ನಿಮಗೆ ಸದ್ದು ಮಾಡುವ ಚಟ
ನೂರಾರು ಚಟ್ಟಗಳಿರಲಿ ನಿರ್ಜೀವಿಗಳು
ಚೆಲ್ಲಾಪಿಲ್ಲಿಯಾಗಿರಲಿ
ಅತಿರೇಕದ ಅಕ್ಷರಗಳನುಸುರುವ
ನಿಮಗೆ ಸದ್ದು ಮಾಡುವ ಚಟ;

ಹತ್ತಾರಂಗುಲದ ಎದೆ ಇನ್ನೂ
ಅಗಲಿಸಿದ ಟಿವಿಯ ಪರದೆ
ಎರಡೂ ಜಾದುಗಾರನ ಸಂತತಿಯೇ
ಜೀವ ಬಣ್ಣಗಳಲಿಲ್ಲ ಅಡ್ಡಿಯೇನಿಲ್ಲ
ನಿರ್ವರ್ಣದಲೂ ರಂಗೇರಿಸುವ
ನಿಮಗೆ ಸದ್ದು ಮಾಡುವ ಚಟ;

ಮತಗಟ್ಟೆಗಳಡಿ ತಲವಾರು
ಮತಿಗೆಟ್ಟವರಿಗೆ ಉನ್ಮಾದದ ಸೂರು
ತಲೆಗೆ ಸುತ್ತಿದ ತುಂಡುಡುಪು ಸಾಕು
ಇತಿಹಾಸದುತ್ಖನಕೆ ,,,ಕೊರಳನಾವರಿಸುವ
ನಾರುಮಡಿಗೆ ಹುಗಿದ ಪರಂಪರೆಯ
ಸೋಗು ದುಡಿವ ಕೈಗಳಿಗಂಟಲಿ
ನಿಮಗೆ ಸದ್ದು ಮಾಡುವ ಚಟ;

ಯಾರದಾದರೇನು ಚಿಮ್ಮುವ ರಕ್ತ
ಹಣೆಯ ಮೇಲಿನ ಭಾವ ಉನ್ಮತ್ತ
ಹೊರುವ ಬೆನ್ನು ಕೆಂಪೇರಲು
ಚಾಟಿಯೇ ಬೇಕಿಲ್ಲ ಬಡತನವೇ ಸಾಕು
ಮಂದಿರದ ಗೋಡೆ ಮಸೀದಿಯ ನೆಲಹಾಸು
ಬಿರುಕಿನ ಸಂದುಗಳಲಿ ಚೀರಾಟ
ನಿಮಗೆ ಸದ್ದು ಕೇಳುವ ಚಟ;

ಹಸಿವಿಗೊಂದು ಕ್ಷೀಣ ಧ್ವನಿಯಿದೆ
ಹಸಿದ ಹುಲಿಗೂ ಧ್ವನಿಯ ಅರಿವಿದೆ
ನಿತ್ರಾಣಿಗಳನಳಿಸುವ ಬಾಂಬುಗಳು
ನಿಮ್ಮ ಲೇಖನಿಗಳಲಡಗಿವೆ
ವಾಕ್ ಝರಿಯ ಪದಪುಂಜಗಳಲಿ
ಜೀವ ಹಿಸುಕುವ
ನಿಮಗೆ ಸದ್ದು ಕೇಳುವ ಚಟ;

ಕ್ಷಿಪಣಿಗಳು ಡ್ರೋನುಗಳು ತ್ರಿಶೂಲ
ತಲವಾರುಗಳು ರಕ್ಷಕರ ಗುಂಡುಗಳು
ತಪತಪನೆ ಉದುರುವ ಶವಗಳಲಿ
ಇರುವುದೊಂದೇ ಕೂಗು ,,,,,
ನಾವೇ ಏಕಾಗಬೇಕು ?????
ಸಾವು ಮಳೆಗರೆದಾಗ ಸಂಭ್ರಮಿಸುವ
ನಿಮಗೆ ಸದ್ದು ಕೇಳುವ ಚಟ;

