ಭಾನುವಾರ, ಜೂನ್ 13, 2021
22 °C

ಅಕ್ರಮ ನಡೆಸಿ ಸಿಕ್ಕಿ ಬಿದ್ದರೆ ವಿಡಿಯೋದಲ್ಲಿ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಚುನಾವಣಾ ಅಕ್ರಮ ನಡೆಸಿಯೂ ಸಾಕ್ಷ್ಯಗಳ ಕೊರತೆಯಿಂದ ತಪ್ಪಿಸಿಕೊಳ್ಳುತ್ತಿದ್ದವರಿಗೆ ಮೂಗುದಾರ ಹಾಕಲು ಮುಂದಾಗಿರುವ ಚುನಾ­ವಣಾ ಆಯೋಗ ಪ್ರಕರಣ ದಾಖಲಿಸಲು  ವಿಡಿಯೋ ಚಿತ್ರೀಕರಣ ಕಡ್ಡಾಯಗೊಳಿಸಿದೆ.

ಈ ಹಿಂದಿನ ಚುನಾವಣೆಗಳಲ್ಲಿ ವಿಡಿಯೋ ಚಿತ್ರೀಕರಣ ಇಲ್ಲದಿದ್ದರೂ ಚುನಾವಣಾ ಅಕ್ರಮ, ನೀತಿ ಸಂಹಿತೆ ಉಲ್ಲಂಘನೆ ದೂರುಗಳನ್ನು ಚುನಾ­ವಣಾ ಸಿಬ್ಬಂದಿ ದಾಖಲಿಸ­ಬಹು­ದಾಗಿತ್ತು. ಆದರೆ ಸಾಕ್ಷ್ಯದ ಕೊರತೆ ಕಾರಣ ಈ ಪ್ರಕರಣಗಳಲ್ಲಿ ಆರೋಪಿ­ಗಳು ಸುಲಭವಾಗಿ ತಪ್ಪಿಸಿಕೊಳ್ಳು­ತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಆಯೋಗ ಇದೇ ಮೊದಲ ಬಾರಿಗೆ ಪ್ರಕರಣ ದಾಖಲಿ­ಸಲು ವಿಡಿಯೋ ಚಿತ್ರೀಕರಣ ಕಡ್ಡಾಯ ಮಾಡಿದೆ. ಘಟನೆಯ ಸಂಪೂರ್ಣ ಚಿತ್ರೀಕರಣ ಮಾಡುವುದರಿಂದ ನ್ಯಾಯಾಲಯದಲ್ಲಿ ಆರೋಪಿಗಳು ಇನ್ನು ಮುಂದೆ ಸುಲಭವಾಗಿ ತಪ್ಪಿಸಿಕೊಳ್ಳ­ಲಾರರು ಎಂಬುದು ಚುನಾವಣಾ ಅಧಿಕಾರಿಗಳ ಬಲವಾದ ನಂಬಿಕೆ.ಚುನಾವಣಾ ಅಕ್ರಮ ತಡೆಗಟ್ಟಲು ಪ್ಲೈಯಿಂಗ್‌ ತಂಡ ನೇಮಿಸಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಈ ತಂಡದಲ್ಲಿ ಪಿಡಿಒಗಳನ್ನು ಮಾತ್ರ ನೇಮಕ ಮಾಡಲಾಗುತ್ತಿತ್ತು. ಆದರೆ ಈ ಸಲ ಪಿಡಿಒ ಜತೆಗೆ ಚುನಾವಣಾ ಸಿಬ್ಬಂದಿ, ಇಬ್ಬರು, ಮೂವರು ಪೊಲೀಸರನ್ನು ನೇಮಕ ಮಾಡಲಾಗಿದೆ. ಎಲ್ಲ ಕಡೆ ಚೆಕ್‌ಪೋಸ್ಟ್ ನಿರ್ಮಿಸಿ ಹಗಲು ರಾತ್ರಿ ಪಾಳಿ ಆಧಾರದಲ್ಲಿ ಕೆಲಸ ಮಾಡಲಾಗುತ್ತಿದೆ. ಪ್ರತಿ ಚೆಕ್‌ಪೋಸ್ಟ್ ನಲ್ಲೂ ವಿಡಿಯೋ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಸಹಾಯಕ ಚುನಾವಣಾಧಿಕಾರಿ ಅನೂಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ದೂರು ಬಂದಾಗ ಪರಿಶೀಲನೆಗೆ ಸ್ಥಳಕ್ಕೆ ಹೋಗುವ ಮುನ್ನ  ವಿಡಿಯೋ ಗ್ರಾಫರ್‌ಗಳನ್ನು ಕರೆದುಕೊಂಡು ಹೋಗುವಂತೆ ತನಿಖಾ ತಂಡಗಳಿಗೆ ಸೂಚಿಸಲಾಗಿದೆ. ವಿಡಿಯೋ ಗ್ರಾಫರ್‌ಗಳ ಕೊರತೆ ಇಲ್ಲ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.