ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತಿನ ಕಲೆ ತಾಳಮದ್ದಲೆ’ ನಾಳೆ ಲೋಕಾರ್ಪಣೆ

Last Updated 10 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಯಕ್ಷಗಾನ ಸಾಹಿತಿ ಮತ್ತು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಶ್ರೀಧರ ಡಿ.ಎಸ್. ಅವರ ಕೃತಿ ‘ಮಾತಿನ ಕಲೆ ತಾಳಮದ್ದಲೆ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಾಳೆ(ಭಾನುವಾರ) 10 ಗಂಟೆಗೆ ನಗರದ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಂಸ್ಥೆಯ ಬಿ.ಪಿ. ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ. ಅಯೋಧ್ಯಾ ಪಬ್ಲಿಕೇಶನ್ಸ್ ಕಾರ್ಯಕ್ರಮ ಆಯೋಜಿಸುತ್ತಿದೆ.

ಆನಂದರಾಮ ಉಪಾಧ್ಯ ಕೃತಿಪರಿಚಯ ಮಾಡಿಕೊಡಲಿದ್ದಾರೆ. ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆವಹಿಸುತ್ತಾರೆ. ಕೃತಿ ಲೋಕಾರ್ಪಣೆಯ ಬಳಿಕ, ಕವಿ ಶ್ರೀಧರ್ ಡಿ.ಎಸ್. ಅವರೇ ಬರೆದಿರುವ ಭೃಗುಶಾಪ– ಯಕ್ಷಗಾನ ತಾಳಮದ್ದಲೆ ಪ್ರಸಂಗದ ಪ್ರದರ್ಶನ ನಡೆಯಲಿದೆ. ಭಾಗವತರು: ಅನಂತ ಹೆಗಡೆ ದಂತಳಿಗೆ, ಮದ್ದಲೆ: ಎ.ಪಿ. ಪಾಠಕ್

ಮುಮ್ಮೇಳ : ದೇವೇಂದ್ರ: ಡಾ.ಎಂ. ಪ್ರಭಾಕರ ಜೋಶಿ, ತಮಾಸುರ: ಸರ್ಪಂಗಳ ಈಶ್ವರ ಭಟ್, ಖ್ಯಾತಿ: ಹರೀಶ ಬಳಂತಿಮೊಗರು, ಮಹಾವಿಷ್ಣು: ಶ್ರೀಧರ ಡಿ.ಎಸ್., ಭೃಗು ಮಹರ್ಷಿ: ಅಜಿತ್ ಕಾರಂತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT