ಶುಕ್ರವಾರ, ಜೂನ್ 18, 2021
22 °C
ಚುನಾವಣೆಗೆ ಬಿಗಿ ಬಂದೋಬಸ್ತ್‌

ಅಕ್ರಮ ಮದ್ಯ ತಡೆಗೆ ಕಟ್ಟೆಚ್ಚರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಲೋಕಸಭೆ ಚುನಾ­ವಣೆ ಅಖಾಡ  ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಮೂರು ನಾಮಪತ್ರ ಸಲ್ಲಿಕೆಯಾಗಿವೆ. ನಾಮ­ಪತ್ರ ಸಲ್ಲಿಸಿದವರು ಹಾಗೂ ಸಲ್ಲಿಸ­ಬೇಕಾದವರು ಎಲ್ಲರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆ ಅಬಕಾರಿ ಇಲಾಖೆ  ಅಕ್ರಮ ಮದ್ಯ  ಮಾರಾಟ ಮತ್ತು ಸಾಗಣೆ ತಡೆಯುವ ಸಲುವಾಗಿ ಪ್ರಮುಖ ಸ್ಥಳ­ಗಳಲ್ಲಿ ಚೆಕ್‌ ಪೋಸ್ಟ್‌ಗಳನ್ನು ಸಹ ಸ್ಥಾಪಿಸಿದೆ.ಕಿಂಚಿತ್ತೂ ನಿರಾಸಕ್ತಿ, ನಿರ್ಲಕ್ಷ್ಯ ತೋರದಂತೆ ಅಬಕಾರಿ ಇಲಾಖೆಗೆ ಜಿಲ್ಲಾ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ.      

‘ಅಕ್ರಮ ಮದ್ಯ ತಡೆಗಾಗಿ ಅರಣ್ಯ, ಪ್ರಾದೇ­ಶಿಕ ಸಾರಿಗೆ ಇಲಾಖೆ, ಕಂದಾಯ ಇಲಾಖೆ, ಗಣಿ, ಭೂ ವಿಜ್ಞಾನ ಇಲಾಖೆ ಸಹಕಾರ ಪಡೆ­ದಿದ್ದೇವೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತರು ತಿಳಿಸಿದ್ದಾರೆ.‘ತೀವ್ರ ಅನಿವಾರ್ಯ ಕಾರಣದಲ್ಲಿ ಅಧಿಕಾರಿಗೆ ರಜೆ ನೀಡಬೇಕು. ಯಾವ ಕಾರಣಕ್ಕೂ ಮೊಬೈಲ್  ಸ್ವಿಚ್ ಆಫ್ ಮಾಡಬಾರದು ಎಂದು ಸೂಚನೆ ಸಹ ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.