ಅಕ್ರಮ ಮರಳು ಸಾಗಣೆ: 5 ಟಿಪ್ಪರ್ ವಶ

ಲಿಂಗಸುಗೂರು: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ನವಲಿ ಗ್ರಾಮದ ನಾಲಾದ ಮರಳನ್ನು ತಾಲ್ಲೂಕಿನ ಯಳಗುಂದಿ ಗ್ರಾಮದ ವಿದ್ಯುತ್ ಉತ್ಪಾದನಾ ಘಟಕಕ್ಕೆ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದ 5 ಟಿಪ್ಪರ್ ಗಳನ್ನು ತಹಶೀಲ್ದಾರ್ ಜಿ.ಎಸ್. ಮಹಾಜನ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ.
ಶುಕ್ರವಾರ ಲಿಂಗಸುಗೂರು ಮಾರ್ಗವಾಗಿ ತೆರಳುತ್ತಿದ್ದ ಟಿಪ್ಪರ್ಗಳ ದಾಖಲೆ ಪರಿಶೀಲಿಸಿದಾಗ ಪರವಾನಗಿ ದಾಖಲೆಳಲ್ಲಿ ಮರಳು ಕ್ವಾರಿ ಇರುವ ಗ್ರಾಮ ನವಲಿ ಎಂದು ನಮೂದಿಸಲಾಗಿದೆ. ಆದರೆ ಅದೇ ದಾಖಲೆಯಲ್ಲಿ ಈಚನಾಳ ಗ್ರಾಮದಿಂದ ಕೆಸರಟ್ಟಿ ಗ್ರಾಮಕ್ಕೆ
ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ದಾಖಲಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈ ಕಾರಣ ದಿಂದ ಟಿಪ್ಪರ್ಗಳನ್ನು ಜಪ್ತಿ ಮಾಡಿದ್ದಾಗಿ ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಗಳಲ್ಲಿನ ಮಾಹಿತಿ ಅಸ್ಪಷ್ಟವಾಗಿದ್ದು ಚಾಲಕರು ನೀಡುವ ಮಾಹಿತಿಗೆ ಹೊಂದಾಣಿಕೆ ಆಗುತ್ತಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಲಾಗುವುದು ಎಂದು ಕಂದಾಯ ಮೂಲಗಳು ಸ್ಪಷ್ಟಪಡಿಸಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.