ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜುಂಡಸ್ವಾಮಿ ಕ್ಯಾರಿಕೇಚರ್‌ ಪ್ರದರ್ಶನ

Last Updated 1 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ವೈ. ಎಸ್. ನಂಜುಂಡಸ್ವಾಮಿ ಅವರು ಬರೆದ ಕ್ಯಾರಿಕೇಚರ್ ಪ್ರದರ್ಶನವನ್ನು ಏರ್ಪಡಿಸಿದೆ.

ಶಿವಮೊಗ್ಗ ಮೂಲದ ನಂಜುಂಡಸ್ವಾಮಿ ಬೆಳೆದದ್ದು ಕಲಾ ಪರಿಸರದಲ್ಲಿ. ಅವರ ತಂದೆಯೇ ಕಲಾಭ್ಯಾಸದ ಮೊದಲ ಗುರು. ನಂತರ ಶಿಲ್ಪಿ ಕೆ. ಜ್ಞಾನೇಶ್ವರ ಅವರ ಬಳಿ ರೇಖಾಶಾಸ್ತ್ರ, ಸಾಂಪ್ರದಾಯಿಕ ಕಲೆಯನ್ನು ಕ್ರಮಬದ್ಧವಾಗಿ ಕಲಿತರು. ಶಿವಮೊಗ್ಗದಲ್ಲೇ ತಮ್ಮ ಕಲಾಜೀವನ ಆರಂಭಿಸಿದ ಸ್ವಾಮಿ, ರಾಮಧ್ಯಾನಿ, ಸುಬ್ರಹ್ಮಣ್ಯ, ಜೇಮ್ಸವಾಜ್ ಅವರ ಪ್ರೋತ್ಸಾಹದಿಂದ ವ್ಯಂಗ್ಯಚಿತ್ರಕಲೆಯಲ್ಲೂ ಜನಪ್ರಿಯತೆ ಗಳಿಸಿಕೊಂಡರು.

ಅನೇಕ ಪತ್ರಿಕೆಗಳಲ್ಲೂ , ಸಾಮಾಜಿಕ ಜಾಲತಾಣಗಳಲ್ಲೂ ಅವರ ವ್ಯಂಗ್ಯಚಿತ್ರಗಳು, ಕ್ಯಾರಿಕೇಚರ್‌ಗಳು ಪ್ರಕಟಗೊಂಡಿವೆ. ಪ್ರದರ್ಶನದಲ್ಲಿ ಸ್ವಾಮಿ ಅವರ ಸುಮಾರು 90 ಆಯ್ದ ಕ್ಯಾರಿಕೇಚರ್‌ಗಳನ್ನು ಪ್ರದಸರ್ಶಿಸಲಾಗಿದೆ. ಕಲಾವಿದ ಬಿ.ಜಿ. ಗುಜ್ಜಾರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪ್ರದರ್ಶನವ

ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ನಂ. 1 ಮಿಡ್‌ಫೋರ್ಡ್‌ ಸರ್ಕಲ್‌, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ

ಸಮಯ: ನ,9ರಿಂದ 23ರವರೆಗೆ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ 10ರಿಂದ ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT