ಭಾನುವಾರ, ಮೇ 16, 2021
22 °C
ವಿಶ್ವ ಪರಿಸರ ದಿನಾಚರಣೆ

`ಅತಿ ಆಸೆಗೆ ಅರಣ್ಯ ಸಂಪತ್ತು ನಾಶ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮನುಷ್ಯನ ಅತಿ ಆಸೆಗೆ ಅರಣ್ಯ ಸಂಪತ್ತು ಬಲಿಯಾಗುತ್ತಿದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ನಾಗರಿಕರ ಮೇಲಿದೆ ಎಂದು ಪ್ರಧಾನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಆರ್.ಎಂ.ಶೆಟ್ಟರ್ ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಕರ್ನಾಟಕ ಅರಣ್ಯ ಇಲಾಖೆ ಸಂಯುಕ್ತವಾಗಿ ಸ್ವಾಮಿ ವಿವೇಕಾನಂದ ಬಡಾವಣೆಯ ನ್ಯಾಯಾಧೀಶರ ವಸತಿ ಸಮುಚ್ಛಯದ ಆವರಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಹೆಚ್ಚು ಹೆಚ್ಚು ಸಸಿಗಳನ್ನು ಜನರು ನೆಡುವುದರ ಮೂಲಕ ಅದರ ಲಾಲನೆ-ಪಾಲನೆ ಮಾಡಬೇಕು. ನೆಟ್ಟ ಸಸಿಗಳನ್ನು ಮಗುವಿನಂತೆ ಪ್ರತಿಯೊಬ್ಬರು ಕಾಪಾಡಬೇಕು ಎಂದರು.ಶಿವಮೊಗ್ಗ ವಿಭಾಗದ ಉಪವಲಯ ಅರಣ್ಯಾಧಿಕಾರಿ ಕೆ.ವಿ.ಮಲ್ಲಿಕಾರ್ಜುನ್ ಮಾತನಾಡಿ, ಮರ ಗಿಡಗಳನ್ನು ಬೆಳೆಸಿ, ರಕ್ಷಿಸುವುದು ಕೇವಲ ಅರಣ್ಯ ಇಲಾಖೆ ಕೆಲಸವಲ್ಲ. ಅದರ ಪೋಷಣೆಗೆ ಪ್ರತಿಯೊಬ್ಬರು ಮುಂದೆ ಬರಬೇಕು ಎಂದರು.ಪರಿಸರದ ಸಮತೋಲನ ಗಿಡ, ಮರಗಳಿಂದ ಸಾಧ್ಯ. ಮನುಷ್ಯ ಪ್ರಕೃತಿಯ ಕೂಸು. ಪರಿಸರದ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು. ಎ.ಸಿ.ಎಫ್. ಅಬ್ದುಲ್ ರವೂಫ್ ಮಾತನಾಡಿದರು.ನ್ಯಾಯಾಧೀಶರಾದ ಸಾವಿತ್ರಿ ಎಸ್. ವಿನಾಯಕ್, ಎಚ್.ಎಂ. ನಂಜುಂಡಸ್ವಾಮಿ, ಜಿ.ಜಿ.ಕುರುವಟ್ಟಿ, ಸಿ.ರಾಜಶೇಖರ್, ಕೆ.ಸುಬ್ರಮಣ್ಯ, ಇಂದಿರಾ ಮೈಲ್‌ಸ್ವಾಮಿ ಚಟ್ಟಿಯಾರ್, ವಾಣಿ ಎ. ಶೆಟ್ಟಿ, ಬಿ.ವಿಜಯಕುಮಾರ್ ರಾಯ್, ಪೂರ್ಣಿಮಾ ಎನ್. ಪೈ, ಎ.ಅರುಣ್ ಕುಮಾರಿ, ಜಿ.ಎಸ್.ಗುರುರಾಜ್ ಉಪಸ್ಥಿತರಿದ್ದರು.ಉಪ ವಲಯ ಅರಣ್ಯಾಧಿಕಾರಿ ಹಾಲೇಶ್‌ನಾಯ್ಕ ಪ್ರಾರ್ಥಿಸಿದರು. ಶಂಕರ ವಲಯದ ಅರಣ್ಯಾಧಿಕಾರಿ ಆರ್.ಎನ್.ಗೊಂಡಾ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.