ಮಂಗಳವಾರ, ಫೆಬ್ರವರಿ 25, 2020
19 °C

ತಥಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾದಂಬರಿ: ತಥಾಗತ

ಕಾದಂಬರಿಕಾರ: ಸಂಪನ್ನ ವಿ.ಮುತಾಲಿಕ

ಪ್ರಕಾಶನ: ಸಾಹಿತ್ಯ ಪ್ರಕಾಶನ

 ಪುಟಗಳು: 349

ದರ: ₹350

ಪ್ರಾಚೀನ ಮತ್ತು ಆಧುನಿಕ ಸಂದರ್ಭಗಳಲ್ಲಿ ನಡೆಯುವ ಧಾರ್ಮಿಕ, ಆಧ್ಯಾತ್ಮಿಕ ಚರ್ಚೆಗಳಲ್ಲಿ ಹೊರ ಹೊಮ್ಮುವ ಹೊಸ ನೋಟಗಳನ್ನು ಈ ಕಾದಂಬರಿ ನೀಡುತ್ತದೆ.

ಮೂರು ಖಂಡಗಳಲ್ಲಿ ಕಥೆಯು ರೂಪುಗೊಂಡಿದ್ದು, ಹೊಯ್ಸಳರ ಕಾಲದಲ್ಲಿ ಬರುವ ಪೂರ್ಣಾನಂದರು , ಅವರ ಮಗ ವರದರಾಜ, ಜೈನ ಸೈನ್ಯಾಧಿಕಾರಿಯಾದ ಭರತೇಶ್ವರನ ಮಗಳು ಯಶೋದಾ, ಜೈನ ಸನ್ಯಾಸಿ ಜಿನದತ್ತ, ಮಾತು ಕಡಿಮೆಯಾದರೂ ಕೇವಲ ತನ್ನ ನಿಲುವಿನಲ್ಲಿಯೇ ಗಮನ ಸೆಳೆಯುವ ಪೂರ್ಣಾನಂದರ ಮಡದಿ ನೀಳಾದೇವಿ ಈ ಖಂಡದಲ್ಲಿ ಬರುವ ಪ್ರಮುಖ ಪಾತ್ರಗಳು 

ಎರಡನೇಯ ಖಂಡದಲ್ಲಿ ಆಧುನಿಕ ಕಾಲಘಟ್ಟವನ್ನು ಚಿತ್ರಿಸಲಾಗಿದೆ. ಮೂರನೇ ಖಂಡವು ಎರಡನೇ ಖಂಡದ ಮುಂದುವರಿದ ಭಾಗವೇನೋ ಎಂದು ಅನಿಸುತ್ತದೆ. ವರ್ಣವು ಜಾತಿಯಾಗಿ ಮಾರ್ಪಾಡಾದ ಸಂಗತಿಯನ್ನು ಈ ಪುಸ್ತಕ ಹೇಳುತ್ತದೆ. ಜತೆಗೆ ಧರ್ಮ ಮತ್ತು ವರ್ಣಗಳ ಕುರಿತು ಜೀವನ ದರ್ಶನ ನೀಡುವ ಕಾದಂಬರಿ ಇದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)