ಸದ್ದಿಲ್ಲದೆ ನಿದ್ರಿಸಿದ ಎಳೆಗಂದನ
ಎದೆಬಡಿತ ಸದ್ದಾಗುವುದೇ ಇಲ್ಲ
ಸದ್ದಾಗುವುದೇ ಇಲ್ಲ !!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ನಿಮಗೆ ಸದ್ದು ಮಾಡುವ ಚಟ
ನೂರಾರು ಚಟ್ಟಗಳಿರಲಿ ನಿರ್ಜೀವಿಗಳು
ಚೆಲ್ಲಾಪಿಲ್ಲಿಯಾಗಿರಲಿ
ಅತಿರೇಕದ ಅಕ್ಷರಗಳನುಸುರುವ
ನಿಮಗೆ ಸದ್ದು ಮಾಡುವ ಚಟ;

ಹತ್ತಾರಂಗುಲದ ಎದೆ ಇನ್ನೂ
ಅಗಲಿಸಿದ ಟಿವಿಯ ಪರದೆ
ಎರಡೂ ಜಾದುಗಾರನ ಸಂತತಿಯೇ
ಜೀವ ಬಣ್ಣಗಳಲಿಲ್ಲ ಅಡ್ಡಿಯೇನಿಲ್ಲ
ನಿರ್ವರ್ಣದಲೂ ರಂಗೇರಿಸುವ
ನಿಮಗೆ ಸದ್ದು ಮಾಡುವ ಚಟ;

ಮತಗಟ್ಟೆಗಳಡಿ ತಲವಾರು
ಮತಿಗೆಟ್ಟವರಿಗೆ ಉನ್ಮಾದದ ಸೂರು
ತಲೆಗೆ ಸುತ್ತಿದ ತುಂಡುಡುಪು ಸಾಕು
ಇತಿಹಾಸದುತ್ಖನಕೆ ,,,ಕೊರಳನಾವರಿಸುವ
ನಾರುಮಡಿಗೆ ಹುಗಿದ ಪರಂಪರೆಯ
ಸೋಗು ದುಡಿವ ಕೈಗಳಿಗಂಟಲಿ
ನಿಮಗೆ ಸದ್ದು ಮಾಡುವ ಚಟ;

ಯಾರದಾದರೇನು ಚಿಮ್ಮುವ ರಕ್ತ
ಹಣೆಯ ಮೇಲಿನ ಭಾವ ಉನ್ಮತ್ತ
ಹೊರುವ ಬೆನ್ನು ಕೆಂಪೇರಲು
ಚಾಟಿಯೇ ಬೇಕಿಲ್ಲ ಬಡತನವೇ ಸಾಕು
ಮಂದಿರದ ಗೋಡೆ ಮಸೀದಿಯ ನೆಲಹಾಸು
ಬಿರುಕಿನ ಸಂದುಗಳಲಿ ಚೀರಾಟ
ನಿಮಗೆ ಸದ್ದು ಕೇಳುವ ಚಟ;

ಹಸಿವಿಗೊಂದು ಕ್ಷೀಣ ಧ್ವನಿಯಿದೆ
ಹಸಿದ ಹುಲಿಗೂ ಧ್ವನಿಯ ಅರಿವಿದೆ
ನಿತ್ರಾಣಿಗಳನಳಿಸುವ ಬಾಂಬುಗಳು
ನಿಮ್ಮ ಲೇಖನಿಗಳಲಡಗಿವೆ
ವಾಕ್ ಝರಿಯ ಪದಪುಂಜಗಳಲಿ
ಜೀವ ಹಿಸುಕುವ
ನಿಮಗೆ ಸದ್ದು ಕೇಳುವ ಚಟ;

ಕ್ಷಿಪಣಿಗಳು ಡ್ರೋನುಗಳು ತ್ರಿಶೂಲ
ತಲವಾರುಗಳು ರಕ್ಷಕರ ಗುಂಡುಗಳು
ತಪತಪನೆ ಉದುರುವ ಶವಗಳಲಿ
ಇರುವುದೊಂದೇ ಕೂಗು ,,,,,
ನಾವೇ ಏಕಾಗಬೇಕು ?????
ಸಾವು ಮಳೆಗರೆದಾಗ ಸಂಭ್ರಮಿಸುವ
ನಿಮಗೆ ಸದ್ದು ಕೇಳುವ ಚಟ;

ಸದ್ದಿಲ್ಲದೆ ನಿದ್ರಿಸಿದ ಎಳೆಗಂದನ
ಎದೆಬಡಿತ ಸದ್ದಾಗುವುದೇ ಇಲ್ಲ
ಸದ್ದಾಗುವುದೇ ಇಲ್ಲ !!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.