ಮಂಡ್ಯ: ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಸಹ ಶಿಕ್ಷಕರ (ಗ್ರೇಡ್ -2) ಹಾಗೂ ಉಪನ್ಯಾಸಕರ ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ವಿಷಯವಾರು ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿನ ಅತಿಥಿ ಸಹ ಶಿಕ್ಷಕರಿಗೆ ಮಾಸಿಕ 6 ಸಾವಿರ ರೂಪಾಯಿಯನ್ನು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿನ ಅತಿಥಿ ಉಪನ್ಯಾಸಕರಿಗೆ ಮಾಸಿಕ 7 ಸಾವಿರ ರೂಪಾಯಿ ನೀಡಲಾಗುತ್ತದೆ.
ಈ ಅತಿಥಿ ಸಹ ಶಿಕ್ಷಕರ, ಉಪನ್ಯಾಸಕರ ನೇಮಕಾತಿ ಅವಧಿಯು, ಕಾಯಂ ನೌಕರರ ನೇಮಕಾತಿ ಆಗುವವರೆಗೆ ಅಥವಾ 2012- 13ನೇ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಮಾತ್ರ ಎಂದು ನಿರ್ಧರಿಸಲಾಗಿದೆ.

ಮಂಜೂರಾದ ಖಾಲಿ ಹುದ್ದೆಗಳಿಗೆ ಈ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ವಿದ್ಯಾರ್ಹತೆ ಹೊಂದಿರುವುದು ಕಡ್ಡಾಯವಾಗಿದೆ. ಸಹ ಶಿಕ್ಷಕರು, ಉಪನ್ಯಾಸಕರು ಇಲ್ಲದಿರುವ ಸ್ಥಳದಲ್ಲೂ, ನಿಯೋಜನೆಯಂಥ ಬದಲಿ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲದಿರುವ ಸ್ಥಳಗಳಲ್ಲಿ ತಾತ್ಕಾಲಿಕ ನೇಮಕಾತಿಗೆ ಅನುಮೋದನೆ ನೀಡಲಾಗಿದೆ. ಮುಖ್ಯ ಶಿಕ್ಷಕರು, ಪ್ರಾಚಾರ್ಯರನ್ನು ನೇಮಕಾತಿ ಅಧಿಕಾರ ನೀಡಲಾಗಿದೆ.

ನೇಮಕಾತಿ ಸಂದರ್ಭದಲ್ಲಿ ಸ್ಥಳೀಯ ಅರ್ಹರಿಗೆ ಆದ್ಯತೆ ನೀಡಬೇಕಿದೆ. ಆಯ್ಕೆಯಾದ ಶಿಕ್ಷಕರು/ಉಪನ್ಯಾಸಕರು ನಿಗದಿಪಡಿಸಲಾದ ಬೋಧನಾ ಅವಧಿಯಲ್ಲಿ ಮಾತ್ರ ಕರ್ತವ್ಯ ನಿರ್ವಹಿಸಬೇಕಿದೆ. ಸಹ ಶಿಕ್ಷಕರು/ಉಪನ್ಯಾಸಕರು ದೀರ್ಘ ರಜಾ ಅವಧಿ ಮತ್ತು ಉನ್ನತ ವ್ಯಾಸಂಗಕ್ಕೆ ನಿಯೋಜನೆಗೊಂಡ ಶಾಲಾ/ಕಾಲೇಜುಗಳಲ್ಲಿ ಹಾಗೂ ಇತರೆ ಕಾರಣಗಳಿಂದ ಶಿಕ್ಷಕರ ಅಲಭ್ಯತೆ ಇದ್ದಾಗ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಬಹುದಾಗಿದೆ.

