ಹೊಸನಗರ: ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಅಕ್ಷಯ-ಅಕ್ಷರ ಯೋಜನೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕಮಟ್ಟ ಗಣನೀಯವಾಗಿ ಏರಬಲ್ಲದರು ಎಂದು ಲೋಕಸಭಾ ಸಭಾಧ್ಯಕ್ಷರ ಆಪ್ತ ಅಧಿಕಾರಿ ಕೆ.ಸಿ. ಪಾಂಡೆ ಅಭಿಪ್ರಾಯಪಟ್ಟರು.

ಸೋಮವಾರ ಸಮೀಪದ ಹಾರೆಕೊಡ್ಲು-ಕಾರಗಡಿ ಶಾಂಕರೀ ಧರ್ಮ ಪ್ರತಿಷ್ಠಾನಂ ಹಾಗೂ ಶ್ರೀ ತಿರುಜ್ಞಾನಂ ಫೌಂಡೇಷನ್ ಆಶ್ರಯದಲ್ಲಿ ತಿರುಜ್ಞಾನಂ ಶ್ರೀನಾಥ್ ಗುರೂಜಿ ನೇತೃತ್ವದಲ್ಲಿ ನಡೆದ ಅಕ್ಷಯ-ಅಕ್ಷರ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು. ತಿರುಜ್ಞಾನಂ ಶ್ರೀನಾಥ್ ಗುರೂಜಿ ನೇತೃತ್ವ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಸಿದ್ದರಾಮಣ್ಣ ಗುರೂಜಿ ರಚಿತ ವಚನಾಮೃತ ಪುಸ್ತಕ ಬಿಡುಗಡೆ ಮಾಡಿದರು. ಶಾಸಕ ಕಿಮ್ಮನೆ ರತ್ನಾಕರ್ ಶಾಲಾ ಮಕ್ಕಳ ಅಕ್ಷರ-ಜ್ಞಾನ ಯೋಜನೆ ಅನಾವರಣ ಮಾಡಿದರು.

ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ವಿಶ್ವ ಹಿಂದೂ ಪರಿಷತ್ ಉತ್ತರಖಂಡ್ ಮತ್ತು ಮಧ್ಯಪ್ರದೇಶ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವನಾರಾಯಣ್ ಸಿಂಗ್, ಕೇಂದ್ರ ಕಾರ್ಮಿಕ ಇಲಾಖೆಯ ಆಯುಕ್ತ ಜಿ.ಸಿ. ಶ್ರೀವಾತ್ಸವ್, ತಿರುಜ್ಞಾನಂ ಫೌಂಡೇಶನ್ ಟ್ರಸ್ಟಿ ಕುಚೇಲ ರೆಡ್ಡಿ ಹಾಜರಿದ್ದರು.

ಶಾಂಕರಿ ಪ್ರತಿಷ್ಠಾನದ ವ್ಯವಸ್ಥಾಪಕ ವಿಜಯಕುಮಾರ್ ಸ್ವಾಗತಿಸಿದರು. ಡಿ.ಎಂ. ಸದಾಶಿವ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ದತ್ತಾತ್ರೇಯ ಕಾರ್ಯಕ್ರಮ ನಿರೂಪಿಸಿದರು. ಡಿ.ಎಂ. ರತ್ನಾಕರ ಶೆಟ್ಟಿ ವಂದಿಸಿದರು.

ಸುಧೀರ್ ಎಸ್. ನಾಯಕ್ ಬೇಂಗ್ರೆ ಮತ್ತು ತಂಡದಿಂದ ಭಜನೆ, ಖ್ಯಾತ ಗಾಯಕ ಪಿ.ಬಿ. ಶ್ರೀನಿವಾಸ್ ಅವರು ಗೂರೂಜಿ ಕುರಿತು ರಚಿಸಿದ ಗೀತೆಗಳನ್ನು ಸವ್ಯಚಾಚಿ ತಂಡದಿಂದ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಜೆ ಉಸ್ತಾದ್ ಜಾಕೀರ್ ಹುಸೇನ್ ಅವರ ಶಿಷ್ಯ ಲಕ್ಷ್ಮೀಶರಾವ್ ಕಲ್ಲುಗುಂಡಿ ಕೊಪ್ಪ ಅವರಿಂದ ತಬಲವಾದನ, ಅಮೆರಿಕ ಸಂಗೀತ ಅಕಾಡೆಮಿ ಎಕ್ಸಲೆನ್ಸಿ ಅವಾರ್ಡ್ ಪುರಸ್ಕೃತ ಪ್ರಕಾಶ್ ಹೆಗಡೆ ಕಲ್ಲಾರೆಮನೆ ಅವರಿಂದ ಕೊಳಲು ವಾದನ ಭರತನಾಟ್ಯ ಅಕಾಡೆಮಿ ನಿರ್ದೇಶಕ ಗಾಯತ್ರಿ ಕೇಶವನ್ ನೃತ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.