ಸೋಮವಾರ, ಮಾರ್ಚ್ 30, 2020
19 °C

‘ಡಿಕೆಡಿ ಲಿಟ್ಲ್ ಮಾಸ್ಟರ್ಸ್‌’ ಶೋ ನಾಳೆ ಪ್ರಸಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡಾನ್ಸ್ ಕರ್ನಾಟಕ ಡಾನ್ಸ್ (ಡಿಕೆಡಿ) ಲಿಟ್ಲ್ ಮಾಸ್ಟರ್ಸ್‌ ಶೋ ಗ್ರ್ಯಾಂಡ್ ಫಿನಾಲೆಯು ಹಾಸನದ ಚನ್ನರಾಯಪಟ್ಟಣದಲ್ಲಿ ಈಚೆಗೆ ನಡೆಯಿತು. ಗ್ರ್ಯಾಂಡ್ ಫಿನಾಲೆಯ ಚಿತ್ರೀಕರಣವನ್ನು ಸೆಪ್ಟೆಂಬರ್ 23ರಂದು ಸಂಜೆ 7.30ಕ್ಕೆ ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತದೆ.

ಫಿನಾಲೆಗೆ 35,000ಕ್ಕೂ ಹೆಚ್ಚು ಜನರು ಸಾಕ್ಷಿಯಾಗಿದ್ದರು. ನಟಿ ಅನುಶ್ರೀ ಅವರ ಪಟಪಟ ಮಾತುಗಳ ನಿರೂಪಣಾ ಶೈಲಿಯು ಫಿನಾಲೆಯಲ್ಲೂ ಮುಂದುವರೆದಿದ್ದು, ನಟಿ ರಕ್ಷಿತಾ, ಸಂಗೀತ ಸಂಯೋಜಕ ಅರ್ಜುನ್ ಜನ್ಯ ಮತ್ತು ನಟ ವಿಜಯ್ ರಾಘವೇಂದ್ರ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು ಎಂದು ವಾಹಿನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸೀಸನ್‌ನಲ್ಲಿ 12 ಸ್ಪರ್ಧಿಗಳು ಸ್ಪರ್ಧಿಸಿದ್ದರು. 15 ವಾರಗಳ ವರೆಗೆ ನಡೆದ ಈ ನೃತ್ಯ ಪ್ರಯಾಣದಲ್ಲಿ ಜ್ಞಾನೇಶ್ವರ್-ಲಹರಿ, ಸೃಜನ್-ಐಶ್ವರ್ಯ, ಪ್ರೀತಂ-ಅನ್ಷಿಕಾ ಮತ್ತು ಸೂರಜ್-ಶ್ರಾವ್ಯ ಅಂತಿಮ ಘಟ್ಟ ತಲುಪಿದ್ದರು. ಅದ್ಭುತ ನೃತ್ಯ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಮಧ್ಯರಾತ್ರಿ 1 ಗಂಟೆ ವರೆಗೆ ಜನರು ಸ್ಥಳದಲ್ಲಿಯೇ ನೆರೆದಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)