ಸೋಮವಾರ, ಮಾರ್ಚ್ 8, 2021
30 °C

ಅತಿಸಾರದಿಂದ ಮಕ್ಕಳ ಸಾವು; ಸಚಿನ್ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿಸಾರದಿಂದ ಮಕ್ಕಳ ಸಾವು; ಸಚಿನ್ ವಿಷಾದ

ನವದೆಹಲಿ (ಪಿಟಿಐ): ಪ್ರತಿದಿನವೂ 1600 ಮಕ್ಕಳು ಅತಿಸಾರದಿಂದ ಸಾವನ್ನಪ್ಪುತ್ತಿರುವುದು  ವಿಷಾದದ ಸಂಗತಿ ಎಂದು ಯುನಿಸೆಫ್ ಪ್ರಚಾರ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದರು.ಐಸಿಸಿ ಮತ್ತು ಯುನಿಸೆಫ್ ಸಹ ಭಾಗಿತ್ವದಲ್ಲಿ ಸೋಮವಾರ ದೆಹಲಿಯಲ್ಲಿ  ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳು ಶುಚಿತ್ವ ಕಾಪಾಡಿಕೊಳ್ಳ ಬೇಕು. ತಾಯಂದಿರು ಮಕ್ಕಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆಯ ಕುರಿತು ತಿಳಿವಳಿಕೆ ಮೂಡಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಂದು ಕುಟುಂಬದಲ್ಲಿಯೂ ಅಮ್ಮಂದಿರ ಪಾತ್ರ ಮಹತ್ವದ್ದು’ ಎಂದರು.‘ಬಯಲು ಶೌಚಾಲಯಕ್ಕೆ ತಡೆ, ಪ್ರತಿಯೊಂದು ಹಳ್ಳಿಗಳು, ಮನೆಗಳಲ್ಲಿ ನೈರ್ಮಲ್ಯದ ವಾತಾವರಣ ನಿರ್ಮಿಸುವುದರಿಂದ ಅತಿಸಾರದಂತಹ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಸಾಧ್ಯವಿದೆ. ಇದಕ್ಕಾಗಿ ಸರ್ಕಾರ, ಸಾರ್ವಜನಿಕರು, ವಿವಿಧ ಕ್ಷೇತ್ರಗಳ ಗಣ್ಯರು ಒಂದಾಗಿ ಶ್ರಮಿಸಬೇಕು’ ಎಂದು ಸಚಿನ್ ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.