ಮಂಗಳೂರು: ಅಂಗನವಾಡಿ ಪುಟಾಣಿಗಳಿಗೆ ಇನ್ನು ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ ಆಹಾರ ಸೇವಿಸುವ ಯೋಗ. ಈ ತಿಂಗಳಿನಿಂದ ಜಿಲ್ಲೆಯ ಅಂಗನವಾಡಿ ಮಕ್ಕಳ ಆಹಾರ ಪಟ್ಟಿಯಲ್ಲಿ ಗಂಜಿ ಚಟ್ನಿಯನ್ನೂ ಸೇರಿಸಲಾಗಿದೆ.

`ಅಂಗನವಾಡಿಗಳಲ್ಲಿ ಹಿಂದೆ ಕುಚ್ಚಲಕ್ಕಿ ಗಂಜಿ ನೀಡುವ ಪದ್ಧತಿ ಇರಲಿಲ್ಲ. ಜಿಲ್ಲೆಯ ಮಕ್ಕಳು ಕುಚ್ಚಲಕ್ಕಿ ಗಂಜಿ, ಚಟ್ನಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಈ ತಿಂಗಳಿಂದಲೇ ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಗಂಜಿ- ಚಟ್ನಿಯನ್ನು ನೀಡಲಾಗುವುದು. ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ~ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶಕುಂತಳಾ ಅವರು `ಪ್ರಜಾವಾಣಿ~ಗೆ ತಿಳಿಸಿದರು.

`ಮಕ್ಕಳಿಗೆ ನಿತ್ಯ 12ರಿಂದ 15 ಗ್ರಾಂ ಪ್ರೊಟೀನ್ ಹಾಗೂ 500 ಕ್ಯಾಲೊರಿಯುಕ್ತ ಆಹಾರ ಹಾಗೂ ಗರ್ಭಿಣಿಯರಿಗೆ 15ರಿಂದ 18 ಗ್ರಾಂ ಪ್ರೊಟೀನ್ ಹಾಗೂ 800 ಕ್ಯಾಲೊರಿ ಆಹಾರ ನೀಡುತ್ತಿದ್ದೇವೆ. 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ನಿತ್ಯ 45 ಗ್ರಾಂನಂತೆ ಪ್ರೊಟೀನ್ಯುಕ್ತ ನ್ಯೂಟ್ರಿವೀಟಾವನ್ನು ತಿಂಗಳಲ್ಲಿ 25 ದಿನ ನೀಡಲು ಸಮಿತಿ ತೀರ್ಮಾನಿಸಿದೆ~ ಎಂದರು.

`ಮಕ್ಕಳಿಗೆ ವಾರದಲ್ಲಿ ಮೂರು ದಿನ ಕುಚ್ಚಲಕ್ಕಿ ಗಂಜಿ ಚಟ್ನಿ ಹಾಗೂ ಮೂರು ದಿನ ಮೊಳಕೆ ಬರಿಸಿದ ಹೆಸರು ಕಾಳು ನೀಡಲಾಗುವುದು. ಪ್ರತಿ ಪುಟಾಣಿಗೆ ಬೆಳಿಗ್ಗೆ ನೀಡುವ ಆಹಾರಕ್ಕೆ 60 ಗ್ರಾಂ ಅಕ್ಕಿ, 10 ಗ್ರಾಂ ಹುರುಳಿ ಅಥವಾ ಹೆಸರು ಕಾಳು, 0.50 ಗ್ರಾಂ ಒಣಮೆಣಸು ಹಾಗೂ 1ಗ್ರಾಂ ಉಪ್ಪು ಬಳಸುತ್ತೇವೆ. ಮಧ್ಯಾಹ್ನ ಅನ್ನ ಸಾಂಬಾರು ನೀಡುತ್ತೇವೆ. ಇದಕ್ಕಾಗಿ ಪ್ರತಿ ಪುಟಾಣಿಗೆ 60 ಗ್ರಾಂ ಅಕ್ಕಿ, 15 ಗ್ರಾಂ ತೊಗರಿ ಬೇಳೆ, 0.50 ಗ್ರಾಂ ಮೆಣಸು, 1 ಗ್ರಾಂ ಉಪ್ಪು, 10 ಗ್ರಾಂ ಎಣ್ಣೆ ಬಳಸುತ್ತೇವೆ~ ಎಂದರು

ಘಟಕ ವೆಚ್ಚ ಶೇ 15 ಹೆಚ್ಚಳ: `ಅಂಗನವಾಡಿ ಪುಟಾಣಿಗಳಿಗೆ, 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಆಹಾರದ ಘಟಕ ವೆಚ್ಚವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ.

