ಮಂಗಳವಾರ, ಜೂನ್ 22, 2021
28 °C

ಅಂಗವಿಕಲರ ಕ್ರಿಕೆಟ್‌: ಬಂಗಾಳಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಲೀಗ್‌ ಪಂದ್ಯಗಳಲ್ಲಿನ ಅಜೇಯ ಓಟದ ನಂತರ ಫೈನಲ್‌ನಲ್ಲೂ ಉತ್ತಮ ಪ್ರದರ್ಶನ ನೀಡಿದ ಪಶ್ಚಿಮ ಬಂಗಾಳ ರಾಜ್ಯ ತಂಡದವರು ಅಖಿಲ ಭಾರತ ಅಂಗವಿಕಲರ ಕ್ರಿಕೆಟ್‌ ಸಂಸ್ಥೆ ಆಶ್ರಯದ ‘ಡೆನಿಸನ್ಸ್‌ ಕಪ್‌’ ರಾಷ್ಟ್ರಮಟ್ಟದ ಕ್ರಿಕೆಟ್‌ ಟೂರ್ನಿಯ ಪ್ರಶಸ್ತಿ ಎತ್ತಿ ಹಿಡಿದರು.ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಆಂದ್ರಪ್ರದೇಶ ತಂಡವನ್ನು 14 ರನ್‌ಗಳಿಂದ ಮಣಿಸಿದ ಬಂಗಾಳ ತಂಡ ಎಲೈಟ್‌ ಗುಂಪಿನಲ್ಲಿ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. 2011ರಲ್ಲಿ ಚಾಂಪಿಯನ್‌ ಆಗಿದ್ದ ತಂಡ 2012ರಲ್ಲಿ ರನ್ನರ್‌ ಅಪ್‌ ಆಗಿತ್ತು. 2012ರಲ್ಲಿ ಟ್ರೋಫಿ ಗೆದ್ದುಕೊಂಡು ಕಳೆದ ಬಾರಿ ಸೆಮಿಫೈನಲ್‌ನಲ್ಲಿ ಸೋತಿದ್ದ ಆಂದ್ರ ತಂಡ ನಿರ್ಣಾಯಕ ಹಂತದಲ್ಲಿ ಮತ್ತೊಮ್ಮೆ ಎಡವಿತು.ಮೊದಲ ದಿನವಾದ ಬುಧವಾರ ಲೀಗ್‌ ಹಂತದ ಎರಡೂ ಪಂದ್ಯಗಳನ್ನು ಗೆದ್ದು ಬೀಗಿದ ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ತಂಡಗಳು ಗುರುವಾರದ ಪಂದ್ಯಗಳನ್ನು ಕೂಡ ಗೆದ್ದು ಕ್ರಮವಾಗಿ ‘ಎ’ ಹಾಗೂ ‘ಬಿ’ ಗುಂಪಿನಿಂದ ಫೈನಲ್‌ಗೆ ಲಗ್ಗೆ ಇಟ್ಟಿದ್ದವು.ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿ ನಿಗದಿತ 12 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 81 ರನ್‌ ಗಳಿಸಿದ ತಂಡ ಆಂಧ್ರಪ್ರದೇಶವನ್ನು 67 ರನ್‌ಗಳಿಗೆ ಕಟ್ಟಿ ಹಾಕಿತು. ನಾಲ್ಕು ಆಕರ್ಷಕ ಬೌಂಡರಿಗಳೊಂದಿಗೆ 14 ಎಸೆತಗಳಲ್ಲಿ ಅಜೇಯ 25 ರನ್‌ ಗಳಿಸಿದ ಖಲೀಲ್‌ ಬೌಲಿಂಗ್‌ನಲ್ಲೂ ಮಿಂಚಿ 22 ರನ್‌ಗಳಿಗೆ 3 ವಿಕೆಟ್‌ ಉರುಳಿಸಿದರು.ಸಂಕ್ಷಿಪ್ತ ಸ್ಕೋರ್‌:  ಪಶ್ಚಿಮ ಬಂಗಾಳ: 12 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 81 (ಅಬ್ದುಲ್‌ ಖಲೀಲ್‌ 25, ಸಮರೇಶ್‌ ಬಿಸ್ವಾಸ್‌ 15; ಮೋಹನ್‌ ರಾವ್‌ 13ಕ್ಕೆ 1); ಆಂದ್ರಪ್ರದೇಶ: 12 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 67 (ಆ್ಯಾಡಂ 24; ಅಬ್ದುಲ್‌ ಖಲೀಲ್‌ 22ಕ್ಕೆ 3).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.