ಗುರುವಾರ , ಡಿಸೆಂಬರ್ 1, 2022
22 °C

ಪುಟಾಣಿ ಕವಿತೆ | ಯಾರಿಗೆ, ಯಾವುದು?

ಕೆ. ವಿ. ತಿರುಮಲೇಶ್ Updated:

ಅಕ್ಷರ ಗಾತ್ರ : | |

ಹಣ್ಣು ಹಣ್ಣು ಯಾವ ಹಣ್ಣು
ತಿಂದರೆ ಮುಗಿಯದ ಮಾವಿನ ಹಣ್ಣು

ಕಣ್ಣು ಕಣ್ಣು ಯಾವ ಕಣ್ಣು
ತಾಳೆಮರದ ಬೊಂಡದ ಕಣ್ಣು

ಕಾಯಿ ಕಾಯಿ ಯಾವ ಕಾಯಿ
ಬಿಸಿಲಿಗೆ ತಣ್ಣನೆ ಬಚ್ಚಂಕಾಯಿ

ಹೂವು ಹೂವು ಯಾವ ಹೂವು
ಸಂಜೆಗೆ ಬಿರಿಯುವ ಮಲ್ಲಿಗೆ ಹೂವು

ಆಟ ಆಟ ಯಾವ ಆಟ
ಎಸೆದರೆ ಪುಟಿಯುವ ಚೆಂಡಿನ ಆಟ

ಊಟ ಊಟ ಯಾವ ಊಟ
ಪರಿಪರಿ ಪಲ್ಯದ ಹಬ್ಬದ ಊಟ

ತೋಟ ತೋಟ ಯಾವ ತೋಟ
ಬಾ ಬಾ ಅಳಿಲೇ ಎನ್ನುವ ತೋಟ

ಬಿಲ್ಲು ಬಿಲ್ಲು ಯಾವ ಬಿಲ್ಲು
ಏಳು ಬಣ್ಣಗಳ ಕಾಮನ ಬಿಲ್ಲು

ನೀರು ನೀರು ಯಾವ ನೀರು
ಹೊಳೆಯಲಿ ಹರಿಯುವ ಹೂಬಿಸಿ ನೀರು

ಗಂಟೆ ಗಂಟೆ ಯಾವ ಗಂಟೆ
ಬೆಕ್ಕಿನ ಕೊರಳಿಗೆ ಕಟ್ಟುವ ಗಂಟೆ

ಪಾಠ ಪಾಠ ಯಾವ ಪಾಠ
ಸತ್ಯವಂತನಾದ ಮಾದನ ಪಾಠ

ಹಾಡು ಹಾಡು ಯಾವ ಹಾಡು
ಪುಣ್ಯಕೋಟಿ ಗೋವಿನ ಹಾಡು

ಲೆಕ್ಕ ಲೆಕ್ಕ ಯಾವ ಲೆಕ್ಕ
ಬಯ್ಯಾಡ್ತ್ ಬುಕ್ಕ ಮಾಡುವ ಲೆಕ್ಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.