ಬದನಾಜೆ ಶಂಕರ ಭಟ್ಟರ ಸಮಗ್ರ ಕೃಷಿ ಸಾಧನೆಯನ್ನು ಕಂಡಾಗ ನಿಜಕ್ಕೂ ಅಚ್ಚರಿಯಾಗಿತ್ತು. ಅವರ ಯಶಸ್ಸಿನ ಒಳಮರ್ಮವೇನೆಂದು ತಿಳಿಯುವ ಕುತೂಹಲದಿಂದ ಚರ್ಚೆಗಿಳಿದಾಗ ದೊರೆತ ಉತ್ತರ ಸ್ಫೂರ್ತಿದಾಯಕವಾಗಿತ್ತು.

ಹೌದು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶಂಕರ ಭಟ್ ಓದಿದ್ದು ಎಲ್ಎಲ್ಬಿಯಾದರೂ ಅಪ್ಪಿಕೊಂಡಿದ್ದು ಕೃಷಿಯನ್ನು.

ತಂದೆಯ ಕೃಷಿ ಚಟುವಟಿಕೆ ಹಾಗೂ ಅವರ ಅಸಂಖ್ಯಾತ ಗ್ರಂಥ ಭಂಡಾರಗಳ ಅಧ್ಯಯನವೇ ಕೃಷಿಗೆ ಪ್ರೇರಣೆ ಕೊಟ್ಟಿದ್ದು.

ಬದನಾಜೆಯಲ್ಲಿ ಇರುವ ಅವರ 30 ಎಕರೆ ಜಮೀನಿನಲ್ಲಿ ಬೆಳೆಗಳದ್ದೇ ವೈವಿಧ್ಯ. 5000 ಅಡಿಕೆ, ಅಲ್ಲದೇ ತೆಂಗು, ಕಾಳುಮೆಣಸು, ಕೋಕೊ, ಏಲಕ್ಕಿ, ಕಾಫಿ, ರಬ್ಬರ್, ಹಾಗೂ ಔಷಧೀಯ ಸಸ್ಯಗಳು ಫಸಲು ನೀಡುತ್ತಿವೆ. 5 ಹಸುಗಳ ಹೈನುಗಾರಿಕೆಯೂ ಇದೆ. ಇಷ್ಟಲ್ಲದೇ ಅವರು ಕೃಷಿ ಸಂಶೋಧನೆ ಹಾಗೂ ಕೃಷಿ ಅಧ್ಯಯನದಲ್ಲಿಯೂ ಬ್ಯುಸಿ.

ವಾಣಿಜ್ಯ ಬೆಳೆ ರಬ್ಬರ್ ಕೃಷಿಯಲ್ಲಿ ಆಸಕ್ತರಾಗಿ `105~ ತಳಿಯ 3000 ಗಿಡಗಳನ್ನು ಬೆಳೆಸಿದ್ದಾರೆ. ಮಳೆಗಾಲ ರಬ್ಬರ್ ಬೆಳೆಸಲು ಉತ್ತಮ ಕಾಲವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ 105 ತಳಿ ಅತ್ಯುತ್ತಮ. ರೋಗವೂ ಕಡಿಮೆ, ಫಸಲೂ ಹೆಚ್ಚು ಎನ್ನುತ್ತಾರೆ ಭಟ್ಟರು. ಔಷಧೀಯ ಸಸ್ಯ ಬೆಳೆಸುವುದರಲ್ಲೂ ಅವರಿಗೆ ವಿಶೇಷ ಆಸಕ್ತಿ.

ಅವರಲ್ಲಿ 150 ಜಾತಿಯ 300ಕ್ಕೂ ಅಧಿಕ ಸಸ್ಯಗಳಿವೆ. ಗಿಡಮೂಲಿಕೆಗಳ ಔಷಧಿ ತಯಾರಿ ಮತ್ತು ಪ್ರಯೋಗದಲ್ಲೂ ಎತ್ತಿದ ಕೈ. ನಾಗಾರ್ಜುನ, ಗರಗ, ಬಂದರಾಜ ಇತ್ಯಾದಿ ಅಪರೂಪದ ಸಸ್ಯ ಸಂಪತ್ತನ್ನು ಹೊಂದಿದ್ದಾರೆ. ಅಳಿವಿನಂಚಿನ ಫಲಸಾ ವೃಕ್ಷ (ಜ್ಞಾನವೃಕ್ಷ) ಅವರಲ್ಲಿದ್ದು, ಇದರ ಎಲೆಯ ಚೂರ್ಣ ನೆನಪಿನ ಶಕ್ತಿಯ ವೃದ್ಧಿಗೆ ಸಹಾಯಕವಂತೆ.