ಪ್ರೌಢಶಾಲೆ: ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಟ್ಟು 100 ಸಹ ಶಿಕ್ಷಕರ ಕೊರತೆ ಇದ್ದರೂ, ಸಹ ಶಿಕ್ಷಕರ (ಗ್ರೇಡ್ -2) ಹುದ್ದೆಗಳಾದ ಇಂಗ್ಲಿಷ್ ವಿಷಯ -79, ಹಿಂದಿ ವಿಷಯ -11 ಮತ್ತು ಕನ್ನಡ ವಿಷಯ -ನಾಲ್ಕು ಹುದ್ದೆಗಳಿಗೆ ಮಾತ್ರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಜಿಲ್ಲೆಗೆ ಹಂಚಿಕೆ ಮಾಡಿರುವ ಅತಿಥಿ ಶಿಕ್ಷಕ್ಷರ ಸಂಖ್ಯೆ 117 ಇದ್ದರೂ, ಮರು ಹೊಂದಾಣಿಕೆ ನಂತರ ನೇಮಕಾತಿಗೆ ಉಳಿಯಬಹುದಾದ 94 ಖಾಲಿ ಹುದ್ದೆಗಳಿಗೆ ಮಾತ್ರ ಅತಿಥಿ ಶಿಕ್ಷಕರ ನೇಮಕಾತಿ ನಡೆಯಲಿದೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳ ಹುದ್ದೆಗಳು ಖಾಲಿ ಇಲ್ಲದಿರುವುದರಿಂದ ಈ ನೇಮಕಾತಿ ಅನ್ವಯಿಸುವುದಿಲ್ಲ.

ಕಾಲೇಜು: ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಗಳ (ನಿಯೋಜನೆಯಿಂದ ತುಂಬಿರುವ ಹುದ್ದೆಗಳನ್ನು ಬಿಟ್ಟು) ಸಂಖ್ಯೆ ಒಟ್ಟು 41ಇದೆ. ವಾಣಿಜ್ಯ -4, ವಾಣಿಜ್ಯಶಾಸ್ತ್ರ -4, ಜೀವಶಾಸ್ತ್ರ -5, ಭೂಗೋಳಶಾಸ್ತ್ರ -3, ಕನ್ನಡ -2, ಕನ್ನಡ (2)-1, ರಾಜ್ಯಶಾಸ್ತ್ರ -2, ಗಣಿತ -5 ಮತ್ತು ಸಂಸ್ಕೃತ -1 ಹುದ್ದೆ ಖಾಲಿಯಿದೆ.

ಮಂಡ್ಯ ತಾಲ್ಲೂಕಿನಲ್ಲಿ ದುದ್ದ, ಕನ್ನಲಿ: ಮದ್ದೂರು ತಾಲ್ಲೂಕಿನಲ್ಲಿ ಚಂದೂಪುರ, ಕೆಸ್ತೂರು, ಮದ್ದೂರು, ಕೊಪ್ಪ, ಭಾರತೀನಗರ; ಮಳವಳ್ಳಿ ತಾಲ್ಲೂಕಿನಲ್ಲಿ ಮಳವಳ್ಳಿ, ದುಗ್ಗನಹಳ್ಳಿ; ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕೆ.ಆರ್.ಪೇಟೆ, ಕಿಕ್ಕೇರಿ, ಸಂತೇಬಾಚಹಳ್ಳಿ, ಅಕ್ಕಿಹೆಬ್ಬಾಳು, ಹರಿಹರಪುರ, ಬಲ್ಲೇನಹಳ್ಳಿ; ನಾಗಮಂಗಲ ತಾಲ್ಲೂಕಿನಲ್ಲಿ ಚಿಣ್ಯ, ನಾಗಮಂಗಲ, ಮೈಲಾರಪಟ್ಟಣ; ಪಾಂಡವಪುರ ತಾಲ್ಲೂಕಿನಲ್ಲಿ ಪಾಂಡವಪುರ, ಅರಳಕುಪ್ಪೆ, ಸುಂಕಾತೊಣ್ಣೂರು; ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಶ್ರೀರಂಗಪಟ್ಟಣ, ಅರಕೆರೆ, ಕೊಡಿಯಾಲ ಗ್ರಾಮದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 41 ಹುದ್ದೆಗಳು ಖಾಲಿಯಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.