ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾ ಅಮ್ಮ ಕತೆ ಹೇಳ್ತಾರೆ ನೋಡಬನ್ನಿ

Published 4 ನವೆಂಬರ್ 2023, 5:21 IST
Last Updated 4 ನವೆಂಬರ್ 2023, 5:21 IST
ಅಕ್ಷರ ಗಾತ್ರ

ಲೇಖಕಿ ಮತ್ತು ಸಮಾಜಸೇವಾ ಕ್ಷೇತ್ರದಲ್ಲಿರುವ ಸುಧಾ ಮೂರ್ತಿ ಅವರ ಮಕ್ಕಳ ಸಾಹಿತ್ಯ ಕೃತಿಗಳನ್ನು ಆಧರಿಸಿದ ‘ಸ್ಟೋರಿ ಟೈಮ್‌ ವಿತ್‌ ಸುಧಾ ಅಮ್ಮ’ ಹೆಸರಿನ ಅನಿಮೇಷನ್‌ ಸರಣಿಯನ್ನು ಮೂರ್ತಿ ಮೀಡಿಯಾ ಪರಿಚಯಿಸುತ್ತಿದೆ.

ಸುಧಾ ಮೂರ್ತಿ ಅವರ ಜನಪ್ರಿಯ “ಗ್ರ್ಯಾಂಡ್‌ಮಾಸ್‌ ಬ್ಯಾಗ್‌ ಆಫ್‌ ಸ್ಟೋರಿಸ್‌”, ‘ಗ್ರ್ಯಾಂಡ್‌ಪೇರೆಂಟ್ಸ್‌ ಬ್ಯಾಗ್‌ ಆಫ್‌ ಸ್ಟೋರಿಸ್‌’ ಮತ್ತು ‘ದಿ ಮ್ಯಾಜಿಕ್‌ ಡ್ರಮ್‌ ಆಂಡ್‌ ಅದರ್‌ ಫೇವರಿಟ್‌ ಸ್ಟೋರಿಸ್‌’ ಕೃತಿಗಳನ್ನು ಆಧರಿಸಿ 52 ಸರಣಿಗಳನ್ನು ರೂಪಿಸಲಾಗಿದ್ದು, ‘ಮೂರ್ತಿ ಮೀಡಿಯಾ’ ಯೂಟ್ಯೂಬ್‌ ಚಾನೆಲ್‌ನಲ್ಲಿ ಇದನ್ನು ಪ್ರಸಾರ ಮಾಡಲಾಗುತ್ತಿದೆ. ಸರಣಿ ಮೊದಲ ಕಂತು ಅಕ್ಟೋಬರ್‌ 31ರಂದು ಬಿಡುಗಡೆಯಾಗಿದ್ದು, ಪ್ರತಿ ವಾರ ಒಂದು ಕತೆಯನ್ನು ಸರಣಿ ಮೂಲಕ ಹೇಳಲಾಗುತ್ತಿದೆ.

‘ಸ್ಟೋರಿ ಟೈಮ್‌ ವಿತ್‌ ಸುಧಾ ಅಮ್ಮ’ ಅನಿಮೇಟೆಡ್‌ ಸರಣಿ ಕನ್ನಡ, ಹಿಂದಿ, ಇಂಗ್ಲಿಷ್‌, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ. ಈ ಮೂಲಕ ವಿವಿಧ ವರ್ಗಗಳ, ಅಭಿರುಚಿಯ ವೀಕ್ಷಕರಿಗೆ ಕಥೆಗಳನ್ನು ತಲುಪಿಸಲು ಉದ್ದೇಶಿಸಲಾಗಿದೆ.

ಶಿಕ್ಷಣ ಮತ್ತು ಮನರಂಜನೆ ಎರಡಕ್ಕೂ ಒತ್ತು ನೀಡುತ್ತಿರುವ ಮೂರ್ತಿ ಮೀಡಿಯಾ ‘ಸ್ಟೋರಿ ಟೈಮ್‌ ವಿತ್‌ ಸುಧಾ ಅಮ್ಮ’ ಸರಣಿಯಲ್ಲಿ ಮಕ್ಕಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಪ್ರಯತ್ನ ಮಾಡಲಿದೆ. ಅವರ ಮನಸ್ಸುಗಳನ್ನು ವಿಕಸಿತ ಗೊಳಿಸಲಿವೆ ಅನಿಮೇಷನ್‌ ಸರಣಿಯ ಬಿಡುಗಡೆಯ ಕುರಿತು ಮಾತನಾಡಿದ ಮೂರ್ತಿ ಮೀಡಿಯಾದ ಅಧ್ಯಕ್ಷರಾದ ಅಪರ್ಣಾ ಕೃಷ್ಣನ್‌ ಹೇಳಿದರು.

ಸರಣಿಯ ಕುರಿತು ಸುಧಾ ಮೂರ್ತಿ ಅವರು ಮಾತನಾಡಿ ‘ಪ್ರೇರಣೆ ಮತ್ತು ಶಿಕ್ಷಣ ನೀಡುವುದರಲ್ಲಿ ಕಥೆಗಳಲ್ಲಿರುವ ಶಕ್ತಿಯಲ್ಲಿ ನನಗೆ ಸದಾ ನಂಬಿಕೆ ಇದೆ. ಈ ಸರಣಿಗೆ ಅನೇಕ ಯುವ ಮನಸ್ಸು ಮತ್ತು ಹೃದಯಗಳನ್ನು ತಲುಪುವ ಸಾಮರ್ಥ್ಯ ಇದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಯೂಟ್ಯೂಬ್‌ ಚಾನೆಲ್‌ ಲಿಂಕ್‌; youtube.com/@Murty-Media

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT