ಸೋಮವಾರ, ಜೂನ್ 14, 2021
21 °C

ಅಖಿಲೇಶ್ ಯಾದವ್ ಪ್ರಮಾಣ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಿಲೇಶ್ ಯಾದವ್ ಪ್ರಮಾಣ ಸ್ವೀಕಾರ

ಲಖ್ನೋ (ಐಎಎನ್ಎಸ್):  ಉತ್ತರಪ್ರದೇಶದ 33ನೇ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಗುರುವಾರ ರಾಜ್ಯಪಾಲ ಬಿ.ಎಲ್. ಜೋಷಿ ಅವರಿಂದ ಪ್ರಮಾಣವಚನ ಸ್ವೀಕರಿಸಿದರು.

ಮಧ್ಯಾಹ್ನ 11:34 ಕ್ಕೆ ಇಲ್ಲಿನ ಲಾ ಮಾರ್ಟಿನರಿ ಕಾಲೇಜಿನ ವಿಶಾಲ ಮೈದಾನದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ 38 ವರ್ಷ ವಯಸ್ಸಿನ ಅಖಿಲೇಶ್ ರಾಜ್ಯ ಕಂಡ ಅತ್ಯಂತ ಕಿರಿಯ ವಯಸ್ಸಿನ ಮುಖ್ಯಮಂತ್ರಿ ಎಂಬ ಹೆಸರಿಗೆ ಪಾತ್ರರಾದರು.

ಇವರ ಜತೆ 48 ಮಂದಿ ಸಚಿವರೂ ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಅಖಿಲೇಶ್ ತಂದೆ ಮುಲಾಯಂಸಿಂಗ್ ಯಾದವ್, ಕುಟುಂಬ ಸದಸ್ಯರು ವಿವಿಧ ಪಕ್ಷಗಳ ಮುಖಂಡರು ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.