ಶನಿವಾರ, ಜೂನ್ 19, 2021
22 °C
ಮಕ್ಕಳ ದಿನಾಚರಣೆ ವಿಶೇಷ

ನನ್ನ ಕನಸು

ಎಸ್. ಕಲಾಧರ್ ಶಿಡ್ಲಘಟ್ಟ Updated:

ಅಕ್ಷರ ಗಾತ್ರ : | |

ನನ್ನ ಕನಸು

ಅಮ್ಮ ನಾನೂ ನೀನು

ಆಕಾಶಕೆ ಹಾರೋಣವೇನು?

ಹಕ್ಕಿಯ ಕಣ್ಣಲಿ ಭೂಮಿ

ಹೇಗಿರುವುದು ನೋಡೋಣವೇನು?

 

ದೇವರು ಬರೆದಿಹ ಚಿತ್ರ

ಪ್ರಕೃತಿ ಸುರಿದಿಹ ಬಣ್ಣ

ಹಾರುತ ಹಾರುತ ನೋಡಿ

ತುಂಬಿಸಿಕೊಳ್ಳೋಣ ಕಣ್ಣ!

 

ಮೋಡದ ಮೈಯಲಿ ತೂರಿ

ಮಳೆಯನು ಮಾತಾಡಿಸೋಣ

ಹದ್ದಿನ ಪಕ್ಕಕೆ ಹಾರಿ ಒಂದು

ಹಾಯ್ ಹೇಳಿಬಿಡೋಣ!

 

ಓಝೋನ್ ಪದರದ ತೂತು

ಸಾಧ್ಯವಾದರೆ ಹಲಿದು ಬಿಡೋಣ

‘ಹೊಗೆಯನು ಬಿಡದಿರು ಹೆಚ್ಚು’

ವಿಮಾನದ ಕಿವಿ ಹಿಂಡೋಣ!

 

ಅಮ್ಮ ಇದು ನನ್ನ ಕನಸೇ

ಹೇಳೇ ಈಡೇರುವುದೇನು?

ಭೂಮಿಯ ಜಂಜಡ ಮರೆತು

ಸೇರೋಣ ನಾವು ಬಾನು!

***

ಒಂದು ಹಳೇ ಗಾಡಿ ಒಂದು ಹೊಸ ಗಾಡಿ

ನಾವು ಚಿಕ್ಕವರಾಗಿದ್ದಾಗ ಗಾಡಿ ಎಂದರೆ ತುಂಬಾ ಇಷ್ಟ ನಮಗೆ. ಒಂದು ದಿನ ನಮ್ಮಪ್ಪ ನಮ್ಮ ಚಿಕ್ಕಪ್ಪನ ಹತ್ತಿರ ಒಂದು ಎಕ್ಸ್‌ಎಲ್ ಗಾಡಿ ತೆಗೆದುಕೊಂಡನು. ತುಂಬಾ ಇಷ್ಟವಾಯಿತು. ಅದಕ್ಕೆ ಪೂಜೆ ಎಲ್ಲಾ ಮಾಡಿದೆವು. ಆದರೆ ಒಂದು ದಿನ ಅದು ರಿಪೇರಿ ಆಯಿತು. ಆವಾಗ ನನಗೆ ಬೇಜಾರಾಯಿತು. ಪಕ್ಕದ ಚೀಮಂಗಲದಲ್ಲಿ ಮೆಕಾನಿಕ್ ಅಂಗಡಿಗೆ ಹಾಕಿದರು. ಮೂರು ದಿನ ಆಯಿತು. ಆವಾಗ ಗಾಡಿ ಬಂದಿತು.

ಒಂದು ದಿನ ನಮ್ಮ ಅಪ್ಪ ಕೈವಾರಕ್ಕೆ ಹೋಗಿ ರಾತ್ರಿ ಒಂಬತ್ತು ಗಂಟೆಗೆ ಬರುವಾಗ ಅಪಘಾತವಾಯಿತು! ಅಪ್ಪ ಆಸ್ಪತ್ರೆಗೆ ಹೋಗಿ ಬಂದರು. ಗಾಡಿಗೆ ಎಕ್ಸಲೇಟರ್ ಕಿತ್ತುಹೋಗಿತ್ತು. ಆಮೇಲೆ ನಮ್ಮ ಹುಳು ಮನೆಗೆ ಹುಳು ಇಕ್ಕಲು ಬಂದಿದ್ದವರು ದಿಬ್ಬೂರಹಳ್ಳಿ ಬೈಪಾಸ್ ರಸ್ತೆಯಲ್ಲಿ ಪ್ರಗತಿ ಮೋಟಾರ‍್ಸ್ ಶೋರೂಮ್‌ನಲ್ಲಿ ಹೊಸ ಎಕ್ಸ್‌ಎಲ್ ಗಾಡಿಯನ್ನು ಕೊಡಿಸಿದರು. ಆಗ ನಾವು ಆ ಗಾಡಿಗೂ ಪೂಜೆ ಮಾಡಿದೆವು. ಇಷ್ಟೇ ಈ ಲೇಖನ ಮುಗಿಯಿತು.

-ಸಂತೋಷ, 8ನೇ ತರಗತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕನ್ನಮಂಗಲ
 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.