ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಝೇಂಕಾರ’ ಸಂಗೀತೋತ್ಸವ ಇಂದು

Last Updated 22 ಜೂನ್ 2019, 10:10 IST
ಅಕ್ಷರ ಗಾತ್ರ

ಹಿಂದೂಸ್ತಾನಿ ರಾಗಗಳಲ್ಲಿ ಸಿದ್ಧಹಸ್ತರಾದ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರು ಝೇಂಕಾರ ಸಂಗೀತೋತ್ಸವದಲ್ಲಿ ಸಂಗೀತಾಸಕ್ತರ ಮನತಣಿಸಲು ಸಜ್ಜಾಗಿದ್ದಾರೆ. ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯರಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಸಣಗಿ ಅವರು ಆಕಾಶವಾಣಿಯ ‘ಎ’ ಶ್ರೇಣಿಯ ಹಿಂದೂಸ್ತಾನ ಗಾಯಕರು.

ವಿಶ್ವ ಸಂಗೀತ ದಿನಾಚರಣೆ ನಿಮಿತ್ತ ಶನಿವಾರ (ಜೂನ್ 22) ಝೇಂಕಾರ ಭಾರತಿ ಮ್ಯೂಸಿಕ್ ಅಂಡ್ ಕಲ್ಚರಲ್ ಸೆಂಟರ್ ಆಯೋಜಿಸಿರುವ ಸಂಸ್ಥೆಯ ಐದನೇ ವಾರ್ಷಿಕೋತ್ಸವದಲ್ಲಿ ವೈವಿಧ್ಯಮಯ ಸಂಗೀತವನ್ನು ಸವಿಯಬಹುದು. ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಪಂಡಿತ್ ಬಸವರಾಜ ಮುಗಳಖೋಡಹಾಗೂ ಹಿಂದೂಸ್ತಾನಿ ಗಾಯಕ ಪಂಡಿತ್ಶರಣ್ ಚೌಧರಿ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ.

ಕೆ.ಎಸ್. ಗಣೇಶ್ ಕುಮಾರ್, ಮಹಾಂತೇಶ್ ಕುಮಾರ್ ಹಾಗೂ, ಶೋಭಾ ಇಂಚಗೇರಿಮಠ ಅವರಿಂದ ವಚನ, ದಾಸರಪದ ಹಾಗೂ ಭಾವಸಂಗಮ ಮೂಲಕ ವೈವಿಧ್ಯಮಯ ಸಂಗೀತ ಉಣಬಡಿಸಲಿದ್ದಾರೆ. ಸಂಗೀತ ನಿರ್ದೇಶಕ ಸಾಧುಕೋಕಿಲ, ಚಿತ್ರನಟ ರಾಮಕೃಷ್ಣ ಅವರ ಉಪಸ್ಥಿತಿ ಇದೆ.

ಗಣಪತಿ ಭಟ್ ಹಾಸಣಗಿ ಅವರಿಗೆ ‘ಝೇಂಕಾರ ಗಾನವಾರಿಧಿ’, ಹೆಸರಾಂತ ತಬಲಾ ವಾದಕ ಅಮೃತೇಶ್ ಕುಲಕರ್ಣಿ ಅವರಿಗೆ ‘ಝೇಂಕಾರ ತಬಲಾ ವಾರಿಧಿ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ಬಸವರಾಜ ಮುಗಳಖೋಡ ಅವರು ತಿಳಿಸಿದ್ದಾರೆ.

ಸ್ಥಳ: ನಗರ ಕೇಂದ್ರ ಗ್ರಂಥಾಲಯ ಸಭಾಂಗಣ, ಹಂಪಿನಗರ, ಸಮಯ: ಶನಿವಾರ ಜೂನ್ 22ರಂದು ಸಂಜೆ 4 ಗಂಟೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT