ಗುರುವಾರ , ಮೇ 19, 2022
24 °C

ಅಂತರ ಕೃಷಿ ವಿವಿ ಕ್ರೀಡಾಕೂಟ: ಗೌತಮಿಗೆ ಐದು ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೌತಮಿ. ಆರ್ ಭಾಸ್ಕರ್ ಅವರು ಕೇರಳ ಕೃಷಿ ವಿವಿ ಆಶ್ರಯದಲ್ಲಿ ತ್ರಿಶೂರ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಅಂತರ ಕೃಷಿ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಐದು ಚಿನ್ನದ ಪದಕ ಗೆದ್ದುಕೊಂಡು ಗಮನ ಸೆಳೆದರು. ಗೌತಮಿ ಅವರ ಶ್ರೇಷ್ಠ ಪ್ರದರ್ಶನದಿಂದಾಗಿ ಬೆಂಗಳೂರು ಕೃಷಿ ವಿವಿ ತಂಡ ಕೂಟದಲ್ಲಿ ರನ್ನರ್ಸ್‌ ಅಪ್ ಸ್ಥಾನ ಪಡೆಯಿತು.ಇತ್ತೀಚೆಗೆ  ನಡೆದ ಕ್ರೀಡಾಕೂಟದಲ್ಲಿ ದೇಶದ ವಿವಿಧ ರಾಜ್ಯಗಳ ಒಟ್ಟು 40 ತಂಡಗಳು ಪಾಲ್ಗೊಂಡಿದ್ದವು. ಗೌತಮಿ ಐದು ಬಂಗಾರ ಗೆದ್ದುಕೊಂಡು ಮಹಿಳೆಯರ ವಿಭಾಗದಲ್ಲಿ ‘ವೈಯಕ್ತಿಕ ಚಾಂಪಿಯನ್’ ಎನಿಸಿಕೊಂಡರು. ಒಟ್ಟು 40 ಸ್ಪರ್ಧಿಗಳು ಬೆಂಗಳೂರು ಕೃಷಿ ವಿವಿ ತಂಡವನ್ನು ಪ್ರತಿನಿಧಿಸಿದ್ದರು.ವಾಲಿಬಾಲ್‌ನಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಬೆಂಗಳೂರು ತಂಡ ಚಾಂಪಿಯನ್ ಆಯಿತು. ಅಥ್ಲೆಟಿಕ್ಸ್‌ನಲ್ಲಿ ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿಯೂ ಬೆಂಗಳೂರು ತಂಡ ತನ್ನದಾಗಿಸಿಕೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.