ಗುರುವಾರ , ಮೇ 28, 2020
27 °C

ಅತಿಕ್ರಮಣ ತೆರವಿಗೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಸರ್ವೋಚ್ಚ ನ್ಯಾಯಾ ಲಯದ ಆದೇಶದನ್ವಯ ಪಟ್ಟಣ ಪ್ರಮುಖ ರಸ್ತೆಗಳ ವಿಸ್ತರಣೆಗೆ ಜಿಲ್ಲಾ ಡಳಿತ ಮುಂದಾಗಿತ್ತು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರದಲ್ಲಿ ವಿಸ್ತರಣೆ ಮಾಡಲು ಮುಂದಾಗಿರುವ ತಾಲ್ಲೂಕು ಆಡಳಿತ ಪುನಃ ನಾಗರಿಕರ ಬೇಡಿಕೆಗೆ ಸ್ಪಂದಿಸಿ ಭಾನುವಾರ ದೊಳಗೆ ಅತಿಕ್ರಮಣ ತೆರವುಗೊಳಿಸು ವಂತೆ ತಹಸೀಲ್ದಾರ್ ಎಂ.ರಾಚಪ್ಪ ಗಡುವು ನೀಡಿದ್ದಾರೆ.ಗುರುವಾರ ಬೆಳಿಗ್ಗೆ ಏಕಾಏಕಿ ಅತಿಕ್ರಮಣಗೊಂಡ ಪಟ್ಟಣದ ಗುರು ಗುಂಟಾ ರಸ್ತೆ ತೆರವು ಕಾರ್ಯಾ ಚರಣೆಗೆ ತಹಸೀಲ್ದಾರ್ ನೇತೃತ್ವದ ಸಿಬ್ಬಂದಿ ಆಗಮಿಸಿತ್ತು. ಹಿಂದೂ ಸಂಸ್ಕೃತಿಯ ಸಂಕ್ರಾಂತಿ ಹಬ್ಬದ ಆಚರ ಣೆಯಲ್ಲಿ ಜನತೆ ತೊಡಗಿದ್ದಾರೆ. ಇಂಥ ಸಂದರ್ಭದಲ್ಲಿ ಕಟ್ಟಡ ನೆಲಸಮಕ್ಕೆ ಮುಂದಾದರೆ ತೊಂದರೆ ಆಗುತ್ತದೆ ಎಂದು ಮುಖಂಡರು ಮನವಿ ಮಾಡಿಕೊಂಡರು.ಹಬ್ಬದ ಪ್ರಯುಕ್ತ ಭಾನುವಾರ ದವರೆಗೆ ತಡೆಯಲಾಗುವುದು. ಭಾನು ವಾರದೊಳಗೆ ಸ್ವತಃ ತೆರವುಗೊಳಿಸಲು ಮುಂದಾದರೆ ಸಮಸ್ಯೆ ಇರುವುದಿಲ್ಲ. ಈಗಾಗಲೆ ನೀಡಿರುವ ಗುರುತಿನ ಪ್ರಕಾರ ಮಾಲೀಕರು ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಬೇಕು. ಇಷ್ಟಕ್ಕೂ ಮೌನ ವಹಿಸಿದರೆ ಸೋಮ ವಾರದಿಂದ ತೆರವು ಕಾರ್ಯಾ ಚರಣೆಗೆ ಚಾಲನೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪುರಸಭೆ ಮಾಜಿ ಅದ್ಯಕ್ಷ ಮಲ್ಲಣ್ಣ ವಾರದ, ಹಿರಿಯ ಸದಸ್ಯರಾದ ಖಾದ ರಪಾಷ, ಕುಮಾರಸ್ವಾಮಿ ಸಾಲ್ಮನಿ. ಮುಖಂಡರಾದ ದೊಡ್ಡನ ಗೌಡ ಹೊಸಮನಿ, ಕುಪ್ಪೆರಾವ್ ಕುಲಕರ್ಣಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.