ಅಡಿಕೆ ವೈನ್
ಹೆಚ್ಚಿನ ಕೃಷಿಕರು ಅಡಿಕೆಗೆ ದರ ಜಾಸ್ತಿಯೆಂದು ನೇರವಾಗಿ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಆದರೆ ಶಂಕರ ಭಟ್ ಕೊಂಚ ವಿಭಿನ್ನ. ಅಡಿಕೆಯಿಂದ ವೈವಿಧ್ಯಮಯ ಪದಾರ್ಥಗಳನ್ನು ತಯಾರಿಸಿ ಉತ್ತಮ ಲಾಭ ಕಂಡುಕೊಂಡಿದ್ದಾರೆ.

ಅಲ್ಲದೇ ಅಡಿಕೆಯ ಮೌಲ್ಯವರ್ಧನೆಗಾಗಿ ವಿವಿಧ ಸಂಘ- ಸಂಸ್ಥೆಗಳೊಂದಿಗೆ ಕೈಜೋಡಿಸಿದ್ದಾರೆ. ಅಡಿಕೆಯ ಸತ್ವ ಸೇರಿಸಿ ಇವರು ತಯಾರಿಸಿದ ತುಳಸಿ, ಮಲ್ಲಿಗೆ, ಗುಲಾಬಿ ಪರಿಮಳಯುಕ್ತ `ಪೂಗ ಸಿಂಗಾರ್~ ಹೆಸರಿನ ಸ್ನಾನದ ಸಾಬೂನು ಸ್ಥಳೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ. ಇವುಗಳಿಗೆಂದೇ ಸರಿಸುಮಾರು 10 ಕ್ವಿಂಟಾಲ್ ಅಡಿಕೆ ಖರ್ಚಾಗುತ್ತಿದೆಯಂತೆ.

ಬಾಯಾರಿಕೆ ದಾಹವನ್ನು ತಣಿಸಲು ಅಡಿಕೆಯ ಸಾಫ್ಟ್ ಡ್ರಿಂಕ್ ಲಭ್ಯ. ಅಲ್ಲದೇ ಅಡಿಕೆಯಿಂದ ತಯಾರಿಸಿದ ಸೌಂದರ್ಯವರ್ಧಕ ವಸ್ತುಗಳೂ ಇವೆ. ಸುಟ್ಟಗಾಯ, ಹಿಮ್ಮಡಿ ಬಿರುಕನ್ನು ಗುಣಪಡಿಸುವ ಔಷಧಿಯನ್ನೂ ತಯಾರಿಸುತ್ತಾರೆ. ಅಡಿಕೆ ಹಾಗೂ ಇತರ ಹಣ್ಣುಗಳಿಂದ ಸ್ಯಾಂಪಲ್ಗಾಗಿ ತಯಾರಿಸಲಾದ ವೈನ್ ಕೂಡಾ ಇವರಲ್ಲಿದೆ!

ಕೊಳೆರೋಗದ ನಿವಾರಣೆಗೆ ಇವರೇ ಅಭಿವೃದ್ಧಿಪಡಿಸಿದ `ಫಲಿನಿ~ ಔಷಧಿ 8 ವರ್ಷದಿಂದ ಬಳಕೆಯಲ್ಲಿದೆ. `ವ್ಯಾಪಾರ ವ್ಯವಹಾರ ಮಾಡುವ ಉದ್ದೇಶದಿಂದ ಅಡಿಕೆ ಉತ್ಪನ್ನಗಳಿಗೆ ಕೈಹಾಕಿಲ್ಲ. ಈ ಬೆಳೆಯು ಬೆಳೆಗಾರರಿಗೆ ಹೆಚ್ಚು ಲಾಭ ತಂದುಕೊಡುವ ಮಾರ್ಗ ಹುಡುಕಬೇಕು ಎನ್ನುವುದೇ ನನ್ನ ಗುರಿ~ ಎನ್ನುತ್ತಾರೆ ಭಟ್ಟರು.

ಒಳ್ಳೆಯ ಕೃಷಿ ಲೇಖಕರೂ ಆಗಿರುವ ಅವರು ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಮಂಗಳೂರಿನ ಕಿಡ್ನಿ ಫೌಂಡೇಶನ್ ಹಾಸ್ಪಿಟಲ್, ಕಾಲೇಜು, ಚಾರಿಟೇಬಲ್ ಟ್ರಸ್ಟ್ ಸಂಸ್ಥೆಗಳಲ್ಲೂ ಕ್ರಿಯಾಶೀಲರಾಗಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಪ್ರಯೋಗಗಳ ಮಾರ್ಗದರ್ಶಕ.

ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಕೃಷಿ ಪಂಡಿತ, ಸಾಹಿತ್ಯ ಪರಿಷತ್ ಪ್ರಶಸ್ತಿ ಮಾತ್ರವಲ್ಲದೆ ಅನೇಕ ಬಿರುದುಗಳಿಗೂ ಪಾತ್ರರಾಗಿದ್ದಾರೆ. ಇವರನ್ನು ಸಂಪರ್ಕಿಸಲು 08255 239229 ಸಂಖ್ಯೆಗೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.