ಬುಧವಾರ, ಮೇ 25, 2022
29 °C

ಅಂಡಮಾನ್‌ನಲ್ಲಿ ಪ್ಯಾಟೆ ಮಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಡಮಾನ್‌ನಲ್ಲಿ ಪ್ಯಾಟೆ ಮಂದಿ

`ಪ್ಯಾಟೆ ಮಂದಿ ಕಾಡಿಗ್ ಬಂದ್ರು~ ರಿಯಾಲಿಟಿ ಶೋ ಯಶಸ್ಸಿನಿಂದಾಗಿ, ಅದರ ಮುಂದುವರಿದ ಭಾಗವಾದ `ಪ್ಯಾಟೆ ಮಂದಿ ಕಾಡಿಗ್ ಬಂದ್ರು- ಸೀಸನ್ 2~, ಅಕ್ಟೋಬರ್ 31ರಿಂದ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.ಈ ಶೋನ ಮುಖ್ಯ ಆಕರ್ಷಣೆ ಅಂಡಮಾನ್. ಪ್ರಾಕೃತಿಕ ಸೌಂದರ್ಯ ಹಾಗೂ ಪ್ರಕೃತಿ ವಿಕೋಪಗಳ ನೆಲೆವೀಡಾದ ಅಂಡಮಾನ್‌ಗೆ ಚಾರಿತ್ರಿಕ ಮಹತ್ವವಿದೆ. ಈ ನಿಗೂಢ ದ್ವೀಪಗಳ ಅಂಡಮಾನ್‌ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಪ್ಯಾಟೆ ಮಂದಿ ಶೋನ 16ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ.ಮನರಂಜನೆಯ ಜೊತೆಗೆ ಅಂಡಮಾನ್ ಅನ್ನು ಪರಿಚಯಿಸುವುದು ಕೂಡ ಈ ರಿಯಾಲಿಟಿ ಶೋ ಉದ್ದೇಶವಾಗಿದೆ. ಅಲ್ಲಿನ ಸುಂದರ ಸಮುದ್ರತೀರ, ಕಾಡು, ಇತಿಹಾಸವನ್ನ ವಿಭಿನ್ನ ರೀತಿಯಲ್ಲಿ ಕಿರುತೆರೆಯಲ್ಲಿ ಪ್ರಸ್ತುತಪಡಿಸುವ ಪ್ರಯತ್ನ ನಡೆಯಲಿದೆಯಂತೆ. ಅಂದಹಾಗೆ, ಈ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.