ಗುರುವಾರ , ಸೆಪ್ಟೆಂಬರ್ 24, 2020
27 °C

ಓಡಿಸು ಪ್ಲಾಸ್ಟಿಕ್ ಭೂತ (ಮಕ್ಕಳ ಕವಿತೆ)

ಡಾ.ಕರವೀರಪ್ರಭು ಕ್ಯಾಲಕೊಂಡ Updated:

ಅಕ್ಷರ ಗಾತ್ರ : | |

ಬಣ್ಣ ಬಣ್ಣದ ಭಿನ್ನ ಮಾಟದ
ಪ್ಲಾಸ್ಟಿಕ್ ಭೂತ ಬಂತಮ್ಮ

ಚಿನ್ನರ ಆಟಿಗೆ ಮನೆ ಸಾಮಾನಿಗೆ
ಕಾರಿಗೆ ಪ್ಲಾಸ್ಟಿಕ್ ಬೇಕಮ್ಮ

ಮೆಲ್ಲ ಮೆಲ್ಲಗೆ ಎಲ್ಲರ ಮನೆಗೆ
ನುಗ್ಗಿ ಬಿಟ್ಟಿದೆ ನೋಡಮ್ಮಾ

ಬಾಳಿನ ಹೆಜ್ಜೆ ಹೆಜ್ಜೆಗೂ ಹಕ್ಕು
ಸ್ಥಾಪಿಸಿ ಬಿಟ್ಟಿದೆ ಕಾಣಮ್ಮ

ಎಲ್ಲಡೆ ತನಗೆ ಮಾನ್ಯತೆ ಕೊಡುಗೆ
ಎನ್ನುವ ಸಂಭ್ರಮ ಅದಕಮ್ಮ

ಇದರೊಡನಾಟ ಹೆಚ್ಚಲು ಕಾಟ
ಕಾದಿದೆ ಜನಕೆ ಕೇಳಮ್ಮ

ಪಟ್ಟಿನಿಂದ ದೂರ ಅಟ್ಟಲು
ದಿಟ್ಟ ಮನಸು ಬೇಕಮ್ಮ

ಪ್ಲಾಸ್ಟಿಕ್ ಭೂತ ಜಗದಿಂದೋಡಲು
ಬಾಳು ಬಂಗಾರ ತಿಳಿಯಮ್ಮ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.