3ರಿಂದ 6 ವರ್ಷದೊಳಗಿನ ಮಕ್ಕಳಿಗೆ ಈ ಹಿಂದೆ ನಿತ್ಯ ರೂ 4 ರೂಪಾಯಿ ವೆಚ್ಚದ ಆಹಾರ ಪದಾರ್ಥ ನೀಡಲಾಗುತ್ತಿತ್ತು. ಅದನ್ನು 4.60 ರೂಪಾಯಿಗೆ ಹೆಚ್ಚಿಸಿದ್ದೇವೆ. ಗರ್ಭಿಣಿ ಅಥವಾ ಬಾಣಂತಿಗೆ ನಿತ್ಯ 5 ರೂಪಾಯಿಯ ಆಹಾರವನ್ನು ತಿಂಗಳಲ್ಲಿ 25 ದಿನ ನೀಡಲಾಗುತ್ತಿತ್ತು. ಅದನ್ನು ರೂ 5.75ಕ್ಕೆ ಹೆಚ್ಚಿಸಲಾಗಿದೆ~ ಎಂದರು.

`ಹಿಂದೆ ರಾಜ್ಯ ಮಟ್ಟದಲ್ಲಿ ಏಕರೂಪದ ಆಹಾರ ನೀಡಲಾಗುತ್ತಿತ್ತು. ಮಕ್ಕಳಿಗೆ ನೀಡುವ ಆಹಾರವನ್ನು ಖಾಸಗಿ ಸಂಸ್ಥೆಗಳ ಬದಲು ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಪೂರೈಸಬೇಕು ಎಂದು ನ್ಯಾಯಾಲಯದ ನಿರ್ದೇಶನವಿದೆ. ಮೂರು ವರ್ಷ ಹಿಂದೆ ರಾಜ್ಯ ಸರ್ಕಾರ 137 ಕಡೆ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಹಾಗೂ ತರಬೇತಿ ಕೇಂದ್ರ (ಎಂಎಸ್ಪಿಟಿಸಿ) ತೆರೆಯಿತು. ಇವುಗಳಿಗೆ ಕ್ರಿಸ್ಟಿಫ್ರೈಡ್ ಗ್ರಾಂ ಇಂಡಸ್ಟ್ರಿ ಮೂಲಕ ತರಬೇತಿ ನೀಡಲಾಗುತ್ತಿತ್ತು. ಈ ಸಂಸ್ಥೆಯ ಮೂಲಕವೇ ಅಂಗನವಾಡಿಗಳಿಗೆ ಆಹಾರ ಪೂರೈಸಲಾಗುತ್ತಿತ್ತು. ಕಳೆದ ಮಾರ್ಚ್ನಿಂದ ಈ ಸಂಸ್ಥೆಗೆ ನೀಡಿದ್ದ ಗುತ್ತಿಗೆ ರದ್ದುಪಡಿಸಲಾಗಿದೆ~ ಎಂದರು.

`ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯೇ ನುರಿತ ಆಹಾರ ತಜ್ಞರು ಹಾಗೂ ವೈದ್ಯರ ಸಲಹೆ ಪಡೆದು ಜಿಲ್ಲೆಯ ಮಕ್ಕಳಿಗೆ ಯಾವ ಆಹಾರ ನೀಡಬೇಕು ಎಂದು ನಿರ್ಧರಿಸುತ್ತದೆ. ಎಂಎಸ್ಪಿಟಿಸಿ ಮೂಲಕವೇ ಈ ಆಹಾರ ಪೂರೈಸಲಾಗುತ್ತದೆ. ಜನತಾ ಬಜಾರ್ನಿಂದ ಸಾಮಗ್ರಿ ಖರೀದಿಸಲಾಗುತ್ತದೆ~ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.