ಸೋಮವಾರ, ಜೂನ್ 21, 2021
21 °C

ಅಖಿಲೇಶ್, ಶಿವಪಾಲ್, ಅಜಂ ಪ್ರಮಾಣ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ(ಪಿಟಿಐ): ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಅವರು ಈ ತಿಂಗಳ 15ರಂದು ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ನಾಯಕರಾದ ಶಿವಪಾಲ್ ಸಿಂಗ್ ಯಾದವ್ ಮತ್ತು ಮೊಹಮ್ಮದ್ ಅಜಂ ಖಾನ್ ಅವರು ಪ್ರಮಾಣವಚನ ಸ್ವೀಕರಿಸುವ ಸಂಭವ ಇದೆ.ಅಖಿಲೇಶ್ ಅವರೊಂದಿಗೆ ಪ್ರಮಾಣವಚನ ಸ್ವೀಕರಿಸುವ ಸಂಪುಟ ಸದಸ್ಯರ ಬಗ್ಗೆ ನಿರ್ಧರಿಸಲು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ನಿವಾಸದಲ್ಲಿ ಭಾನುವಾರ ಪಕ್ಷದ ನಾಯಕರು ಸಭೆ ಸೇರಿದ್ದರು.ಮುಲಾಯಂ, ಅಖಿಲೇಶ್ ಅವರಲ್ಲದೆ ಮೊಹಮ್ಮದ್ ಅಜಂ ಖಾನ್, ಶಿವಪಾಲ್ ಸಿಂಗ್ ಯಾದವ್, ರಾಮ್‌ಗೋಪಾಲ್ ಯಾದವ್, ನರೇಶ್ ಅಗರವಾಲ್ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.

ಸಂಪುಟ ಸದಸ್ಯರಾಗಿ ಅಹ್ಮದ್ ಹಸನ್, ವಕ್ವರ್ ಅಹ್ಮದ್ ಷಾ, ಅರವಿಂದ್ ಸಿಂಗ್ ಅವರೂ ಸೇರ್ಪಡೆಗೊಳ್ಳುವ ಬಗ್ಗೆ ಬಹುತೇಕ ನಿರ್ಧಾರ ಆಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.