ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asian Games | ಎಂಟರ ಘಟ್ಟಕ್ಕೆ ಸುಮಿತ್

Published 26 ಸೆಪ್ಟೆಂಬರ್ 2023, 18:48 IST
Last Updated 26 ಸೆಪ್ಟೆಂಬರ್ 2023, 18:48 IST
ಅಕ್ಷರ ಗಾತ್ರ

ಹಾಂಗ್‌ಝೌ: ಭಾರತದ ಸುಮಿತ್ ನಗಾಲ್ ಅವರು ಭರ್ಜರಿ ಸರ್ವ್‌ಗಳಿಗೆ ಹೆಸರಾದ ಬೀಬಿಟ್‌ ಝುಕಯೇವ್ ಅವರನ್ನು ಸೋಲಿಸಿ ಏಷ್ಯನ್ ಗೇಮ್ಸ್‌ ಟೆನಿಸ್‌ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್ ತಲುಪಿದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಅಂಕಿತಾ ರೈನಾ ಹೆಚ್ಚಿನ ಪ್ರಯಾವಿಲ್ಲದೇ ಆದಿತ್ಯಾ ಪಿ.ಕರುಣಾರತ್ನೆ ಅವರನ್ನು ಹಿಮ್ಮೆಟ್ಟಿಸಿ ಮಂಗಳವಾರ ಎಂಟರ ಘಟ್ಟ ತಲುಪಿದರು.

ತೀವ್ರ ಹೋರಾಟದ ಪಂದ್ಯದಲ್ಲಿ ಕಜಕಸ್ತಾನದ ಝುಕಯೇವ್ ಅವರು ಭರ್ಜರಿ ಸರ್ವ್‌ಗಳನ್ನೇನೊ ಮಾಡಿದರು. ಆದರೆ ಹೊಡೆತಗಳನ್ನು  ಉತ್ತಮವಾಗಿ ನಿಯಂತ್ರಿಸಿದ ನಗಾಲ್ 7–6 (9), 6–4 ರಿಂದ ಪಂದ್ಯವನ್ನು ಗೆದ್ದರು. ಕೋರ್ಟ್‌ನಲ್ಲಿ ಚುರುಕಾದ ಓಡಾಟ ಮತ್ತು ಹೊಡೆತಗಳಲ್ಲಿ ಚಾಕಚಕ್ಯತೆ 26 ವರ್ಷದ ನಗಾಲ್ ಗೆಲುವಿಗೆ ಸಹಕಾರಿಯಾಯಿತು.

ಭಾರತದ ಅಗ್ರಮಾನ್ಯ ಆಟಗಾರ್ತಿ ಅಂಕಿತಾ ಮೂರನೇ ಸುತ್ತಿನಲ್ಲಿ 6–1, 6–2 ರಿಂದ ಹಾಂಗ್‌ಕಾಂಗ್‌ನ ಕರುಣಾರತ್ನೆ ಅವರನ್ನು ಸದೆಬಡಿದರು. ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 198ನೇ ಸ್ಥಾನದಲ್ಲಿರುವ ಅಂಕಿತಾ ಅವರಿಗೆ ಜಪಾನ್‌ನ ಹಾರುಕಾ ಕಾಜಿ ಮುಂದಿನ ಎದುರಾಳಿ ಆಗಿದ್ದಾರೆ.

ಟೆನಿಸ್‌ನಲ್ಲಿ ಸೆಮಿಫೈನಲ್ ತಲುಪಿದವರಿಗೆ ಕಂಚಿನ ಪದಕ ನೀಡಲಾಗುತ್ತದೆ.

ಉಳಿದಂತೆ ರಾಮಕುಮಾರ್‌ ರಾಮನಾಥನ್ ಮತ್ತು ರುತುಜಾ ಭೋಸ್ಲೆ ಅವರು ಸಿಂಗಲ್ಸ್‌ನಲ್ಲಿ ಹೊರಬಿದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಫಿಲಿಪೀನ್ಸ್‌ನ ಅಲೆಕ್ಸಾಂಡ್ರಾ ಇಯಾಲಾ 7–6 (5), 6–2 ರಿಂದ ರುತುಜಾ ಅವರನ್ನು ಹಿಮ್ಮೆಟ್ಟಿಸಿದರು. ಹೋರಾಟ ಕಂಡ ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಜಪಾನ್‌ನ ಯೊಸುಕೆ ವತಾನುಕಿ 7–5, 6–7 (3), 7–5 ರಿಂದ ರಾಮಕುಮಾರ್‌ ಅವರನ್ನು ಮಣಿಸಿದರು. ವತಾನುಕಿ 78ನೇ ಕ್ರಮಾಂಕ ಹೊಂದಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ರುತುಜಾ– ಕರ್ಮನ್ ಕೌರ್‌ ಥಂಡಿ ಜೋಡಿ, ಥಾಯ್ಲೆಂಡ್‌ ಆಟಗಾರ್ತಿಯರಿಗೆ ಮಣಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT