ಭಾನುವಾರ, ಮಾರ್ಚ್ 7, 2021
19 °C

ಅಂಧರಿಗೆ ಕಂಪ್ಯೂಟರ್ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಧರಿಗೆ ಕಂಪ್ಯೂಟರ್ ತರಬೇತಿ

ಬೆಂಗಳೂರು: ಕಂಪ್ಯೂಟರ್ ನೀಡುತ್ತಿದ್ದ ಮೌಖಿಕ ಮಾರ್ಗದರ್ಶನಕ್ಕೆ ಪ್ರತಿಕ್ರಿಯಿ­ಸುತ್ತಾ ಅಂಧ ವಿದ್ಯಾರ್ಥಿಯೊಬ್ಬರು ಅಷ್ಟೇ ವೇಗವಾಗಿ ಇ– ಮೇಲ್ ಕಳುಹಿಸಿ­ದಾಗ ನೆರೆದಿದ್ದವರಲ್ಲಿ ಆಶ್ಚರ್ಯ ಮತ್ತು ಕುತೂಹಲ; ಬ್ರೈಲ್ ಮುದ­್ರ-­ಕವು ಕ್ಷಣಾರ್ಧದಲ್ಲಿಯೇ ಮುದ್ರಿ­ಸಿದ  ಬ್ರೈಲ್ ಲಿಪಿಯ ಪಠ್ಯ­ಗ­ಳನ್ನು ಓದುತ್ತಾ ಆನಂದಿಸಿದ ಅಂಧರು.ಕರ್ನಾಟಕ ಅಂಧರ ಕ್ಷೇಮಾ­ಭ್ಯುದಯ ಸಂಘವು ಶುಕ್ರವಾರ ಏರ್ಪ­ಡಿಸಿದ್ದ ‘ಗಣಕಯಂತ್ರ ಮತ್ತು ಭಾಷಾ ಕೌಶಲ ತರಬೇತಿ ಘಟಕ’ದ ಉದ್ಘಾ­ಟನಾ ಸಮಾರಂಭವು ಮೇಲಿನ ದೃಶ್ಯಗಳಿಗೆ ಸಾಕ್ಷಿಯಾಯಿತು. ಮಾಜಿ ಅಡ್ವೊಕೇಟ್ ಜನರಲ್  ಎಸ್. ವಿಜಯಶಂಕರ್ ಅವರು ತರ­ಬೇತಿ ಘಟಕವನ್ನು ಉದ್ಘಾಟಿಸಿ­ದರು.ಸಂಘದ ಗೌರವ ಕಾರ್ಯದರ್ಶಿ  ಎಸ್.ಪರಮಶಿವಮೂರ್ತಿ ಮಾತ­ನಾಡಿ, ‘ಕಂಪ್ಯೂಟರ್ ಮತ್ತು ಅಂತ­ರ್ಜಾಲ ಜಗತ್ತಿ­ನಿಂದ ಅಂಧರು ದೂರ ಉಳಿಯ­ಬಾ­ರದು ಎಂದು ತರ­ಬೇತಿ ಘಟಕ­ವನ್ನು ಆರಂಭಿಸ­­ಲಾಗಿದೆ. ಕಂಪ್ಯೂ­­ಟರ್‌­ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಬಳಕೆ ಹಾಗೂ ಅಂತ­ರ್ಜಾಲ ಬಳಕೆ ಕುರಿತು ತರ­ಬೇತಿ ನೀಡ­ಲಾಗು­ವುದು’ ಎಂದರು.‘ಪ್ರತಿ ದಿನ ಬೆಳಿಗ್ಗೆ 8 ರಿಂದ ರಾತ್ರಿ 7.30ರವರೆಗೆ ತರಗತಿಗಳು ನಡೆಯ­ಲಿವೆ. ಅಂಧರು ಮಾತ್ರವಲ್ಲದೆ ಓಡಾ­ಟಕ್ಕೆ ಅನು­ಕೂಲವಿರುವ ಅಂಗ­ವಿಕಲ­ರೂ ತರ­ಬೇತಿ­­­ಯಲ್ಲಿ ಭಾಗವಹಿಸಬಹುದು’ ಎಂದರು.  ತರಬೇತಿ ಘಟಕವು ಮೌಖಿಕ ಮಾರ್ಗ­ದರ್ಶನ ನೀಡುವ ವಿಶೇಷ ತಂತ್ರಾಂಶ– ‘ಜಾಸ್’ ಅಳವಡಿಸಿರುವ 12 ಕಂಪ್ಯೂಟರ್‌ಗಳು ಮತ್ತು ಒಂದು ಬ್ರೈಲ್ ಮುದ್ರಕವನ್ನು ಹೊಂದಿದೆ. ಮೇ 15ರಿಂದ ತರಬೇತಿ ಆರಂಭ­ವಾಗಲಿದೆ. ಸಂಘದ ಅಧ್ಯಕ್ಷ ಎನ್.ಎಂ. ಪಾಟೀಲ್, ರೇಣುಕಾ ವಿಜಯಶಂಕರ್ ಇದ್ದರು.

ಸಂಪರ್ಕಕ್ಕೆ: 97411 22706.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.