ಸೋಮವಾರ, ಜೂನ್ 21, 2021
23 °C

ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್‌ 12ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಸಂಸ್ಥೆ ಹಮ್ಮಿಕೊಂಡಿರುವ ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿ ಮಾರ್ಚ್‌ 12ರಿಂದ 14ರ ವರೆಗೆ ನಗರದಲ್ಲಿ ನಡೆಯಲಿದೆ. ರಾಜನಗರದ ಕೆಎಸ್‌ಸಿಎ ಮೈದಾನ ಮತ್ತು ಕರ್ನಾಟಕ ಜಿಮ್ಖಾನಾ ಮೈದಾನದಲ್ಲಿ ಪಂದ್ಯಗಳಿಗೆ ಸಿದ್ಧತೆ ನಡೆದಿದ್ದು ಐದು ವಲಯಗಳಿಂದ ಒಟ್ಟು ಹತ್ತು ತಂಡಗಳು ಪಾಲ್ಗೊಳ್ಳಲಿವೆ.ದಕ್ಷಿಣ ವಲಯದಿಂದ ತಮಿಳುನಾಡು ಮತ್ತು ಆಂಧ್ರಪ್ರದೇಶ, ಪೂರ್ವ ವಲಯ ದಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ, ಪಶ್ಚಿಮ ವಲಯದಿಂದ ಗುಜರಾತ್‌ ಮತ್ತು ವಡೋದರಾ, ಉತ್ತರ ವಲಯದಿಂದ ಹರಿಯಾಣ ಮತ್ತು ಪೂರ್ವಾಂ ಚಲ, ಕೇಂದ್ರ ವಲಯದಿಂದ ವಿದರ್ಭ ಮತ್ತು ಮಧ್ಯಪ್ರದೇಶ ತಂಡಗಳು ಬರಲಿವೆ.‘ಲೀಗ್‌ ಮತ್ತು ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದ್ದು ಮೊದಲೆರಡು ದಿನ ತಲಾ ನಾಲ್ಕು ಪಂದ್ಯಗಳು ನಡೆಯಲಿವೆ. ಫೈನಲ್‌ ಪಂದ್ಯ ಮೂರನೇ ದಿನ ನಡೆಯಲಿದೆ. ಇದರ ನಂತರ ಪ್ರಶಸ್ತಿ ಗೆಲ್ಲುವ ತಂಡ ಇತರೆ ಭಾರತ ತಂಡದ ನಡುವೆ ಪಂದ್ಯ ಇರುತ್ತದೆ’ ಎಂದು ರಾಜ್ಯ ಅಂಗವಿಕಲರ ಕ್ರಿಕೆಟ್‌ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಗುಂಜಾಳ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.