ವಿಶ್ವವಿಖ್ಯಾತ ಕಥಕ್ ನೃತ್ಯ ದಿಗ್ಗಜ ಪಂಡಿತ್ ಬಿರ್ಜು ಮಹಾರಾಜ್ ನಿಧನ

ನವದೆಹಲಿ: ವಿಶ್ವವಿಖ್ಯಾತ ಕಥಕ್ ನೃತ್ಯ ದಿಗ್ಗಜ ಪಂಡಿತ್ ಬಿರ್ಜು ಮಹಾರಾಜ್ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಪಂ. ಬಿರ್ಜು ಮಹಾರಾಜ್ ಅವರು ತಮ್ಮ ದೆಹಲಿ ನಿವಾಸದಲ್ಲಿ ಹೃದಯಾಘಾತದಿಂದ ಭಾನುವಾರ ರಾತ್ರಿ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
Kathak maestro Pandit Birju Maharaj passes away, says his relative
(File photo) pic.twitter.com/jabPHX1cly
— ANI (@ANI) January 17, 2022
ಸಾವಿರಾರು ಜನ ಶಿಷ್ಯರು, ಅನುಯಾಯಿಗಳನ್ನು ಅವರು ಅಗಲಿದ್ದಾರೆ. ಪಂ. ಬಿರ್ಜು ಮಹಾರಾಜ್ ಅವರ ನಿಧನಕ್ಕೆ ಸಂಗೀತ ಕ್ಷೇತ್ರದ ದಿಗ್ಗಜರು ಸೇರಿದಂತೆ ವಿವಿಧ ಕೇತ್ರಗಳ ಗಣ್ಯರು, ಅಭಿಮಾನಿಗಳು, ಶಿಷ್ಯರು ಸಾಮಾಜಿಕ ಮಾಧ್ಯಮಗಳ ಮೂಲಕ ಸಂತಾಪ ಸೂಚಿಸಿದ್ದಾರೆ.
1937 ಫೆಬ್ರುವರಿ 4ರಂದು ಕಥಕ್ ಕಲಾವಿದರ ಕುಟುಂಬದಲ್ಲಿ ಬಿರ್ಜು ಮಹಾರಾಜ್ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಕಥಕ್ ಅಭ್ಯಾಸ ಮಾಡಿದರು. ನಂತರ ನೃತ್ಯವನ್ನೇ ವೃತ್ತಿಯಾಗಿ ಸ್ವೀಕರಿಸಿ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದರು.
ಕಥಕ್ ನೃತ್ಯ ಶಾಲೆ ಸ್ಥಾಪಿಸಿ ಸಾವಿರಾರು ಜನರಿಗೆ ಮಾರ್ಗದರ್ಶನ ನೀಡಿದ್ದಾರೆ. ನೃತ್ಯ ಮಾತ್ರವಲ್ಲದೇ ಡ್ರಮ್, ತಬಲಾ ನುಡಿಸುವುದರಲ್ಲೂ ಸಿದ್ಧಹಸ್ತರಾಗಿದ್ದರು. ಹಾಗೇ ಗಾಯನದಲ್ಲೂ ಹೆಸರು ಮಾಡಿದ್ದರು.
ಭಾರತ ಸರ್ಕಾರ ಅವರಿಗೆ ಸಂಗೀತಾ ನಾಟಕ ಆಕಾಡೆಮಿ ಪ್ರಶಸ್ತಿ ಹಾಗೂ ಪದ್ಮ ಪ್ರಶಸ್ತಿ ನೀಡಿ ಗೌರವಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.