ಹಳೆ ಚಮಚ, ಕತ್ತರಿಯಿಂದ ಕಲಾಕೃತಿ

7

ಹಳೆ ಚಮಚ, ಕತ್ತರಿಯಿಂದ ಕಲಾಕೃತಿ

Published:
Updated:
Deccan Herald

ಹಳೆ ವಸ್ತುಗಳನ್ನು ಮರುಬಳಕೆ ಮಾಡಿ, ನಾನಾ ಬಗೆಯ ಕಲಾಕೃತಿಗಳನ್ನು ರಚಿಸುವವರು ನೂರಾರು ಮಂದಿಯಿದ್ದಾರೆ. ಕೀನ್ಯಾದ ಕಲಾವಿದರೊಬ್ಬರು ಇದೇ ಸಾಲಿಗೆ ಸೇರುತ್ತಾರೆ. ಹಾಳಾದ ಕತ್ತರಿ ಹಾಗೂ ಮರದ ಚಮಚ, ಹಳೆ ಚೂರಿ ಹೀಗೆ ನಾನಾ ವಸ್ತುಗಳನ್ನು ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿ ತಂದು ಮನೆಸೆಳೆಯುವ ಕಲಾಕೃತಿಗಳನ್ನು ರಚಿಸುತ್ತಾರೆ. ಪರಿಸರ ಸಂರಕ್ಷಣೆ ಬಗ್ಗೆಯೂ ಕಾಳಜಿಯುಳ್ಳ ಅವರು, ತಮ್ಮ ಕಲಾಕೃತಿ ಪ್ರದರ್ಶನದ ಮೂಲಕ ವನ್ಯಜೀವಿಗಳ ರಕ್ಷಣೆ ಬಗ್ಗೆಯೂ ಧ್ವನಿಯೆತ್ತಿದ್ದಾರೆ.

ನೈರೋಬಿಯ ಕಲಾವಿದ  ಇವನ್‌ ಎಂಗುರೆ ಅವರು ಹಾಳಾದ ವಸ್ತುಗಳನ್ನು ಮರು ಬಳಸಿಕೊಂಡು ಅನೇಕ ಕಲಾತ್ಮಕ ಆಕೃತಿಗಳನ್ನು ರಚಿಸಿದ್ದಾರೆ. ಮನೆ ಹಾಗೂ ಸ್ಟುಡಿಯೋ ಎರಡರಲ್ಲೂ ಇವನ್‌ ಅವರು ರಚಿಸಿದ ಕಲಾಕೃತಿಗಳಿವೆ. ತಮ್ಮ ಅಪಾರ್ಟ್‌ಮೆಂಟ್‌ ಅನ್ನೇ ಸಂಗ್ರಹಾಲಯವನ್ನಾಗಿ ಮಾಡಿಕೊಂಡಿದ್ದಾರೆ. ಇವರನ್ನು ‘ಜಂಕ್‌ ಆರ್ಟಿಸ್ಟ್‌’ ಎಂದೇ ಅಲ್ಲಿ ಗುರುತಿಸುತ್ತಾರೆ. 

ಹಳೆ ವಸ್ತುಗಳಿಂದ ಕಲಾಕೃತಿ ರಚಿಸಿದ ನಂತರ ಅದಕ್ಕೆ ಪೇಟಿಂಗ್‌ ಹಾಗೂ ಗ್ರಾಫಿಕ್‌ ಡಿಸೈನ್‌ಗಳಿಂದ ಹೊಸ ರೂಪ ಕೊಡುತ್ತಾರೆ. ಬಳಿಕ  ಬಟನ್‌ ಹಾಗೂ ಬಟ್ಟೆಗಳನ್ನು ಬಳಸಿಕೊಂಡು ಅದಕ್ಕೆ ಸುಂದರ ರೂಪ ನೀಡುತ್ತಾರೆ.  ಇದಕ್ಕೆ ಅಗತ್ಯವಾದ ಕಚ್ಛಾ ವಸ್ತುಗಳನ್ನು ಕೆಲವೊಮ್ಮೆ ಇವನ್‌ ಅವರೇ ಸಂಗ್ರಹಿಸಿದರೆ, ಕೆಲವು ಬಾರಿ ಅಕ್ಕಪಕ್ಕದ ಮನೆಯವರು ತಂದುಕೊಡುತ್ತಾರೆ.  ಇವರ ನಾಲ್ಕು ಅಂತಸ್ತಿನ ಮನೆಯಲ್ಲಿ ಇವರ ಕಲಾಸಕ್ತಿ ಎದ್ದು ಕಾಣುತ್ತದೆ.

ಸಣ್ಣ ಆಭರಣಗಳಿಂದ ಹಿಡಿದು ಎಲ್ಲಾ ಬಗೆಯ ಕಲಾಕೃತಿಗಳನ್ನು ಮಾರಾಟ ಮಾಡುತ್ತಾರೆ. ಆದರೆ ವೈರ್‌ ಪೆಂಡೆಂಟ್‌ಗಳು, ಕಿವಿಯೋಲೆಗಳು ಹಾಗೂ ಬ್ರಾಸ್‌ಲೆಟ್‌ಗಳನ್ನು ಜನರು ಹೆಚ್ಚು ಖರೀದಿಸುತ್ತಾರೆ.  ‘ನನ್ನ ಕಣ್ಣಿಗೆ ಏನು ವಸ್ತುಗಳು ಕಾಣುತ್ತವೆಯೋ ಅವುಗಳನ್ನೆಲ್ಲಾ ನಾನು ಸಂಗ್ರಹಿಸುತ್ತೇನೆ. ಅವುಗಳಲ್ಲಿ ನನಗೆ ಸುಂದರ ಕಲಾಕೃತಿ ಕಾಣುತ್ತದೆ ಎಂದು ಇವನ್‌ ಹೇಳುತ್ತಾರೆ. ‘ ಎರಡನೇ ಅವಕಾಶ ಮನುಷ್ಯರಿಗಷ್ಟೇ  ಅಲ್ಲ, ವಸ್ತುಗಳಿಗೂ ಎರಡನೇ ಅವಕಾಶ ಬೇಕು. ಅವುಗಳನ್ನು ಉಪಯೋಗಿಸಿ, ಬಿಸಾಕುವ ಮೊದಲು ಅವುಗಳನ್ನು ಎರಡನೇ ಬಾರಿ ಹೇಗೆ ಮರುಬಳಕೆ ಮಾಡಬಹುದು ಎಂದು ಯೋಚಿಸಿ’ ಎಂಂದು ಇವನ್‌ ಸಲಹೆ ನೀಡುತ್ತಾರೆ.

ಈ ಕಲಾವಿದ ವನ್ಯಜೀವಿಗಳ ರಕ್ಷಣೆ ಬಗ್ಗೆಯೂ ತಮ್ಮ ಕಲಾಕೃತಿಗಳ ಮೂಲಕ ಧ್ವನಿಯೆತ್ತಿದ್ದಾರೆ. ಚಿಟ್ಟೆ, ದುಂಬಿ ಹಾಗೂ ಇನ್ನಿತರ ಪ್ರಾಣಿ, ಪಕ್ಷಿಗಳ ಕಲಾಕೃತಿ ಬಿಡಿಸಿ, ಪ್ರದರ್ಶನವನ್ನೂ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !