ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ‘ಫ್ಲೈಯಿಂಗ್‌ ಸಿಖ್‌’ ಜೀವನ ಕಥನ

Last Updated 11 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಿಲ್ಖಾ ಸಿಂಗ್‌
ಲೇ:
ಆರ್‌.ಬಿ.ಗುರುಬಸವರಾಜ
ಪ್ರ: ಸಾಹಿತ್ಯಲೋಕ ಪಬ್ಲಿಕೇಷನ್ಸ್‌
ಸಂ: 9945939436

ವೃತ್ತಿಯಲ್ಲಿ ಶಿಕ್ಷಕರಾಗಿರುವ ಆರ್‌.ಬಿ.ಗುರುಬಸವರಾಜ ಅವರ ‘ಮಿಲ್ಖಾ ಸಿಂಗ್‌– ಕಾಲದ ಓಟದೊಂದಿಗೆ ಮುಖಾಮುಖಿ’ ಕೃತಿಯು ಲೇಖಕರೇ ಹೇಳುವಂತೆ ದಿಢೀರ್‌ ಮಾಡಿದ ಪಾಕ. ‘ದಿ ರೇಸ್‌ ಆಫ್‌ ಮೈ ಲೈಫ್‌’ ಕೃತಿಯಿಂದ ಮೂಲ ಮಾಹಿತಿಯನ್ನು ಪಡೆದು ಮಿಲ್ಖಾ ಸಿಂಗ್‌ ಕ್ರೀಡಾಜೀವನದ ಕಥನಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ. ದೇಶ ವಿಭಜನೆಯ ವೇಳೆ ಮಿಲ್ಖಾ ಅನುಭವಿಸಿದ ಯಾತನೆಯ ಜತೆ ಜತೆಗೆ ‘ಫ್ಲೈಯಿಂಗ್‌ ಸಿಖ್‌’ ರೂಪುಗೊಂಡ ಕಥೆಯೂ ಇಲ್ಲಿ ಹರಡಿಕೊಂಡಿದೆ.

ಮಿಲ್ಖಾ ಅವರು ತೀರಿಹೋದ ದಿನದಿಂದ ಕೇವಲ ಹತ್ತು ದಿನಗಳಲ್ಲಿ ಈ ಕೃತಿಯ ಬರಹವನ್ನು ಪೂರ್ಣಗೊಳಿಸಿದ ಲೇಖಕರು ಮಾಡಿದ್ದು ದಿಢೀರ್‌ ಪಾಕವಾದರೂ ಕ್ರೀಡಾ ಸಾಧಕನ ಬದುಕಿನ ಕೊಂಚ ರುಚಿಯನ್ನು ಕಟ್ಟಿಕೊಡುತ್ತದೆ. ಮಿಲ್ಖಾ ಅವರ ಬಗ್ಗೆ ಕನ್ನಡದಲ್ಲಿ ಬಂದ ಮೊತ್ತಮೊದಲ ಕೃತಿಯೂ ಇದಾಗಿದೆ.

ಈ ಮಹಾನ್‌ ಕ್ರೀಡಾ ತಾರೆಯ ಬದುಕಿನ ಪ್ರೇರಣೆಯಿಂದ ಕ್ರೀಡಾಲೋಕಕ್ಕೆ ಒಂದಷ್ಟು ಕಿವಿಮಾತು, ಮಕ್ಕಳ ಭವಿಷ್ಯಕ್ಕೊಂದಿಷ್ಟು ಮಾರ್ಗದರ್ಶನದ ಮಾತುಗಳನ್ನೂ ಲೇಖಕರು ಈ ಕೃತಿಯ ಕೊನೆಯಲ್ಲಿ ಪೋಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT