ಗುಂಡ್ಲುಪೇಟೆ: ಜೂನ್ 14ರಂದು ನಡೆಯಲಿರುವ ತಾಲ್ಲೂಕಿನ 2ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಬಳಿ ಕೇಂದ್ರವಾದ ಹಂಗಳ ಗ್ರಾಮ ಸಜ್ಜುಗೊಂಡಿದೆ.

ಹಂಗಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಮ್ಮೇಳನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಸಮ್ಮೇಳನಾಧ್ಯಕ್ಷೆಯಾಗಿ ಆಶು ಕವಯತ್ರಿ ಎಂ. ಪುಟ್ಟತಾಯಮ್ಮ ಆಯ್ಕೆಯಾಗಿರುವುದು ತಾಲ್ಲೂಕಿನ ಸಾಹಿತ್ಯಾಸಕ್ತರ ಕುತೂಹಲ ಹೆಚ್ಚಿಸಿದೆ.

ಬೆಳಿಗ್ಗೆ 8 ಗಂಟೆಗೆ ತಹಶೀಲ್ದಾರ್ ಚಿದಾನಂದ್ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ನಂತರ ಸಮ್ಮೇಳನಾಧ್ಯಕ್ಷರನ್ನು ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಬಳಿಕ 10 ಗಂಟೆಗೆ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

`ಗುಂಡ್ಲುಪೇಟೆ ತಾಲ್ಲೂಕಿನ ಸಾಹಿತ್ಯಿಕ ನೆಲೆ' ಮತ್ತು `ಪ್ರವಾಸಿ ತಾಣವಾಗಿ ಗುಂಡ್ಲುಪೇಟೆ' ವಿಚಾರಗಳ ಬಗ್ಗೆ ಹಿರಿಯ ಸಾಹಿತಿಗಳಾದ ಮಹದೇವಸ್ವಾಮಿ ಕಟ್ನವಾಡಿ ಮತ್ತು ಡಾ.ಪಳನಿಸ್ವಾಮಿ ಅವರು ವಿಚಾರ ಮಂಡನೆ ಮಾಡಲಿದ್ದಾರೆ. ನಂತರ ತಾಲ್ಲೂಕಿನ ಉದಯೋನ್ಮುಖ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ. ಇದಾದ ಬಳಿಕ ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಸಮಾರಂಭದಲ್ಲಿ ಕವಯತ್ರಿ ಲತಾ ರಾಜಶೇಖರ್, ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್, ಸಂಸದ ಧ್ರುವನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೋಮಶೇಖರ ಬಿಸಲ್ವಾಡಿ, ಖ್ಯಾತ ಸಾಹಿತಿ ಮಲೆಯೂರು ಗುರುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಂಜಪ್ಪ, ಕವಯತ್ರಿಯರಾದ ಸವಿತಾ ಮೂಡ್ನಾಕೂಡು, ವಿಜಯಲಕ್ಷ್ಮೀ ಇತರರು ಭಾಗವಹಿಸಲಿದ್ದಾರೆ.

ಸಾಧಕಿಗೆ ಒಲಿದ ಗೌರವ
ಗುಂಡ್ಲುಪೇಟೆ: ತಾಲ್ಲೂಕಿನ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಹಿರಿಯ ಕವಯತ್ರಿ, ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಎಂ. ಪುಟ್ಟತಾಯಮ್ಮ ಅವರಿಗೆ ಸಮ್ಮೇಳನಾಧ್ಯಕ್ಷೆ ಗೌರವ ಒಲಿದು ಬಂದಿದೆ.

ಇಳಿವಯಸ್ಸಿನಲ್ಲೂ ಸಾಹಿತ್ಯವನ್ನೇ ಉಸಿರಾಗಿಸಿಕೊಂಡಿರುವ ಜೀವ ಪುಟ್ಟತಾಯಮ್ಮ ಅವರದು. ಸಭೆ ಸಮಾರಂಭಗಳಲ್ಲಿ ಆಶು ಕವಿತ್ವದ ಮೂಲಕ ಮಿಂಚು ಹರಿಸುವ ಪುಟ್ಟತಾಯಮ್ಮ ಅವರು, ಎಸ್ಎಸ್ಎಲ್ಸಿ ನಂತರ ಓದಿನಿಂದ ವಿಮುಖರಾದರು. ವಿವಾಹ ನಂತರ ಪತಿ ಶಿಕ್ಷಣತಜ್ಞ ಎಸ್.ಆರ್. ಶಿವಲಿಂಗಯ್ಯ ಅವರ ಪ್ರೇರಣೆಯಿಂದ ಕುಟುಂಬ ನಿರ್ವಹಣೆ ನಡುವೆ ತಮ್ಮನ್ನು ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡರು.

ಧರ್ಮ, ಆಧುನಿಕತೆ, ಅಂತರಂಗದ ವಿಕಸನ, ಇಂಡಿಯಾ ಮತ್ತು ಜಾಗತೀಕರಣವೆಂಬ ವೈಚಾರಿಕ ಪ್ರಬಂಧಗಳು, ಚುಕ್ಕಿ-ಚಂದ್ರಮ, ಚುಟುಕು-ಗುಟುಕು ಕವನ ಸಂಕಲನಗಳು, ಶಿವಸಂಪದ ಸ್ಮರಣ ಗ್ರಂಥ, ವಚನ ಚಂದ್ರಿಕೆಯೆಂಬ ಆಧುನಿಕ ವಚನ ರಚಿಸಿದ್ದಾರೆ. ಪ್ರಸಿದ್ಧ ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ಇವರ ಕವನ, ಲೇಖನಗಳು ಪ್ರಕಟವಾಗಿವೆ.

ಪ್ರಶಸ್ತಿ: ಇವರಿಗೆ ದೊರೆತಿರುವ ಪಾರಿತೋಷಕ, ಪ್ರಶಸ್ತಿ, ಗೌರವ ಹತ್ತು ಹಲವು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು, ದಸರಾ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿನ ಆಸಕ್ತಿಯಿಂದ 55ನೇ ವಯಸ್ಸಿನಲ್ಲಿ (1995) ಅಂಚೆ ತೆರೆಪಿನ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಪಟ್ಟಣ ಪುರಸಭೆಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಸಾಹಿತ್ಯ ಕ್ಷೇತ್ರದಲ್ಲಿನ ಆಸಕ್ತಿಯಿಂದ ಪ್ರಮುಖ ರಸ್ತೆ, ಬಡಾವಣೆಗಳಿಗೆ ಕವಿ, ಸಂತ, ಧಾರ್ಮಿಕ ನಾಯಕರ ಹೆಸರು ನಾಮಕರಣ ಮಾಡಲು ಕಾರಣರಾದರು.

73ರ ಇಳಿ ವಯಸ್ಸಿನಲ್ಲೂ ಪಟ್ಟಣದಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳು, ಇತರೆ ಸಭೆ, ಸಮಾರಂಭಗಳಲ್ಲಿ ತಪ್ಪದೇ ಭಾಗವಹಿಸುತ್ತಾರೆ. ಚುಟುಕು ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾಗಿ ಸಾಹಿತ್ಯ ಸೇವೆಯನ್ನು ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.