ಸೋಮವಾರ, ಮೇ 17, 2021
26 °C

ಅಂಬಿಗರ ಚೌಡಯ್ಯ ಶ್ರೇಷ್ಠ ಶರಣ: ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ:  `ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ಮನುಕುಲ ಉದ್ಧಾರಕ್ಕಾಗಿ ಶ್ರಮಿಸಿದರು. ಅವರಲ್ಲಿ ಶರಣ ಅಂಬಿಗರ ಚೌಡಯ್ಯನವರ ಪಾತ್ರ ಹಿರಿದು~ ಎಂದು ಸೇಡಂ ಶಾಸಕ ಡಾ. ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ದುಗನೂರು ಗ್ರಾಮದಲ್ಲಿ ಮಂಗಳವಾರ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಹೋಬಳಿ ಮಟ್ಟದ ಚೌಡಯ್ಯ  ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.   `ಕೋಲಿ ಸಮಾಜ ಬಾಂಧವರು ಇತರೆ ಧರ್ಮಗಳೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ ಶ್ರೇಷ್ಠ ಸಮಾಜವಾಗಿದೆ ಎಂದಿರುವ ಅವರು, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಏಳ್ಗೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ~ ಎಂದು ಭರವಸೆ ನೀಡಿದರು.ಮೂರ್ತಿ ಅನಾವರಣಗೊಳಿಸಿದ ಮಾಜಿ ಮುಖ್ಯ ಸಚೇತಕ ಕರ್ನಾಟಕ ಸರ್ಕಾರ ಹಾಗೂ ಟೋಕ್ರೆ ಕೋಲಿ ಸಮಾಜ ರಾಜ್ಯಾಧ್ಯಕ್ಷ ವಿಠ್ಠಲ ಹೇರೂರ್ ಮಾತನಾಡಿ, `ಸರ್ಕಾರ ಅನೇಕ ಶರಣರ ಜನ್ಮ ಸ್ಥಳ ಹಾಗೂ ಅವರ ಕರ್ಮಭೂಮಿ ಜೀರ್ಣೋದ್ದಾರ ಕಾರ್ಯ ಮಾಡಿದೆ. ಅದರಂತೆಯೇ ಶರಣ ಅಂಬಿಗರ ಚೌಡಯ್ಯ ಜನ್ಮಸ್ಥಳ ಹಾವೇರಿ ಜಿಲ್ಲೆಯ ಚೌಡದಾನಪುರವನ್ನು ಅಭಿವೃದ್ಧಿ ಪಡಿಸಿ ಅವರ ತತ್ವಗಳ ಪ್ರಸಾರಕ್ಕಾಗಿ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು. ಮೆರವಣಿಗೆ ಉದ್ಘಾಟಿಸಿದ ಕೋಲಿ ಸಮಾಜದ ಯುವ ನಾಯಕ ನರೇಶ ಮಲಕೂಡ ಮಾತನಾಡಿ, `ಸಮಾಜ ಬಾಂಧವರು ಸಂಘಟಿತರಾಗದ ಕಾರಣ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಬೆಳವಣಿಗೆ ಸಾಧಿಸಲಾಗಿಲ್ಲ~ ಎಂದಿದ್ದಾರೆ. ಯಾದಗಿರಿ ಜಿಲ್ಲಾಧ್ಯಕ್ಷ ಉಮೇಶ ಕೆ.ಮುದ್ನಾಳ . ನಿವೃತ್ತ ಡಿವೈಎಸ್‌ಪಿ ಸಿದ್ರಾಮಪ್ಪ ಸಣ್ಣೂರ, ರಾಘವೇಂದ್ರ, ಅಶೋಕ ದಂಡೋತಿ, ಭೀಮರಾಯ ಮುತ್ಯಾಲ, ಶರಣಪ್ಪ ಎಳ್ಳಿ, ವೆಂಕಟೇಶ ಚಿಟಕನಪಲ್ಲಿ, ಹಣಮಂತಪ್ಪ ಕೋಟ್ರಕಿ, ನರೇಂದ್ರ ಮುನಿ, ರಾಮಲಿಂಗಪ್ಪ ಹಂದರ್ಕಿ, ವೆಂಕಟೇಶ ಬಿಲಕಲ್, ಮಹಾದೇವಪ್ಪ ದುಗನೂರ, ಹಣಮಂತ ಬೋಯಿನ್, ರಾಮಲಿಂಗಪ್ಪ, ಆಶಪ್ಪ ಮುಲಿಂಟಿ, ಹಣಮಂತು ಕುಲ್ಕರ್ಣಿ, ಮೊಗಲಪ್ಪ ಬೊಯಿನ್, ಭೀಮಶಪ್ಪ ನಾಯ್ಕಿನ್, ಶರಣಪ್ಪ ಕೊಂಡ, ಭೀಮಶಪ್ಪ ಮಾಟೂರ ಮಾತನಾಡಿದರು. ಸಮಾಜದ ಸೇಡಂ ತಾಲ್ಲೂಕು ಅಧ್ಯಕ್ಷ  ಸೋಮಶೇಖರ ಬಿಬ್ಬಳ್ಳಿ ಸ್ವಾಗತಿಸಿದರು, ರಾಮಲಿಂಗ ನಾಟೀಕಾರ ನಿರೂಪಿಸಿದರು, ಅಶೋಕ ಮದನಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.