ಅಚ್ಚರಿಗೆ ಕಾರಣವಾದ ವಲಸೆ

ಸೋಮವಾರ, ಮೇ 27, 2019
27 °C

ಅಚ್ಚರಿಗೆ ಕಾರಣವಾದ ವಲಸೆ

Published:
Updated:

ಚೆನ್ನೈ (ಪಿಟಿಐ): ಶಾಂತಿಯ ಸ್ವರ್ಗ ಹಾಗೂ ಹೊರಗಿನಿಂದ ಬಂದವರಿಗೆ ನೆಮ್ಮದಿಯ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತಮಿಳುನಾಡಿನಿಂದ ಈಶಾನ್ಯ ರಾಜ್ಯಗಳ ಜನ ವಲಸೆ ಹೋಗಿದ್ದು ಆಶ್ಚರ್ಯಕ್ಕೆ ಕಾರಣವಾಗಿದೆ.ಹೊರಗಿನವರಿಗೆ ಇಲ್ಲಿ ಅಸುರಕ್ಷಿತ ಭಾವನೆ ಮೂಡಲು ಕಾರಣ ಏನು ಎನ್ನುವುದು ಸ್ಥಳೀಯರಿಗೆ ಹಾಗೂ ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ.ಕೈಗಾರಿಕಾ ಘಟಕ, ಮಾಲ್ ಹಾಗೂ ಹೊಟೆಲ್‌ಗಳಲ್ಲಿ ಈಶಾನ್ಯ ರಾಜ್ಯದವರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯರೊಂದಿಗೆ ಸಾಮರಸ್ಯದಿಂದ ಇರುವ ಇವರು ನಿರರ್ಗಳವಾಗಿ ತಮಿಳು ಮಾತನಾಡುತ್ತಾರೆ.   ಮಮತಾ ವಿಷಾದ

ಕೋಲ್ಕತ್ತ (ಪಿಟಿಐ): ಅಸ್ಸಾಂ ಹಿಂಸಾಚಾರದ ಪರಿಣಾಮವಾಗಿ ಸಾಮೂಹಿಕವಾಗಿ ತಮ್ಮ ರಾಜ್ಯಗಳಿಗೆ ವಲಸೆಹೋದ ಈಶಾನ್ಯರಾಜ್ಯಗಳ ಜನರು ತೊಂದರೆಯಲ್ಲಿ ಸಿಕ್ಕಿಕೊಂಡಿರುವುದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ವಿಷಾದ ವ್ಯಕ್ತಿಪಡಿಸಿದ್ದಾರೆ.`ವದಂತಿಗಳಿಗೆ ಕಿವಿಗೊಡಬೇಡಿ. ದಯವಿಟ್ಟು ಶಾಂತಿ ಹಾಗು ಸಾಮರಸ್ಯವನ್ನು ಕಾಪಾಡಿ~ ಎಂದು ಈದ್‌ವೇಳೆ ಸೇರಿದ ಸಭೆಯಲ್ಲಿ ಭಾಗವಹಿಸಿ ಮನವಿ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry