7
ಕಲಾಪ

ನೆನಪುಗಳಿಗೆ ಬಣ್ಣದ ಬೆರಗು

Published:
Updated:
ಮಣಿ ಅವರ ಕಲಾಕೃತಿಗಳು

ಬಾದಾಮಿಯ ಬನಶಂಕರಿ ಜಾತ್ರೆಯ ವಿಶೇಷ ಚಿತ್ರಗಳಲ್ಲಿ ಕಲಾಕೃತಿಗಳಾಗಿವೆ. ಸ್ನೇಹಿತನೊಂದಿಗೆ ಜಾತ್ರೆಗೆ ಹೋದಾಗ ಕೆಲವು ನೆನಪುಗಳು ಮನಸ್ಸಿನ ಭಿತ್ತಿಯೊಳಗೆ ಶಾಶ್ವತವಾಗಿ ಉಳಿದಿದ್ದವು. ಅವನ್ನೇ ಇಲ್ಲಿ ಕ್ಯಾನ್ವಾಸ್‌ ಮೇಲೆ ಇಳಿಸಲಾಯಿತು ಎನ್ನುತ್ತಾರೆ ಕಲಾವಿದ ಜೆಎಂ ಎಸ್ ಮಣಿ.

ಯುವಜನಾಂಗವನ್ನು ಆಕರ್ಷಿಸಲು ಮಾಡಿದ ಈ ಪ್ರದರ್ಶನದಲ್ಲಿ ವೈವಿಧ್ಯವನ್ನು ಕಾಣಬಹುದು. ಜೆಎಂಎಸ್ ಮಣಿಯವರು ಕಲಾಕೃತಿಗಳಲ್ಲಿ ಸಿಂಹಪಾಲು ಮಹಿಳೆಯರಿಗೇ ಮೀಸಲಾಗಿದೆ ಎನ್ನುವುದು ಅವರ ಮಾತು. ಅದು ಈ ಪ್ರದರ್ಶನದಲ್ಲಿಯೂ ಎದ್ದು ಕಾಣುತ್ತದೆ. ಮಣಿ ತಮ್ಮ ಅಮ್ಮನ ನೆನಪಿನಲ್ಲಿ ರಚಿಸಿರುವ ಕಲಾಕೃತಿಯೂ ಈ ಪ್ರದರ್ಶನದಲ್ಲಿದೆ. ಇದು ಎಲ್ಲ ಅಮ್ಮಂದಿರನ್ನೂ ನೆನಪಿಸುವಂತಿದೆ. 

ಇನ್ನೊಂದು ಗಮನ ಸೆಳೆಯುವ ಕಲಾಕೃತಿ ನೀರಿನ ಚೊಂಬಿನಲ್ಲಿ ವ್ಯಕ್ತಿ ಇಣುಕುತ್ತಿರುವುದು... ಹನಿ ನೀರಿಗಾಗಿ ತಾತ್ವರವಾಗುವ ನೀರಿನ ಸಮಸ್ಯೆಯನ್ನು ಸಾಂಕೇತಿಕವಾಗಿ, ಅಷ್ಟೇ ಸದೃಢ ಮಾಧ್ಯಮವಾಗಿ ಈ ಚಿತ್ರದಲ್ಲಿ ಬಿಂಬಿಸಿದ್ದಾರೆ.  ಜಲವರ್ಣ, ತೈಲವರ್ಣ, ಪೆನ್ಸಿಲ್ ಗಳಿಂದ ಹಲವು ಚಿತ್ರಗಳನ್ನು ಬಿಡಿಸಿದ್ದು ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೂಲತಃ ಬೆಂಗಳೂರಿನವರು.  ಕೆನ್ ಕಲಾ ಶಾಲೆ ವಿದ್ಯಾರ್ಥಿ. ಗುರುಗಳಾದ ಹಡಪದ್ ಅವರ ಮಾಗದರ್ಶನದಲ್ಲಿ ಅದೇ ಶಾಲೆಯಲ್ಲಿಯೇ ಶಿಕ್ಷಕರಾಗಿ ನಂತರ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಕಲಾಕೃತಿಗಳು ದೇಶದಲ್ಲಿ ಅಲ್ಲದೇ  ಸಿಂಗಪುರ, ಲಂಡನ್, ನ್ಯೂಯಾರ್ಕ್‌, ಹಾಂಗ್‌ಕಾಂಗ್, ಸ್ವಿಟ್ಜರ್‌ಲೆಂಡ್‌ ನಗರಗಳಲ್ಲಿ ಪ್ರದರ್ಶನ ಕಂಡಿವೆ.  ಜೆಎಂಎಸ್ ಮಣಿಯವರಿಕೆ ಪ್ರಶಸ್ತಿಗಳ ಮಹಪೂರವೇ ಹರಿದು ಬಂದಿದೆ. ಕರ್ನಾಟಕ ರಾಜ್ಯ ಪ್ರಶಸ್ತಿ, ಎರಡು ಬಾರಿ ಲಲಿತ ಕಲಾ ಅಕಾಡೆಮಿ ‍ಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !