ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಸಹಜ ನಿರೂಪಣೆಯ ಕೃತಿ

Last Updated 12 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ನಿವೃತ್ತ ಪೊಲೀಸ್‌ ಅಧಿಕಾರಿ ಜೆ.ಬಿ. ರಂಗಸ್ವಾಮಿ ಅವರು ಬರೆದ ಕೃತಿ ‘ನಿನ್ನೆ ಮೊನ್ನೆ ನಮ್ಮ ಜನ’. ಕ್ರಾಂತಿ, ಯುವದಿನಗಳ ಹುಮ್ಮಸ್ಸು, ವೃತ್ತಿ ಬದುಕಿನ ಅನುಭವಗಳು ಎಲ್ಲವನ್ನೂ ಒಂದು ಕಡೆ ರಾಶಿ ಹಾಕಿ ಕಟ್ಟಿಕೊಟ್ಟಿದೆ ಈ ಕೃತಿ. ಇಲ್ಲಿನಾಡು ನುಡಿಯ ಹೋರಾಟದಲ್ಲಿ ತೊಡಗಿಸಿಕೊಂಡ ನೆನಪುಗಳಿವೆ. ವಿದ್ಯಾರ್ಥಿ ಜೀವನದಲ್ಲಿ ಕುಲಪತಿಯವರಿಗೇ ತಿರುಗಿಬಿದ್ದ ಘಟನೆಗಳ ವಿವರಗಳಿವೆ. ದೇವೇಗೌಡರ ಒಡನಾಟ ಮತ್ತು ಮಹತ್ವದ ಘಟನೆಗಳ ಉಲ್ಲೇಖವಿದೆ. ಕೃತಿಯ ಕೆಲವು ಲೇಖನಗಳು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತವೆ.

ವೃತ್ತಿ ಬದುಕಿನ ಅನುಭವಗಳು, ಘಟನೆಗಳು ಒಂದಿಷ್ಟು ದಾಖಲೆಗಳಾಗಿ ಇಲ್ಲಿವೆ. ಪೈಲ್ವಾನ್‌ ರುದ್ರ (ಮೂಗ), ಪ್ರಮೋದಾ ದೇವಿ ಅವರ ಬಗೆಗಿನ ಲೇಖನಗಳು, ಇಂದಿರಾಗಾಂಧಿಯವರ ಬಂದೋಬಸ್ತ್‌ನಲ್ಲಿ ತೊಡಗಿದ್ದ ಅನುಭವಗಳು... ಇವೆಲ್ಲಾ ಮೈಸೂರಿನ ಸಾಮಾಜಿಕ, ಸಾಂಸ್ಕೃತಿಕ ನೆನಪುಗಳನ್ನು ತೆರೆದಿಟ್ಟಿವೆ. ವೃತ್ತಿಬದುಕಿನಲ್ಲಿ ಅನುಭವಿಸಿದ ಕಸಿವಿಸಿಗಳನ್ನು ಮುಲಾಜಿಲ್ಲದೇ ಲೇಖಕರು ಹೇಳಿಕೊಂಡಿದ್ದಾರೆ. ಹಾಗಾಗಿ ಇದರಲ್ಲಿ ಸಹಜ ನಿರೂಪಣೆ ಇದೆ.

ಪ್ರೊ.ಕೃಷ್ಣೇಗೌಡರ ಮುನ್ನುಡಿಯೇ ಓದಿಗೊಂದು ಒಳ್ಳೆಯ ಆರಂಭ ಕೊಟ್ಟಿದೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿ, ಅಧಿಕಾರಿಯಾಗಿ, ಬರಹಗಾರರಾಗಿ ಲೇಖಕರ ಅರಿವಿನ ವಿಸ್ತಾರ ಮತ್ತು ಜೀವನಾನುಭವವನ್ನು ಕಟ್ಟಿಕೊಟ್ಟಿದೆ.

ಕೃತಿ: ನಿನ್ನೆ ಮೊನ್ನೆ ನಮ್ಮ ಜನ

ಲೇ: ಜೆ.ಬಿ.ರಂಗಸ್ವಾಮಿ

ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ ಮೈಸೂರು

ಸಂ: 99005 55255

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT