸದೇ
ಬಿಟ್ಟೀತೆ ಎಂದುವ್ಯಂಗ್ಯಿಸುತ್ತೇನೆ

ನನ್ನ ಕೊಲೆಯಕೆಲಸಗಳಿಗೆ
ದೈತ್ಯನಹಿಂದೆ ಮರೆಯಾಗುತ್ತೇನೆ
ಪ್ರತೀ ಹೊಲೆ ಕೆಲಸಗಳಿಗೂಸಬೂಬು
ಹೇಳಿ,ಕೊಲೆಹೊಲೆಗೆಹೊಸ
ಕಸುಬುದಾರರಹುಡುಕುತೇನೆ

ಆನೆಯಷ್ಟೇನೂಬಲಶಾಲಿಯಲ್ಲದ
ಇರುವೆಯಬಲನಂಬಲುಸಿದ್ಧವಿಲ್ಲದ
ನಾನು
ಸಮಯ ಸಿಕ್ಕಾಗಲೆಲ್ಲಾತುಳಿಯುತಾ
ಹೊಸಕುತಾಓಡಾಡುವಾಗಸರೀ
ಉರಿ ತಾಕುವಂತೆ ಇರಿವ
ಇರುವೆಗಳಇರುವಿಕೆಗೆಪರಮೋಚ್ಚ
ಉದಾಸೀನತೆ ತೋರುತೇನೆ
ಸಾಮಾನ್ಯ ಮನುಷ್ಯರಂತೆ….

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.