ಬುಧವಾರ, ಏಪ್ರಿಲ್ 21, 2021
31 °C

ಅಂಗವಿಕಲರನ್ನು ಸಮಾನತೆಯಿಂದ ಕಾಣಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: `ಅಂಗವಿಕಲ ಮಕ್ಕಳಲ್ಲೂ ಪ್ರತಿಭೆ ಇದ್ದಾರೆ. ಪ್ರೋತ್ಸಾಹದ ಕೊರತೆಯಿಂದಾಗಿ ಪ್ರತಿಭೆಗಳು ಬೆಳಕಿಗೆ ಬರುತ್ತಿಲ್ಲ ಎಂದು ನಗರಸಭೆ ಅಧಕ್ಷ ಗಣಪತಿ ಉಳ್ವೇಕರ ಹೇಳಿದರು.ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸರ್ವಶಿಕ್ಷಣ ಅಭಿಯಾನ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಬುಧವಾರ ನಡೆದ `ಅಂಗವಿಕಲ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ~ ಉದ್ಘಾಟಿಸಿ ಅವರು ಮಾತನಾಡಿದರು.`ಎಲ್ಲರೂ ಅಂಗವಿಕಲರನ್ನು ಸಮಾನ ಭಾವನೆಯಿಂದ ಕಾಣಬೇಕು. ತಾವು ವಿಕಲಚೇತನರು ಎನ್ನುವ ಕೀಳರಿಮೆ ಬೇಡ. ಧೈರ್ಯವಾಗಿ ಮುಂದೆ ಹೋಗಿ ಎಲ್ಲ ಕ್ಷೇತ್ರದಲ್ಲು ಸಾಧನೆ ಮಾಡಬೇಕು~ ಎಂದರು.`ಅಂಗವಿಕಲ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆ ಯೋಜನೆಗಳ ಲಾಭ ಪಡೆದು ಜೀವನದಲ್ಲಿ ಮುಂದೆ ಬರಬೇಕು~ ಎಂದು ಉಳ್ವೇಕರ್ ನುಡಿದರು.ಡಿವೈಪಿಸಿ ಡಿ.ಎಂ. ಬಸವರಾಜಪ್ಪ ಮಾತನಾಡಿ, ಕಾಣದ ದೇವರಿಗಾಗಿ ಸೇವೆ ಮಾಡಿ ಹಣ ವ್ಯಯ ಮಾಡುವುದಕ್ಕಿಂತ ವಿಕಲಚೇತನರ ಸೇವೆ ಮಾಡಿ ಅವರ ಪಾಲಿಗೆ ದೇವರಾಗಿ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಚೇರಿ ರಾಮಕೃಷ್ಣ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ ಹೆಗಡೆ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಗೌಡ, ಡಾ. ಚಂದ್ರಕಾಂತ ಬೆಲ್ಲದ, ಡಾ. ಕಿರಣಕುಮಾರ, ಬಿ.ಟಿ. ನಾಯಕ, ಡಿ.ಎಚ್. ನಾಯಕ, ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.